ಕರ್ನಾಟಕ

karnataka

ETV Bharat / entertainment

ಡ್ರಗ್ಸ್ ಕೇಸ್‌ನಿಂದ ಹೊರಬಂದ ಆರ್ಯನ್ ನಿರಾಳ: ಮಕ್ಕಳ ಫೋಟೊ ನೋಡಿ ಶಾರುಕ್‌ ಹೇಳಿದ್ದೇನು?​ - ಶಾರುಖ್ ಖಾನ್ ನಟನೆಯ ಸಿನಿಮಾಗಳು

ಡ್ರಗ್ಸ್ ಕೇಸ್​​ನಲ್ಲಿ ಜೈಲು ಸೇರಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇದೀಗ ಮನೆಯವರೊಂದಿಗೆ ಖುಷಿಯಾಗಿದ್ದಾರೆ. ವರ್ಷದ ಬಳಿಕ ತೆಗೆದಿರುವ ಫೋಟೋ ಇದಾಗಿದೆ.

Shah Rukh Khan feels FOMO, comments this on latest Insta post of Suhana
ಮಕ್ಕಳ ಫೋಟೋಗೆ ಮೈ ಲಿಟಲ್ ಸರ್ಕಸ್ ಎಂದ ಖಾನ್​

By

Published : Aug 24, 2022, 5:19 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ​ ಶಾರುಖ್ ಖಾನ್ ತಮ್ಮ ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಮ್​ ಅವರೊಂದಿಗಿನ ಗಾಢ ಸ್ನೇಹವನ್ನು ತಮಾಷೆಯ ರೀತಿ ವ್ಯಕ್ತಪಡಿಸಿದ್ದಾರೆ. ಹಿರಿಯ ಪುತ್ರಿ ಸುಹಾನಾ​ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗೆ ಅವರು, ಇದೊಂದು 'ಲಿಟಲ್ ಸರ್ಕಸ್' ಎಂದಿದ್ದಾರೆ.

ಮಂಗಳವಾರ ಸುಹಾನಾ ತನ್ನ ಸಹೋದರ ಆರ್ಯನ್ ಮತ್ತು ಅಬ್ರಾಮ್ ಜೊತೆಗಿನ ಫೋಟೋವನ್ನು ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ಮೂರು ಕೋತಿಗಳ ಎಮೋಜಿಗಳೊಂದಿಗೆ ಶೀರ್ಷಿಕೆ ಕೊಟ್ಟಿದ್ದಾರೆ. ಶಾರುಖ್ ಖಾನ್ ಪ್ರತಿಕ್ರಿಯಿಸಿ, "ಮೈ ಲಿಟಲ್ ಸರ್ಕಸ್ - ಬಿಗ್ ಟೈಮ್ ಫೋಮೋ!" ಎಂದು ಕಾಮೆಂಟ್​ ಮಾಡಿದ್ದಾರೆ. ಖಾನ್​ ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಒಡಹುಟ್ಟಿದವರೊಂದಿಗೆ ಆರ್ಯನ್ ಖಾನ್​

ಸುಹಾನಾ ಶಾರ್ಟ್ಸ್‌ನೊಂದಿಗೆ ಸ್ಟ್ರಾಪ್‌ಲೆಸ್ ಟಾಪ್ ಧರಿಸಿದ್ದರೆ, ಆರ್ಯನ್ ಆಲಿವ್ ಹಸಿರು ಟಿ-ಶರ್ಟ್, ಜಾಕೆಟ್ ಮತ್ತು ಕಪ್ಪು ಜೀನ್ಸ್​ನಲ್ಲಿದ್ದಾರೆ. ಅಬ್ರಾಮ್ ಜೀನ್ಸ್‌ನೊಂದಿಗೆ ಕಪ್ಪು ಟಿ-ಶರ್ಟ್​ ಧರಿಸಿದ್ದರು. ಮುಗುಳು ನಗೆಯೊಂದಿಗೆ ಮೂವರು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಡ್ರಗ್ಸ್ ಕೇಸ್ ನಂತರ ಇದೇ ಮೊದಲ ಬಾರಿಗೆ ಆರ್ಯನ್ ಖಾನ್ ಸಹೋದರಿ ಹಾಗೂ ಸಹೋದರನೊಂದಿಗೆ ತೆಗೆದಿರುವ ಚಿತ್ರ ಇದಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಶಾರುಖ್ ಖಾನ್​ ನಾಲ್ಕು ವರ್ಷಗಳ ನಂತರ 'ಪಠಾನ್' ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಜನವರಿ 25, 2023 ರಂದು ಈ ಚಿತ್ರ ಬಿಡುಗಡೆಗೊಳ್ಳಲಿದ್ದು ಫಸ್ಟ್​ ಲುಕ್​ಜಾಲತಾಣದಲ್ಲಿ ಸದ್ದು​ ಮಾಡುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಚಿತ್ರದಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, 'ಜವಾನ್' ಚಿತ್ರೀಕರಣವೂ ನಡೆಯುತ್ತಿದೆ. ಇದರಲ್ಲಿ ತಾಪ್ಸಿ ಪನ್ನು ಮತ್ತು ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details