ಬಾಲಿವುಡ್ ಚಿತ್ರ ಪಠಾಣ್ ಬಾಯ್ಕಾಟ್ ಕರೆಗಳ ನಡುವೆ ಶನಿವಾರದಂದು ನಟ ಶಾರುಖ್ ಖಾನ್ ಅಭಿಮಾನಿಗಳೊಂದಿಗೆ ಟ್ವಿಟರ್ ಸೆಶನ್ ನಡೆಸಿದರು. ಅಭಿಮಾನಿಗಳೊಂದಿಗಿನ ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ, ಈ ದಿನಗಳಲ್ಲಿ "ಸ್ವಲ್ಪ ಅಸ್ವಸ್ಥ"ನಾಗಿದ್ದೇನೆ ( "little unwell" ) ಎಂದು ಎಸ್ಆರ್ಕೆ ಬಹಿರಂಗಪಡಿಸಿದರು.
ಟ್ವಿಟರ್ನಲ್ಲಿ ನಡೆದ #ASK SRK ಸೆಶನ್ನಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ಉತ್ತರ ನೀಡಿದ್ದಾರೆ. ಈ ಸೆಶನ್ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದು, ಕೆಲ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಮತ್ತು ಹಲವು ಖುಷಿ ಕೊಟ್ಟಿದೆ. ಇತ್ತೀಚೆಗೆ "ಸ್ವಲ್ಪ ಅಸ್ವಸ್ಥ"ನಾಗಿದ್ದೇನೆಂದೂ ಕೂಡ ಎಸ್ಆರ್ಕೆ ಹೇಳಿದರು.
ಆಹಾರ ಪದ್ಧತಿಯ ಬಗ್ಗೆ ಅಭಿಮಾನಿಯೊಬ್ಬರು ಕೇಳಿದಾಗ, "ಸೋಂಕಿನಿಂದ ಸ್ವಲ್ಪ ಅಸ್ವಸ್ಥನಾಗಿದ್ದೇನೆ, ಹಾಗಾಗಿ ಈ ದಿನಗಳಲ್ಲಿ ದಾಲ್ ಚಾವಲ್ ಮಾತ್ರ ಸೇವಿಸುತ್ತಿರುವೆ" ಎಂದು ಉತ್ತರಿಸಿದ್ದಾರೆ. ಈ ಟ್ವೀಟ್ನಿಂದ ಕಿಂಗ್ ಖಾನ್ನ ಅಭಿಮಾನಿಗಳು ಚಿಂತಿತರಾಗಿದ್ದಾರೆ. 57 ವರ್ಷದ ಸೂಪರ್‌ಸ್ಟಾರ್ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.