ಕರ್ನಾಟಕ

karnataka

ETV Bharat / entertainment

ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರೊಂದಿಗೆ ಶಾರುಖ್ ಖಾನ್ - Shah Rukh Khan

ಆ್ಯಸಿಡ್ ದಾಳಿ ಸಂತ್ರಸ್ತರೊಂದಿಗೆ ನಟ ಶಾರುಖ್ ಖಾನ್ ಸಮಯ ಕಳೆದಿದ್ದಾರೆ.

Shah Rukh with acid attack victims
ಆ್ಯಸಿಡ್ ದಾಳಿ ಸಂತ್ರಸ್ತರೊಂದಿಗೆ ಶಾರುಖ್​ ಖಾನ್

By

Published : Apr 9, 2023, 6:04 PM IST

'ಪಠಾಣ್' ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಶಾರುಖ್ ಖಾನ್ ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ತಮ್ಮ ತಂಡವನ್ನು ಹುರಿದುಂಬಿಸಲು ಕೋಲ್ಕತ್ತಾಗೆ ತೆರಳಿದ್ದರು. ಕೋಲ್ಕತ್ತಾದಿಂದ ಸೂಪರ್‌ಸ್ಟಾರ್‌ ನಟಿಸಿರುವ ಅನೇಕ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ. ಈ ಸಂದರ್ಭದಲ್ಲಿ ಕಿಂಗ್ ಖಾನ್ ಅವರ ಕೋಲ್ಕತ್ತಾ ಪ್ರವಾಸದ ಒಂದು ಸುಂದರ ಚಿತ್ರ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರೊಂದಿಗೆ ಇರುವುದನ್ನು ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಅಭಿಮಾನಿ ಪೇಜ್​ ಒಂದು, ಶಾರುಖ್ ಅವರ ಕೆಲ ಚಿತ್ರಗಳನ್ನು ಹಂಚಿಕೊಂಡಿದೆ. ಇದರಲ್ಲಿ ನಟ ತಮ್ಮ ಮೀರ್ ಫೌಂಡೇಶನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಆ್ಯಸಿಡ್ ದಾಳಿಯಿಂದ ಬದುಕುಳಿದವರ ಜೊತೆ ಶಾರುಖ್​ ಖಾನ್ ಪೋಸ್ ಕೊಟ್ಟ ಫೋಟೋವಿದು. ಕಿಂಗ್ ಖಾನ್ ಅವರೊಂದಿಗೆ ಸಂವಾದ ನಡೆಸಿ ಗ್ರೂಪ್ ಫೋಟೋ ಸಹ ಕ್ಲಿಕ್ಕಿಸಿಕೊಂಡರು. ಈ ಚಿತ್ರಗಳನ್ನು ಹಂಚಿಕೊಂಡ ಶಾರುಖ್ ಫ್ಯಾನ್ ಪೇಜ್, 'ಜೋ ದಿಲ್ ಜೀತೇ ಹೈ ವೋ ಕಭಿ ಹಾರ್ತೆ ನಹೀ' (ಹೃದಯ ಗೆದ್ದವರಿಗೆ ಸೋಲಿಲ್ಲ) ಎಂಬ ಸುಂದರ ಶೀರ್ಷಿಕೆ ನೀಡಿದೆ.

ಶಾರುಖ್ ಖಾನ್ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹೆಸರಿನ ಮೀರ್ ಫೌಂಡೇಶನ್ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ. ಶಾರುಖ್​ ಖಾನ್​ ಅವರ ಸಂಸ್ಥೆ ಇತ್ತೀಚೆಗೆ ಪ್ರಕರಣವೊಂದರ ಸಂತ್ರಸ್ತೆ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯ ಮಾಡಿದೆ.

ಶಾರುಖ್​ ಇತ್ತೀಚೆಗೆ ಟೈಮ್(TIME)​ ನಿಯತಕಾಲಿಕೆ 2023ರ ಮತದಾನದಲ್ಲಿ ವಿಜೇತರಾಗಿ, ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮಿಚೆಲ್ ಯೋಹ್, ಎಲೋನ್ ಮಸ್ಕ್, ಲಿಯೋನಲ್​ ಮೆಸ್ಸಿ ಅವರಂತಹ ಗಣ್ಯರನ್ನೂ ಹಿಂದಿಕ್ಕಿ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಶಾರುಖ್ ಮುಂದಿನ ಸಿನಿಮಾಗಳು..: ಜನವರಿಯಲ್ಲಿ ತೆರೆಕಂಡ ಪಠಾಣ್​ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಜವಾನ್​ ಮತ್ತು ಡಂಕಿ ಅವರ ಮುಂಬರುವ ಚಿತ್ರಗಳು. ನಾಲ್ಕು ವರ್ಷಗಳ ಬ್ರೇಕ್​ ನಂತರ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಒಂದು ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದೆ. ಜವಾನ್​ ಮತ್ತು ಡಂಕಿ ಕೂಡ ಶೀಘ್ರದಲ್ಲೇ ತೆರೆಕಾಣಲಿದ್ದು, ಈ ಸಿನಿಮಾಗಳ ಮೇಲೂ ನಿರೀಕ್ಷೆ ಬೆಟ್ಟಿದಷ್ಟಿದೆ.

ಇದನ್ನೂ ಓದಿ:ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ದಕ್ಷಿಣದ ನಿರ್ದೇಶಕ ಅಟ್ಲೀ ಕುಮಾರ್ ನಿರ್ದೇಶನದ ಜವಾನ್ ಚಿತ್ರ ತನ್ನ ಬಹುತೇಕ ಕೆಲಸ ಪೂರ್ಣಗೊಳಿಸಿದೆ. ತಮಿಳಿನ ಬಹು ಬೇಡಿಕೆ ನಟಿ ನಯನತಾರಾ ಅವರು ಶಾರುಖ್​ ಅವರೊಂದಿಗೆ ತೆರೆ ಕಂಚಿಕೊಂಡಿದ್ದಾರೆ. ತಮಿಳು ಸೂಪರ್​ ಸ್ಟಾರ್ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶಾರುಖ್​ ಖಾನ್ ತಮ್ಮ​ ಮೂರು ದಶಕಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಸೌತ್​ ಸಿನಿಮಾ ಡೈರೆಕ್ಟರ್​ ಜೊತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇದು ಎಸ್​ಆರ್​ಕೆಗೆ ಅವರಿಗಿದು ಬಹಳ ವಿಶೇಷ ಸಿನಿಮಾ. ಜೂನ್ 2ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಈ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನು, ರಾಜಕುಮಾರ್​ ಹಿರಾನಿ ನಿರ್ದೇಶನದಲ್ಲಿ ಶಾರುಖ್​ ಖಾನ್​ ಅಭಿನಯದ ಮತ್ತೊಂದು ಸಿನಿಮಾ 'ಡುಂಕಿ' ರೆಡಿಯಾಗುತ್ತಿದೆ. ಈ ಚಿತ್ರ ಈ ಸಾಲಿನ ಕೊನೆಯಲ್ಲಿ ಅಂದರೆ ಡಿಸೆಂಬರ್​ ತಿಂಗಳಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ:ಬರ್ತ್‌ಡೇ ದಿನ ಅಪಾರ ಪ್ರೀತಿ ತೋರಿದ ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಕೃತಜ್ಞತೆ

ABOUT THE AUTHOR

...view details