ಹೈದರಾಬಾದ್: 'ಕಿಂಗ್ ಖಾನ್' ಶಾರುಖ್ ಖಾನ್ ಮತ್ತೆ ಹೊಸ ಅವತಾರದಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. 2018 ರಲ್ಲಿ ಶಾರುಖ್ ನಟನೆಯ 'ಝೀರೋ' ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಅದು ಬಾಕ್ಸ್ ಆಫೀಸ್ನಲ್ಲಿ ಅಷ್ಟು ಹಿಟ್ ಆಗಿರಲಿಲ್ಲ. ಈ ಸಿನಿಮಾವಾದ ಬಳಿಕ ಅಭಿಮಾನಿಗಳನ್ನು ಎರಡು ವರ್ಷಗಳ ಕಾಲ ಕಾಯಿಸಿದ ನಟ ಶಾರುಖ್ ಖಾನ್ ಇತ್ತೀಚೆಗೆ 'ಪಠಾಣ್' ಮತ್ತು 'ಡಂಕಿ' ಚಿತ್ರಗಳನ್ನು ಘೋಷಿಸಿದರು.
ಇದರ ಬೆನ್ನಲ್ಲೇ ಶುಕ್ರವಾರ ಮತ್ತೊಂದು ಘೋಷಣೆ ಮಾಡಿದ್ದು, 'ಜವಾನ್' ಸಿನಿಮಾವನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಸಿನಿಮಾವು ಜೂನ್ 2, 2023 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ಪ್ರಾಜೆಕ್ಟ್‌ಗಾಗಿ ಅವರು ದಕ್ಷಿಣ ಭಾರತದ ನಿರ್ದೇಶಕರಾದ ಅಟ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಶಾರುಖ್ ಖಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.