ವಿಶ್ವಾದ್ಯಂತ ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ನಿರೀಕ್ಷೆಗೂ ಮೀರಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮನ್ನುಗ್ಗುತ್ತಿದೆ. ಮೊದಲ ದಿನದ ಹಿಟ್ ಟಾಕ್ನಿಂದಾಗಿ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಅಟ್ಲೀ ನಿರ್ದೇಶನಕ್ಕೆ ಚಪ್ಪಾಳೆ, ಶಿಳ್ಳೆ ಜೋರಾಗಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 500 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಜವಾನ್ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಜವಾನ್ ನಾಲ್ಕನೇ ದಿನದ ಕಲೆಕ್ಷನ್:'ಜವಾನ್' ಸಿನಿಮಾ ಸೆಪ್ಟೆಂಬರ್ 7ರಂದು ತೆರೆ ಕಂಡಿತ್ತು. ಮೊದಲ ದಿನ ದೇಶದಲ್ಲಿ 75 ಕೋಟಿ ರೂಪಾಯಿ ಕಲೆಕ್ಷನ್ನೊಂದಿಗೆ ಭರ್ಜರಿ ಓಪನಿಂಗ್ ಪಡೆಯಿತು. ಎರಡನೇ ದಿನ ಕೊಂಚ ಕಡಿಮೆ ಎನಿಸಿದರೂ 53 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಇದೀಗ ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಸಿದೆ. ಈವರೆಗಿನ ಅತ್ಯಧಿಕ ಕಲೆಕ್ಷನ್ ಇದಾಗಿದೆ. 4ನೇ ದಿನ ಸುಮಾರು 28.75 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.
ಈ ಮೂಲಕ ಭಾರತದಲ್ಲಿ 'ಜವಾನ್' ಒಟ್ಟು 287 ಕೋಟಿ ರೂ. ಸಂಗ್ರಹಿಸಿದೆ. ವಿಶ್ವಾದ್ಯಂತ ಚಿತ್ರದ ಕಲೆಕ್ಷನ್ ನೋಡುವುದಾದರೆ, ಬಿಡುಗಡೆಯಾದ ಮೊದಲ ದಿನ 129.6 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಎರಡನೇ ದಿನ 200 ಕೋಟಿ ರೂ. ದಾಟಿದರೆ, ಮೂರನೇ ದಿನ 300 ಕೋಟಿ ರೂ. ದಾಟಿತ್ತು. ಇದೀಗ ನಾಲ್ಕನೇ ದಿನದ ಕಲೆಕ್ಷನ್ನೊಂದಿಗೆ ಚಿತ್ರವು ಒಟ್ಟು 500 ಕೋಟಿ ರೂಪಾಯಿ ಗಳಿಸಿದೆ. ಸುಮಾರು 524 ರಿಂದ 529 ಕೋಟಿ ರೂಪಾಯಿ ವಿಶ್ವದಾದ್ಯಂತ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.