ಶನಿವಾರ ಅಂದರೆ ಆಗಸ್ಟ್ 5 ರಂದು ನಿರ್ಮಾಪಕ ಅಮೃತ್ಪಾಲ್ ಸಿಂಗ್ ಬಿಂದ್ರಾ ಅವರು ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಯಲ್ಲಿ ಬಾಲಿವುಡ್ನ ಸಿನಿ ಗಣ್ಯರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್, ಪುತ್ರಿ ಸುಹಾನಾ ಖಾನ್, ಬಾಲಿವುಡ್ ಲವೆಬಲ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ, ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ - ಆದಿತ್ಯಾ ರಾಯ್ ಕಪೂರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ನಿರ್ದೇಶಕ - ನಿರ್ಮಾಪಕ ಕರಣ್ ಜೋಹರ್, ಅಗಸ್ತ್ಯಾ ನಂದಾ ಸೇರಿದಂತೆ ಹಲವರು ನಿರ್ಮಾಪಕ ಅಮೃತ್ಪಾಲ್ ಸಿಂಗ್ ಬಿಂದ್ರಾ ಅವರ ಮನೆಯಲ್ಲಿ ಕಾಣಿಸಿಕೊಂಡರು.
ಐಶಾರಾಮಿ ಕಾರಿನಲ್ಲಿ ಬಂದ ಪಠಾಣ್ ನಟ ಶಾರುಖ್ ಖಾನ್ ಪಾಪರಾಜಿಗಳ ಕ್ಯಾಮರಾ ಕಣ್ಣುಗಳಿಂದ ತಪ್ಪಿಸಿಕೊಂಡರು. ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬ್ಲ್ಯಾಕ್ ಸೂಟ್ ಧರಿಸಿ ಕಾರ್ಯಕ್ರಮಕ್ಕೆ ಬಂದರು. ನಿರ್ಮಾಪಕರ ನಿವಾಸಕ್ಕೆ ಎಂಟ್ರಿ ಕೊಡುವ ಮುನ್ನ ಪಾಪರಾಜಿಗಳತ್ತ ನೋಡಿ ಕೈ ಬೀಸಿದರು. ಇನ್ನು ಬಾಲಿವುಡ್ನ ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಒಟ್ಟಿಗೆ ಈವೆಂಟ್ಗೆ ಆಗಮಿಸಿದರು. ಸಿದ್ಧಾರ್ಥ್ ಪಾಪರಾಜಿಗಳತ್ತ ನೋಡಿ ಕೈ ಬೀಸಿದರೆ, ಕಿಯಾರಾ ಕ್ಯಾಮರಾ ಕಂಡು ನಸು ನಕ್ಕರು. ಪಾರ್ಟಿಗಾಗಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಗ್ರೀನ್ ಸ್ಟೈಲಿಶ್ ಡ್ರೆಸ್ ಧರಿಸಿದ್ದರೆ, ಬಹುಬೇಡಿಕೆ ನಟಿ ವೈಟ್ ಶರ್ಟ್ ಆ್ಯಂಡ್ ಪ್ಯಾಂಟ್ನಲ್ಲಿ ಕಾಣಿಸಿಕೊಂಡರು.
ಇನ್ನು ತಂದೆಯೊಂದಿಗೆ ಸುಹಾನಾ ಖಾನ್ ಕೂಡ ಆಗಮಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ಲೈಟ್ ಬ್ಲ್ಯೂ ಡ್ರೆಸ್ನಲ್ಲಿ ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿರುವ ಅನನ್ಯಾ ಪಾಂಡೆ ಮತ್ತು ಆದಿತ್ಯಾ ರಾಯ್ ಕಪೂರ್ ಈವೆಂಟ್ಗೆ ಪ್ರತ್ಯೇಕವಾಗಿ ಆಗಮಿಸಿದರು. ಆದ್ರೆ ಕಾರ್ಯಕ್ರಮದ ಸ್ಥಳಕ್ಕೆ ಏಕಕಾಲಕ್ಕೆ ಎಂಟ್ರಿ ಕೊಟ್ಟರು. ಲೈಗರ್ ನಟಿ ಆರೆಂಟ್ ಶಾರ್ಟ್ ಡ್ರೆಸ್, ಸಿಂಪಲ್ ನೆಕ್ಲೇಸ್ ಧರಿಸಿ ಬಂದಿದ್ದರೆ, ನೈಟ್ ಮ್ಯಾನೇಜರ್ ಸ್ಟಾರ್ ಆದಿತ್ಯಾ ಬ್ಲ್ಯಾಕ್ ಟೀ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಆರಿಸಿಕೊಂಡಿದ್ದರು.