ಕರ್ನಾಟಕ

karnataka

ETV Bharat / entertainment

Jawan prevue: 'ಜವಾನ್'​ ಪ್ರಿವ್ಯೂಗೆ ಪತ್ನಿ ಮತ್ತು ಮಗನ ಪ್ರತಿಕ್ರಿಯೆ ಬಹಿರಂಗಪಡಿಸಿದ ಶಾರುಖ್​ ಖಾನ್​ - ಶಾರುಖ್ ಟ್ವಿಟರ್‌

ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂಗೆ ಪತ್ನಿ ಗೌರಿ ಖಾನ್ ಮತ್ತು ಮಗ ಅಬ್ರಾಂ ಖಾನ್​ರ ಪ್ರತಿಕ್ರಿಯೆಯನ್ನು ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ

Jawan prevue
'ಆಸ್ಟ್​ ಎಸ್​ಆರ್​ಕೆ' ಸೆಷನ್

By

Published : Jul 13, 2023, 7:59 PM IST

ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂ ಈಗಾಗಲೇ ಬಿಡುಗಡೆಯಾಗಿ ಟ್ರೆಂಡಿಂಗ್​ನಲ್ಲಿದೆ. 2 ನಿಮಿಷಗಳ ಈ ವಿಡಿಯೋದಲ್ಲಿ ಕಿಂಗ್​ ಖಾನ್​ ಲುಕ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರದ ಸಂಭಾಷಣೆಗಳು ಮತ್ತು ಸಾಹಸ ದೃಶ್ಯಗಳು ರೋಚಕವಾಗಿದೆ. ಆ್ಯಕ್ಷನ್​ ಪ್ಯಾಕ್ಡ್​ 'ಜವಾನ್​' ಪ್ರಿವ್ಯೂ ಜನರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದಿದೆ.

'ಆಸ್ಕ್​​ ಎಸ್​ಆರ್​ಕೆ' ಸೆಷನ್​:ಗುರುವಾರ, ಶಾರುಖ್ ಟ್ವಿಟರ್‌ನಲ್ಲಿ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ಅನ್ನು ನಡೆಸಿದರು. ಅಲ್ಲಿ ಅಭಿಮಾನಿಗಳು ಕೇಳಿದ ಜವಾನ್​ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಶ್ನೋತ್ತರ ಸುತ್ತಿನಲ್ಲಿ, ಶಾರುಖ್ ಅವರು ತಮ್ಮ ಪತ್ನಿ ಗೌರಿ ಖಾನ್ ಮತ್ತು ಕಿರಿಯ ಮಗ ಅಬ್ರಾಂ ಖಾನ್​ 'ಜವಾನ್' ಪ್ರಿವ್ಯೂ ಅನ್ನು ಮೆಚ್ಚಿಕೊಂಡಿರುವುದಾಗಿ ಬಹಿರಂಗಪಡಿಸಿದರು.

"ಶಾರುಖ್​ ಸರ್ ಜವಾನ್ ಚಿತ್ರದ ಪ್ರಿವ್ಯೂ ನೋಡಿದ ಮೇಲೆ ಗೌರಿ ಅವರ ಪ್ರತಿಕ್ರಿಯೆ ಏನು?" ಎಂದು ನೆಟಿಜನ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಂಗ್​ ಖಾನ್​, "ಜವಾನ್​ ಬಹಳಷ್ಟು ಮಹಿಳಾ ಶಕ್ತಿಯನ್ನು ತೋರಿಸುತ್ತದೆ ಎಂಬ ಅಂಶವನ್ನು ಗೌರಿ ಪ್ರೀತಿಸುತ್ತಾರೆ" ಎಂದು ಹೇಳಿದರು. ಮತ್ತೊಬ್ಬ ಬಳಕೆದಾರರು ಅಬ್ರಾಂ ಖಾನ್​ ಅವರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಕುತೂಹಲ ಹೊಂದಿದ್ದರು.

"ಜವಾನ್​ ಪ್ರಿವ್ಯೂ ಅನ್ನು ಅಬ್ರಾಂ ಖಾನ್​ ಹೇಗೆ ಸ್ವೀಕರಿಸಿದರು?" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾರುಖ್​ ಖಾನ್​, ಅವರು ಅನಿರುದ್ಧ್ ನೀಡಿದ ಶೀರ್ಷಿಕೆ ಸಂಗೀತವನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಶಿಳ್ಳೆ! ಎಂದು ಹೇಳಿದರು. ಇನ್ನೂ ಅನೇಕ ಸೋಷಿಯಲ್​ ಮೀಡಿಯಾ ಬಳಕೆದಾರರು ಸಿನಿಮಾ ಮತ್ತು ವ್ಯೆಯಕ್ತಿಕ ವಿಚಾರವಾಗಿ ಪ್ರಶ್ನಿಸಿದ್ದಾರೆ. ಇದೆಲ್ಲದಕ್ಕೂ ಶಾರುಖ್​ ಖಾನ್​ ಉತ್ತರಿಸಿದ್ದಾರೆ.

ಇದನ್ನೂ ಓದಿ:OMG 2: ಅಕ್ಷಯ್​ ಕುಮಾರ್ ಸಿನಿಮಾಗೆ ಸಂಕಷ್ಟ.. 'OMG 2' ಬಿಡುಗಡೆಗೆ ಸೆನ್ಸಾರ್​ ಮಂಡಳಿ ತಡೆ

ಕಿಂಗ್ ಖಾನ್ ಅವರ ಜವಾನ್​​ ಸಿನಿಮಾ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸೂಪರ್​ ಹಿಟ್ ಪಠಾಣ್​​ ಬಳಿಕ ಈ ಸಾಲಿನಲ್ಲೇ ಬಿಡುಗಡೆ ಆಗುತ್ತಿರುವ ಶಾರುಖ್​ ಅವರ ಮತ್ತೊಂದು ಬಿಗ್​ ಬಜೆಟ್​ ಚಿತ್ರವಿದು. ಕಂಪ್ಲೀಟ್​ ಆ್ಯಕ್ಷನ್ ಎಂಟರ್‌ಟೈನ್​ ಸಿನಿಮಾ ಇದು. ಶಾರುಖ್​ ಖಾನ್ ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಈ ಸಿನಿಮಾ ನಿರ್ಮಿಸಿದ್ದು, ಸೌತ್​ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ.

ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್​ ಅಲ್ಲದೇ ಡಂಕಿ ಸಿನಿಮಾದಲ್ಲೂ ಶಾರುಖ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2023ರ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಶಾರುಖ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಈ ಎರಡೂ ಸಿನಿಮಾಗಳ ನಾನ್ ಥಿಯೇಟ್ರಿಕಲ್ ರೈಟ್ಸ್ 480 ಕೋಟಿ ರೂ.ಗೆ ಮಾರಾಟವಾಗಿದೆಯಂತೆ. ಮತ್ತೊಂದೆಡೆ ಸಲ್ಮಾನ್​ ಮುಖ್ಯಭೂಮಿಕೆಯ ಟೈಗರ್ 3 ಚಿತ್ರದಲ್ಲಿ ಶಾರುಖ್​ ವಿಶೇಷ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:'Hi Nanna': ನಾನಿಯ 'ಹಾಯ್ ನಾನ್ನ'ಗೆ ಮೃಣಾಲ್​ ಠಾಕೂರ್​ ನಾಯಕಿ: ಅಪ್ಪ-ಮಗಳ ಬಾಂಧವ್ಯದ ಕಥೆಯಿದು..

ABOUT THE AUTHOR

...view details