ಪಠಾಣ್ ಚಿತ್ರದ ಬೇಶರಂ ರಂಗ್ ಹಾಡಿಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗುತ್ತಿದೆ. ನಟ ಶಾರುಖ್ ಖಾನ್ ವಿರುದ್ಧವೂ ಭಾರೀ ಅಸಮಾಧಾನ ಕೇಳಿ ಬರುತ್ತಿದೆ. ಈ ಬಗ್ಗೆ ಚಿಂತತರಾಗಿರುವ ಶಾರುಖ್ ಅಭಿಮಾನಿಗಳಿಗೊಂದು ಶುಭ ಸುದ್ದಿ. ಹೌದು, ಶಾರುಖ್ ಖಾನ್ ಸಾರ್ವಕಾಲಿಕ ಶ್ರೇಷ್ಠ ನಟನಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ ಈ ಖ್ಯಾತಿ ಗಿಟ್ಟಿಸಿಕೊಂಡ ಭಾರತೀಯ ಏಕೈಕ ನಟ ಇವರು.
ಹೌದು, ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಶಾರುಖ್ ಖಾನ್, ಎಂಪೈರ್ ಮ್ಯಾಗಜಿನ್‌ನ ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೇಶರಂ ರಂಗ್ ವಿವಾದದಲ್ಲಿ ಸಿಲುಕಿರುವ ಅವರು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.