ಕರ್ನಾಟಕ

karnataka

ETV Bharat / entertainment

ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ನೋಡುವ ಬಯಕೆ ವ್ಯಕ್ತಪಡಿಸಿದ ಶಾರುಖ್ - ಶಾರುಖ್​ ಖಾನ್​

ಬಾಲಿವುಡ್​ ನಟ​​ ಶಾರುಖ್ ಖಾನ್​​ ಅವರು ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾ 'ಗುಂಟೂರು ಖಾರಂ' ವೀಕ್ಷಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

Mahesh Babu and Shah Rukh Khan
ಮಹೇಶ್ ಬಾಬು - ಶಾರುಖ್​ ಖಾನ್​

By ETV Bharat Karnataka Team

Published : Jan 14, 2024, 2:58 PM IST

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತೆಲುಗು ಮಹೇಶ್ ಬಾಬು ಇಬ್ಬರೂ ಆಪ್ತಸ್ನೇಹಿತರು. ಇಬ್ಬರ ಸಿನಿಮಾಗಳು ಬಿಡುಗಡೆ ಆದಾಗಲೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಬೆಂಬಲ ಸೂಚಿಸುತ್ತಾರೆ. ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ' ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ಇದರ ಬೆನ್ನಲ್ಲೇ, ಜವಾನ್​ ಸಿನಿಮಾ ತಾರೆ ಶಾರುಖ್ ತಮ್ಮ ಎಕ್ಸ್​​ ಖಾತೆಯಲ್ಲಿ ಗುಂಟೂರು ಖಾರಂ ಟ್ರೇಲರ್ ಹಂಚಿಕೊಂಡು ''ಹೈಲಿ ಇನ್​ಪ್ಲೇಮಬಲ್''​ ಎಂದು ಮೆಚ್ಚಿಕೊಂಡಿದ್ದಾರೆ.

ಎಸ್​ಆರ್​ಕೆ ಎಕ್ಸ್ ಪೋಸ್ಟ್: ಪಠಾಣ್​ ನಟ​ ಶಾರುಖ್ ಖಾನ್​ ಗುಂಟೂರು ಖಾರಂ ಟ್ರೇಲರ್ ಶೇರ್ ಮಾಡಿ, ''ನನ್ನ ಸ್ನೇಹಿತ ಮಹೇಶ್​ ಬಾಬು ಅವರ ಗುಂಟೂರು ಖಾರಂ ವೀಕ್ಷಿಸಲು ಎದುರು ನೋಡುತ್ತಿದ್ದೇನೆ. ಇದು ಆ್ಯಕ್ಷನ್​, ಎಮೋಶನ್​​, ಮಾಸ್​​ ಅಂಶಗಳ ಪ್ರಯಾಣ. ಹೈಲಿ ಇನ್​ಪ್ಲೇಮೇಬಲ್'' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್​​ ಬಾಬು, "ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮನ್ನು ಪ್ರೀತಿಸುತ್ತೇನೆ! (ರೆಡ್​ ಹಾರ್ಟ್, ಹಗ್​ ಎಮೋಜಿಯೊಂದಿಗೆ)'' ಎಂದು ಬರೆದಿದ್ದಾರೆ.

ಶಾರುಖ್ ಖಾನ್ ಮತ್ತು ಮಹೇಶ್ ಬಾಬು ಪರಸ್ಪರರ ಸಿನಿಮಾಗಳಿಗೆ ಬೆಂಬಲ ಸೂಚಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಜವಾನ್ ಬಿಡುಗಡೆಯಾದ ಸಂದರ್ಭದಲ್ಲಿ ಮಹೇಶ್ ಬಾಬು "ಅತ್ಯುತ್ತಮ ಚಿತ್ರ" ಎಂದು ಉಲ್ಲೇಖಿಸಿ ಹೊಗಳಿದ್ದರು. ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿದ್ದ ಶಾರುಖ್​​, "ಬಹಳ ಧನ್ಯವಾದಗಳು. ಎಲ್ಲರೂ ಸಖತ್​ ಥ್ರಿಲ್ ಆಗಿದ್ದಾರೆ, ನೀವಿದನ್ನು ಇಷ್ಟಪಟ್ಟಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ತುಂಬುಹೃದಯದ ಪ್ರೀತಿ ಅರ್ಪಿಸುತ್ತೇನೆ. ನಿಮ್ಮ ಮಾತುಗಳು ಪ್ರೋತ್ಸಾಹದಾಯಕವಾಗಿವೆ. ಪ್ರೇಕ್ಷಕರನ್ನು ಮನರಂಜಿಸಲು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಲವ್ ಯು ಮೈ ಫ್ರೆಂಡ್'' ಎಂದಿದ್ದರು.

ಇದನ್ನೂ ಓದಿ:ಅಮೀರ್​ ಪುತ್ರಿಯ ಆರತಕ್ಷತೆಯಲ್ಲಿ ಬಾಲಿವುಡ್ ತಾರೆಯರ ಸಮಾಗಮ​-ವಿಡಿಯೋ

ಗುಂಟೂರು ಖಾರಂ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಗಳಿಸುತ್ತಿದೆ. ಮಹೇಶ್ ಬಾಬು ಅಭಿನಯ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಮಹೇಶ್ ಬಾಬು ಜೊತೆ ಸ್ಕ್ರೀನ್​ ಶೇರ್ ಮಾಡಿದ್ದು, ಸಿನಿಮಾ ಸೂಪರ್​ ಹಿಟ್ ಆಗಿದೆ. ಟಾಲಿವುಡ್​ ನೆಲದಲ್ಲಿ ಬ್ಯುಸಿಯಾಗಿರುವ ಈ ಕನ್ನಡತಿ ಸಾಲು ಸಾಲು ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಸಂತು-ಪಂತು ದೂರವಾಗುವ ಸಮಯ: ಕಣ್ಣೀರು ಸುರಿಸಿದ ಬಿಗ್​ ಬಾಸ್​ ಆಪ್ತ ಸ್ನೇಹಿತರು

ABOUT THE AUTHOR

...view details