ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಅಭಿಮಾನಿಯೋರ್ವರು ತಮ್ಮ ಮೆಚ್ಚಿನ ನಟನ ಅರಮನೆಯೊಳಗೆ ಹೋಗಿ ಬಂದಿದ್ದಾರೆ. ಈ ಕ್ಷಣವನ್ನು ಲಕ್ಕಿ ಫ್ಯಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಉಳಿದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ ಅಭಿಮಾನಿ, ಮಾಡೆಲ್ ನವ್ಪ್ರೀತ್ ಕೌರ್ ಅವರು ಇತ್ತೀಚೆಗೆ ಸೂಪರ್ ಸ್ಟಾರ್ ಮನೆಗೆ ಹೋಗಿ ಬಂದಿದ್ದಾರೆ. ಅವರನ್ನು ಸಖತ್ ರಾಯಲ್ ಆಗಿ ಟ್ರೀಟ್ ಮಾಡಲಾಗಿದೆ. ಅಲ್ಲದೇ ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಅಭಿಮಾನಿಗಾಗಿ ಪಿಜ್ಜಾ ಮಾಡಿಕೊಟ್ಟಿದ್ದಾರೆ. ನವ್ಪ್ರೀತ್ ಕೌರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಸೂಪರ್ ಸ್ಟಾರ್‌ನೊಂದಿಗಿನ ಸೆಲ್ಫಿ ಹಂಚಿಕೊಂಡಿದ್ದಾರೆ. ಕಿರಿಯ ಮಗ ಅಬ್ರಾಮ್ ಖಾನ್ ಅವರಿಂದ ಆಟೋಗ್ರಾಫ್ ಕೂಡ ಪಡೆದಿದ್ದಾರೆ.
"ಓಹ್, ಮನ್ನತ್‌ನಲ್ಲಿ, ನನ್ನ ಜೀವನದಲ್ಲಿ ಅತ್ಯಂತ ಆಶೀರ್ವಾದಿಸಲ್ಪಟ್ಟ ದಿನ" ಎಂದು ಬರಹ ಆರಂಭಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ನಾನು ಇದನ್ನು ಎಂದಿಗೂ ಪೋಸ್ಟ್ ಮಾಡುವುದಿಲ್ಲ ಎಂದು ನನಗೆ ನಾನೇ ಭರವಸೆ ನೀಡಿದ್ದೆ, ಆದರೆ ಈ ನೆನಪು ಬಹಳ ಅತ್ಯಮೂಲ್ಯವಾಗಿದೆ. ಕಿಂಗ್ ಶಾರುಖ್ ಖಾನ್ ಸ್ವತಃ ವೆಜ್ ಪಿಜ್ಜಾ ತಯಾರಿಸಿದರು. ಏಕೆಂದರೆ ಕೆಲ ಪಂಜಾಬಿಗಳು ಸಸ್ಯಾಹಾರಿಗಳಾಗಿರುತ್ತಾರೆ. ನಾನು ಅವರ ಮನೆಯಲ್ಲಿದ್ದಾಗ ಕನಸು ಕಾಣುತ್ತಿದ್ದೇನೆ ಮತ್ತು ಯಾರೋ ನನ್ನನ್ನು ಶೀಘ್ರದಲ್ಲೇ ಎಬ್ಬಿಸಲಿದ್ದಾರೆ ಎಂದು ನಾನು ಭಾವಿಸಿದೆ. ನಾನು ಅವರ ಮುಂದೆ ವಿಚಿತ್ರವಾಗಿ ವರ್ತಿಸಲು ಬಯಸದ ಕಾರಣ ಶಾಂತತೆಯನ್ನು ಕಾಯ್ದುಕೊಂಡೆ. ಡೈನಿಂಗ್ ಟೇಬಲ್ನಲ್ಲಿ ಅವರ ಕುಟುಂಬದೊಂದಿಗೆ ಕುಳಿತಾಗ ನನ್ನ ಉತ್ಸಾಹ ತಡೆಯಲಾಗಲಿಲ್ಲ. ಹಾಗಾಗಿ ವಾಶ್ರೂಮ್ಗೆ ದಾರಿ ಕೇಳಿದೆ'' ಎಂದು ಬರೆದುಕೊಂಡಿದ್ದಾರೆ.
"ಅವರು ತಮ್ಮ ಕುರ್ಚಿಯಿಂದ ಎದ್ದರು, ವಾಶ್‌ರೂಮ್ ಬಳಿ ಕರೆದೊಯ್ದರು. ಈ ಸಮಯದಲ್ಲಿ ನನ್ನ ಹೃದಯವು ಉತ್ಸಾಹದಿಂದ ಕಿರುಚಲು ಬಯಸಿತು. ಹಾಗಾಗಿ ನಾನು ಕೋಣೆಯಲ್ಲಿನ ಕನ್ನಡಿ ನೋಡಿದೆ. ನಂಬಲಾಗದ ಈ ಕ್ಷಣದಲ್ಲಿ ನಾನು ಮೌನವಾಗಿ ಕಿರುಚುತ್ತಿದ್ದೇನೆ ಎಂದು ಎನಿಸಿತು. ರಾತ್ರಿಯ ಊಟ ಬಡಿಸಲಾಯಿತು. ನನಗೆ ಒಂದು ಸ್ಲೈಸ್‌ನಲ್ಲೇ ಹೊಟ್ಟೆ ತುಂಬಿದ ಅನುಭವ. ನನ್ನ ಹೊಟ್ಟೆಯು ನನ್ನ ಉತ್ಸಾಹವನ್ನು ಜೀರ್ಣಿಸಿಕೊಳ್ಳುವಲ್ಲಿ ನಿರತವಾಗಿತ್ತು" ಎಂದು ಬರೆದುಕೊಂಡಿದ್ದಾರೆ.