ಕರ್ನಾಟಕ

karnataka

ETV Bharat / entertainment

ಸಲ್ಮಾನ್​ ನಟನೆಯ 'ಟೈಗರ್ 3'ನಲ್ಲಿ ಪಠಾಣ್​ ಹೀರೋ ಶಾರುಖ್​ ಖಾನ್​ - Salman Khan Pathaan

ಏಪ್ರಿಲ್ ಅಂತ್ಯದ ವೇಳೆಗೆ ಸಲ್ಮಾನ್​ ಖಾನ್​ ಅಭಿನಯದ ಟೈಗರ್ 3 ಶೂಟಿಂಗ್​ನಲ್ಲಿ ಶಾರುಖ್​ ಖಾನ್​ ಭಾಗಿಯಾಗಲಿದ್ದಾರೆ.

Shah Rukh Khan in tiger 3
'ಟೈಗರ್ 3'ನಲ್ಲಿ ಶಾರುಖ್​ ಖಾನ್​

By

Published : Feb 24, 2023, 8:02 PM IST

ಮನೀಶ್ ಶರ್ಮಾ ನಿರ್ದೇಶನ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಟೈಗರ್ 3'ನಲ್ಲಿ ಪಠಾಣ್ ಎಂಟ್ರಿ ಮೂಲಕ ವೀಕ್ಷಕರಿಗೆ ಚಿತ್ರತಂಡ ದೊಡ್ಡ ಸರ್​ಪ್ರೈಸ್​ ಕೊಟ್ಟಿದೆ. ಈ ಸಾಲಿನ ಬ್ಲಾಕ್‌ಬಸ್ಟರ್ ಚಿತ್ರ 'ಪಠಾಣ್'ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಪ್ರೇಕ್ಷಕರು ತಮ್ಮ ಮೆಚ್ಚಿನ ತಾರೆಯರನ್ನು ಒಟ್ಟಾಗಿ ಕಂಡು ಸಂತಸಗೊಂಡಿದ್ದರು. ಈಗ ಬಾಲಿವುಡ್‌ನ ಬಾದ್‌ಶಾ ಮುಂಬರುವ ಆ್ಯಕ್ಷನ್​​​ ಥ್ರಿಲ್ಲರ್ 'ಟೈಗರ್ 3'ನಲ್ಲಿ ವಿಶೇಷ ಪಾತ್ರಕ್ಕಾಗಿ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಸೂಪರ್​ ಸ್ಟಾರ್ ಶಾರುಖ್​ ಖಾನ್​ ಏಪ್ರಿಲ್ ಅಂತ್ಯದ ವೇಳೆಗೆ 'ಟೈಗರ್ 3' ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ. ''ಟೈಗರ್ 3ನಲ್ಲಿ ಪಠಾಣ್‌ ಎಂಟ್ರಿ ಆಗಲಿದೆ. ಸೂಪರ್ ಗೂಢಚಾರರು ಪರಸ್ಪರರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್​ ರಾಜ್​ ಫಿಲ್ಸ್ಮ್​​ ಸ್ಪೈನ ಭಾಗವಾಗಿ, ಥಿಯೇಟರ್‌ಗಳಲ್ಲಿ ಅತ್ಯುತ್ತಮ ಮನೋರಂಜನಾ, ತಿರುವುಗಳು ಮತ್ತು ಆಶ್ಚರ್ಯಗಳನ್ನು ನಿರೀಕ್ಷಿಸಿ" ಎಂದು ಮೂಲಗಳು ತಿಳಿಸಿವೆ.

ಪಠಾಣ್‌ ಚಿತ್ರದಲ್ಲಿ ಶಾರುಖ್​ ಖಾನ್​ ಅವರಿಗೆ ಸಲ್ಮಾನ್ ಖಾನ್​ ಹೇಳಿದ್ದ ಡೈಲಾಗ್​ ಒಂದನ್ನು ಪ್ರೇಕ್ಷಕರು ನೆನಪಿಸಿಕೊಂಡಿದ್ದಾರೆ. ಆ ಪ್ರಕಾರ, ಪಠಾಣ್ ಟೈಗರ್‌ನನ್ನು ಭೇಟಿಯಾಗುತ್ತಾನೆ. ಶಾರುಖ್ ಅವರು ಏಪ್ರಿಲ್ ಅಂತ್ಯದ ವೇಳೆಗೆ ಟೈಗರ್ 3ಗಾಗಿ ಚಿತ್ರೀಕರಣ ಮಾಡಲಿದ್ದಾರೆ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರೀಕರಣದ ವಿವರಗಳನ್ನು ಸಂಪೂರ್ಣವಾಗಿ ಮುಚ್ಚಿಡಲಾಗಿದೆ. ಆದರೆ ಟೈಗರ್ 3ನಲ್ಲಿ ಇಬ್ಬರು ಸೂಪರ್ ಸ್ಪೈಗಳು ಮತ್ತೆ ಭೇಟಿಯಾದಾಗ ಸಂಭ್ರಮಾಚರಣೆ ಜೋರಾಗಿಯೇ ಮಾಡಬಹುದು.

ಈ ಹಿಂದೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್​​, ಕರಣ್ ಅರ್ಜುನ್, ಕುಚ್ ಕುಚ್ ಹೋತಾ ಹೈ ಮತ್ತು ಹಮ್ ತುಮ್ಹಾರೆ ಹೈ ಸನಮ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಪಠಾಣ್​ನಲ್ಲಿ ಧೂಳೆಬ್ಬಿಸಿದ್ದಾರೆ. ಟೈಗರ್​ 3ನಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, 2023ರ ದೀಪಾವಳಿ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಇನ್ನೂ ಶಾರುಖ್ ಖಾನ್ ದಕ್ಷಿಣ ಚಿತ್ರರಂಗದ ನಿರ್ದೇಶಕ ಅಟ್ಲೀ ಅವರ ಪ್ಯಾನ್ ಇಂಡಿಯಾ ಆ್ಯಕ್ಷನ್ ಥ್ರಿಲ್ಲರ್ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿ ಅವರ ಮುಂದಿನ 'ಡುಂಕಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲೂ RRR​ ಕ್ರೇಜ್: ನಾಟು ನಾಟು ಹಾಡಿಗೆ ನಟಿಯಿಂದ ಭರ್ಜರಿ ಸ್ಟೆಪ್ಸ್‌- ನೋಡಿ

ಸೂಪರ್​ ಹಿಟ್​ ಪಠಾಣ್​ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರ ಬಗ್ಗೆ ಈ ಹಿಂದೆ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​​ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ''ಪ್ರೇಕ್ಷಕರು ಪರದೆಯಲ್ಲಿ ನಮ್ಮನ್ನು ಒಟ್ಟಿಗೆ ನೋಡಲು ಇಚ್ಛಿಸುತ್ತಾರೆ ಎಂಬ ವಿಚಾರ ನನಗೆ ತಿಳಿದಿದೆ. ಅದಕ್ಕಾಗಿ ಒಂದು ಉತ್ತಮ ಚಿತ್ರ, ಸನ್ನಿವೇಶ ಬರಬೇಕಿತ್ತು. ಪಠಾಣ್‌ ಸಿನಿಮಾದಲ್ಲಿ ನಮಗೆ ಪ್ರೀತಿ ನೀಡಿದ್ದಕ್ಕಾಗಿ ನನಗೆ ಬಹಳ ಸಂತೋಷ ಆಗಿದೆ'' ಎಂದು ಸಲ್ಮಾನ್​ ಖಾನ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:'ಪಠಾಣ್'ನಲ್ಲಿ ತೆರೆ ಹಂಚಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾರುಖ್​, ಸಲ್ಮಾನ್​

ಸಲ್ಮಾನ್ ಖಾನ್​​ ಮತ್ತು ನಾನು ತೆರೆ ಹಂಚಿಕೊಳ್ಳಲು ಬಯಸಿದ್ದೆವು. ಆದರೆ ನಾವು ಸೂಕ್ತ ಸಿನಿಮಾ ಮತ್ತು ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆವು. ಅಭಿಮಾನಿಗಳು ನಮ್ಮನ್ನು ಒಟ್ಟಿಗೆ ಸ್ಕ್ರೀನ್​​ನಲ್ಲಿ ನೋಡಲು ಉತ್ಸುಕರಾಗಿರುತ್ತಾರೆ ಎಂಬುದನ್ನು ನಾವಿಬ್ಬರೂ ತಿಳಿದಿದ್ದೆವು. ಹಾಗಾಗಿ ನಾವು ಒಟ್ಟಿಗೆ ಅಭಿನಯಿಸಬೇಕಿತ್ತು. ಅಭಿಮಾನಿಗಳು ನಮಗೆ ಬಹಳ ಪ್ರೀತಿ ಕೊಟ್ಟಿದ್ದಾರೆಂದು ಶಾರುಖ್​ ಖಾನ್​ ತಿಳಿಸಿದ್ದರು.

ABOUT THE AUTHOR

...view details