ಕರ್ನಾಟಕ

karnataka

ETV Bharat / entertainment

ನಾನು ನಿಮ್ಮ ಪ್ರೀತಿಗೆ ವಿನಮ್ರನಾಗಿದ್ದೇನೆ.. ತಮಿಳುನಾಡಿನ ಆಹಾರ ಹೊಗಳಿದ ಶಾರುಖ್​ ಖಾನ್​.. ಕಿಂಗ್​ ಖಾನ್​​​ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ - ಬಾಲಿವುಡ್​ ನಟ ಶಾರುಖ್

ಚೆನ್ನೈನಲ್ಲಿ ಜವಾನ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಶಾರುಖ್​ ಖಾನ್ ಪಾಲ್ಗೊಂಡಿದ್ದರು. ತಮಿಳುನಾಡಿನ ಆಹಾರದ ಬಗ್ಗೆ ಗುಣಗಾನ ಮಾಡಿದರು.

shah-rukh-khan-expresses-his-love-for-tamil-cinema-food-at-jawan-pre-release-event-in-chennai
ನಾನು ನಿಮ್ಮ ಪ್ರೀತಿಗೆ ವಿನಮ್ರನಾಗಿದ್ದೇನೆ.. ತಮಿಳುನಾಡಿನ ಆಹಾರ ಹೊಗಳಿದ ಶಾರುಖ್​ ಖಾನ್​..ಕಿಂಗ್​ ಖಾನ್​​​ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ

By ETV Bharat Karnataka Team

Published : Aug 31, 2023, 8:54 AM IST

ಚೆನ್ನೈ (ತಮಿಳುನಾಡು): ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಜವಾನ್​​ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲು ಸನ್ನದ್ಧವಾಗಿದೆ. ಚಿತ್ರತಂಡವು ಚೆನ್ನೈನ ಶ್ರೀ ಸಾಯಿರಾಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅದ್ಧೂರಿಯಾಗಿ ಬಿಡುಗಡೆ ಸಮಾರಂಭ ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಬಂದಿದ್ದರು ಅವರಿಗೆ ಅಟ್ಲಿ ಸೇರಿ ಮತ್ತಿತರರು ಸಾಥ್​ ನೀಡಿದರು. ನಯನತಾರಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಬಾಲಿವುಡ್​ ನಟ ಶಾರುಖ್ ಚಿತ್ರದ ಹಲವಾರು ಹಾಡುಗಳಿಗೆ ಸ್ಟೇಜ್​ ಮೇಲೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳು ರಂಜಿಸಿದರು. ನೆಚ್ಚಿನ ನಟನ ಅದ್ಭುತ ನೃತ್ಯವನ್ನು ನೋಡಿ ಹುಚ್ಚೆದ್ದು ಕುಣಿದರು.

ಇದೇ ವೇಳೆ, ಪ್ರೀ ರಿಲೀಸ್​ ಇವೆಂಟ್​ ಉದ್ದೇಶಿಸಿ ಮಾತನಾಡಿದ ಶಾರುಖ್ ಖಾನ್​ “ನಾನು ನಿಮ್ಮ ಪ್ರೀತಿಗೆ ವಿನಮ್ರನಾಗಿದ್ದೇನೆ. ನನ್ನನ್ನು ಆಹ್ವಾನಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ತಮಿಳು ಚಲನಚಿತ್ರಗಳನ್ನು ಆನಂದಿಸುತ್ತೇನೆ. ತಮಿಳಿನಲ್ಲಿ ಅತ್ಯುತ್ತಮ ಚಿತ್ರಗಳು ತಯಾರಾಗುತ್ತವೆ ಎಂದು ನನಗೆ ಅರಿವಿದೆ ಎಂದರು. ಶಾರುಖ್ ಅವರು ತಮಿಳುನಾಡಿನ ಆಹಾರದ ಬಗ್ಗೆ ಇದೇ ವೇಳೆ ಪ್ರೀತಿಯನ್ನು ವ್ಯಕ್ತಪಡಿಸಿದರು. ತಮಿಳುನಾಡಿಮ ಆಹಾರ ಸವಿಯುವುದೆಂದರೆ ಅದ್ಭುತವಾಗಿರುತ್ತದೆ. ತಮಿಳುನಾಡಿನಲ್ಲಿ ಅದ್ಭುತವಾದ ಮತ್ತು ವೈವಿಧ್ಯಮಯ ಭಕ್ಷ್ಯಗಳನ್ನು ಕಂಡು ಸಂತಸಗೊಂಡಿದ್ದೇನೆ ಎಂದು ಖುಷಿ ಹಂಚಿಕೊಂಡರು.

ಚಿತ್ರದ ನಿರ್ದೇಶಕರು ಮಾತನಾಡಿ "ನಾನು ಮುಂಬೈನಲ್ಲಿ ಎಂಥಿರಾನ್‌ನಲ್ಲಿ ಚಿತ್ರನಿರ್ಮಾಪಕ ಶಂಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೆ. ನಾವು ಎಸ್‌ಆರ್‌ಕೆ ಅವರ ನಿವಾಸದ ಹೊರಗೆ ಶೂಟಿಂಗ್ ಮಾಡುತ್ತಿದ್ದೇವೆ ಎಂದು ನನ್ನ ಸ್ನೇಹಿತ ನನಗೆ ತಿಳಿಸಿದರು. ಆ ಸಂದರ್ಭದಲ್ಲಿ ಅವರು ಗೇಟ್​ ಎದುರೇ ಫೋಟೋವೊಂದನ್ನು ತೆಗೆದುಕೊಳ್ಳುವಂತೆ ವಿನಂತಿ ಮಾಡಿದರು. 13 ವರ್ಷಗಳ ನಂತರ, ಅದೇ ಗೇಟ್ ಮುಂದೆ ಇದ್ದೇನೆ. ಮತ್ತು ಕಿಂಗ್ ಖಾನ್ ಸ್ವತಃ "ಸ್ವಾಗತ, ಅಟ್ಲೀ ಸರ್" ಎಂದು ಹೇಳಿದರು ಎಂಬುದನ್ನು ನೆನಪಿಸಿಕೊಂಡರು.

ಚಲನಚಿತ್ರ ನಿರ್ಮಾಪಕ ಗೋಕುಲಂ ಗೋಪಾಲನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ. “ಈ ಚಿತ್ರವನ್ನು ಮಾಡಲು ನಾವು ನಿಜವಾಗಿಯೂ ಸಂತಸವಾಗುತ್ತಿದೆ. ಏಕೆಂದರೆ ಈ ಚಿತ್ರದಲ್ಲಿ ಒಬ್ಬ ಮಹಾನ್ ನಟ, ಶಾರುಖ್ ಖಾನ್​ ಮತ್ತು ದಕ್ಷಿಣ ಭಾರತದ ಫೇಮಸ್​ ನಟಿ ನಯನತಾರಾ ನಟಿಸಿದ್ದಾರೆ. ಈ ಚಿತ್ರದ ವಿಶೇಷ ಎಂದರೆ ಪ್ರತಿಭಾವಂತ ಚಲನಚಿತ್ರ ನಿರ್ಮಾಪಕ ಅಟ್ಲಿ ನಿರ್ದೇಶಿಸಿದ್ದಾರೆ. ತಮಿಳುನಾಡು ಎಲ್ಲಾ ದಿಕ್ಕುಗಳಲ್ಲಿಯೂ ವಿಸ್ತರಿಸುತ್ತಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆಯಿದೆ. ನಮ್ಮ ತಮಿಳು ಚಿತ್ರರಂಗ ಈಗ ಬಾಲಿವುಡ್ ಪ್ರವೇಶಿಸುತ್ತಿದ್ದು, ಸದ್ಯದಲ್ಲೇ ಹಾಲಿವುಡ್ ಪ್ರವೇಶಿಸಲಿದೆ. ಇದು ಬಹುತೇಕ ಬಾಕ್ಸ್ ಆಫೀಸ್ ಸ್ಮ್ಯಾಶ್ ಆಗಲಿದೆ ” ಎಂದು ಸಂತಸ ವ್ಯಕ್ತಪಡಿಸಿದರು.

ಓಣಂ ಹಬ್ಬದ ಹಿನ್ನೆಲೆಯಲ್ಲಿ ನಟಿ ನಯನತಾರಾಗೆ ಇಂದು ಹಾಜರಾಗಲು ಸಾಧ್ಯವಾಗಲಿಲ್ಲ. ಅವರು ಕೇರಳದಲ್ಲಿ ಇರುವುದರಿಂದ ಇಂದಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಚಿತ್ರತಂಡದ ಮೂಲಗಳ ಪ್ರಕಾರ, 'ಜವಾನ್' ಟ್ರೈಲರ್ ಆಗಸ್ಟ್ 31 ರಂದು ಅಂದರೆ ಇಂದು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಲಿದೆ. (ANI)

ಇದನ್ನು ಓದಿ:Jawan Grand Event: ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ -​ ವಿಡಿಯೋ ನೋಡಿದ್ರಾ?

ABOUT THE AUTHOR

...view details