ಕರ್ನಾಟಕ

karnataka

ETV Bharat / entertainment

ಶಾರುಖ್​ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್​​; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್​ಜೆ - ಈಟಿವಿ ಭಾರತ್​ ಕನ್ನಡ

ಹಲವು ವರ್ಷಗಳಿಂದ ಚಿತ್ರ ಮರು ಬಿಡುಗಡೆಗೆ ಅಭಿಮಾನಿಗಳ ಒತ್ತಾಯ- ಸಿನಿಮಾ ರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ ಡಿಡಿಎಲ್​ಜೆ- ಇದೀಗ ಮತ್ತೊಮ್ಮೆ ಪ್ರೇಮಿಗಳ ದಿನಕ್ಕೆ ಮರು ಬಿಡುಗಡೆ

ಶಾರುಖ್​ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್​​; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್​ಜೆ
shah-rukh-khan-ever-green-romantic-cinema-ddlj-re-release-on-this-valentines-day

By

Published : Feb 10, 2023, 11:33 AM IST

ಮುಂಬೈ: ಬಾಲಿವುಡ್​ನಲ್ಲಿ ಎವರ್​ ಗ್ರೀನ್​ ಚಿತ್ರಗಳಲ್ಲಿ ಒಂದು 'ದಿಲ್​ ವಾಲೇ ದುಲ್ಹಾನಿಯಾ ಲೇ ಜಾಯೇಂಗೆ'. ಶಾರುಖ್​ ಖಾನ್​ ಮತ್ತು ಕಾಜೋಲ್​ಗೆ ಖ್ಯಾತಿ ತಂದುಕೊಟ್ಟ ಈ ಸಿನಿಮಾ ಇಂದಿಗೂ ಅನೇಕ ಮಂದಿಯ ಮೆಚ್ಚಿನ ಚಿತ್ರ. ರಾಜ್​ ಮತ್ತು ಸಿಮ್ರಾನ್​ ರ ಪ್ರೇಮ ಕಥಾ ಹಂದರ ಹೊಂದಿದ ಈ ಚಿತ್ರವನ್ನು ಇದೀಗ ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ. ಪ್ರೇಮಿಗಳ ದಿನದಂದು ಅಂದರೆ, ಫೆ. 14ರಂದು ಈ ಚಿತ್ರವನ್ನು ಭಾರತದ ಬಹುತೇಕ ನಗರಗಳಲ್ಲಿ ಈ ಚಿತ್ರವನ್ನು ಮರು ಬಿಡುಗಡೆಗೊಳಿಸುವ ನಿರ್ಧರಿಸಲಾಗಿದೆ ಎಂದು ಯಶ್​ ರಾಜ್ ಫಿಲ್ಮ್ಸ್​ ತಿಳಿಸಿದೆ.

ಭಾರತೀಯ ಸಿನಿಮಾದಲ್ಲೇ ಅತಿ ಹೆಚ್ಚು ಹಿಟ್​ ಹೊಂದಿ, ದೀರ್ಘ ಕಾಲ ಪ್ರಸಾರಗೊಂಡ ಸಿನಿಮಾ ಖ್ಯಾತಿಯ ಇತಿಹಾಸ ಈ ಸಿನಿಮಾಕ್ಕಿದೆ. ಈ ಚಿತ್ರದ ಖ್ಯಾತಿ ಎಷ್ಟಿದೆ ಎಂದರೇ, ಇಂದಿಗೂ ಇದು ಮುಂಬೈನ ಮರಾಟ ಮಂದಿರ್​ ಥಿಯೇಟರ್​ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅತಿ ಹೆಚ್ಚು ಪ್ರಸಾರ ಕಂಡ ಚಿತ್ರ ಇದಾಗಿದೆ. ಭಾರತೀಯ ಚಿತ್ರರಂಗದಲ್ಲಿ ರೋಮ್ಯಾಟಿಂಕ್​ ಸಿನಿಮಾ ಹಾಗೂ ಹೊಸ ಪೀಳಿಗೆಯ ಚಿತ್ರವಾಗಿ ಇದು ಅಂದಿಗೆ ಹೆಸರು ಗಳಿಸಿತು.

ಈ ಚಿತ್ರವನ್ನು ಮರು ಬಿಡುಗಡೆಗೊಳಿಸುವುದಂತೆ ಅಭಿಮಾನಿಗಳು ಹಲವಾರು ವರ್ಷಗಳಿಂದ ಕೇಳುತ್ತಿದ್ದಾರೆ. ಈ ಹಿನ್ನಲೆ ಪ್ರೇಮಿಗಳ ದಿನದಿಂದು ಅವರ ಆಸೆಯನ್ನು ಪೂರೈಸಲು ಮುಂದಾಗಿದ್ದೇವೆ. ಭಾರತದಾದ್ಯಂತ ಫೆ. 10ರಿಂದ ಈ ಚಿತ್ರದ ಮರು ಪ್ರದರ್ಶನ ನಡೆಯಲಿದೆ. ಈ ಚಿತ್ರ ಕೇವಲ ಒಂದು ವಾರಗಳ ಮಟ್ಟಿಗೆ ಮಾತ್ರ ಥೀಯೇಟರ್​ನಲ್ಲಿ ಪ್ರದರ್ಶನ ಕಾಣಲಿದೆ ಎಂದು ಯಶ್​ ರಾಜ್​ ಫಿಲ್ಮ್​ ಉಪ ಅಧ್ಯಾಕ್ಷರಾದ ರೋಹನ್​ ಮಲ್ಹೋತ್ರಾ ತಿಳಿಸಿದ್ದಾರೆ.

1995ರಲ್ಲಿ ಬಿಡುಗಡೆಯಾದ ಈ ಚಿತ್ರ ಇದೀಗ ಮುಂಬೈ, ಪುಣೆ, ಅಹಮದಾಬಾದ್​, ಸೂರತ್​, ವಡೋದರ, ಗುರುಗ್ರಾಮ್​, ಫರಿದಾಬಾದ್​, ಲಕ್ನೋ, ನೋಯ್ಡಾ, ಡೆಹ್ರಾಡೂನ್​, ಡೆಲ್ಲಿ, ಚಂಢೀಗಢ, ಕೊಲ್ಕೋತ್ತಾ, ಸೇರಿದಂತೆ 37 ನಗರದಲ್ಲಿ ಬಿಡುಗಡೆಗೊಳ್ಳಲಿದೆ. ಅಭಿಮಾನಿಗಳು ಕೂಡ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಶಾರುಖ್​ ಅಭಿನಯದ 'ದಿಲ್​ ವಾಲೇ ದುಲ್ಹಾನಿಯಾ ಲೇ ಜಾಯೇಂಗೆ' ಜೊತೆ ಅವರದೇ ಪಠಾಣ್​ ಚಿತ್ರವನ್ನು ನೋಡುವ ಅವಕಾಶವನ್ನು ಪಡೆಯಬಹುದು. ಯಶ್​ ರಾಜ್​ ಫಿಲ್ಮ್​ ಅವರ​ ನಿರ್ಮಾಣದ 'ಪಠಾಣ್'​ ಸದ್ಯ ವರ್ಲ್ಡ್​​ ವೈಡ್​ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಗಳಿಕೆ ಮಾಡುತ್ತಿದೆ.

ಬೆಳ್ಳಿ ತೆರೆ ಮೇಲೆ ಶಾರುಖ್​ ಅಭಿನಯದ ಎರಡು ಚಿತ್ರಗಳಲ್ಲಿ ಒಂದೇ ಅವಧಿಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ. 20 ವರ್ಷಗಳ ಹಿಂದಿನ ರೋಮ್ಯಾಂಟಿಕ್​ ಬಾಯ್​ ಹಾಗೂ ಆಕ್ಷನ್​ ಹೀರೋ ಆಗಿ ಮಿಂಚಿರುವ ಪಠಾಣ್​ ಎರಡು ಕೂಡ ಶಾರುಖ್​ ಅವರ ಸಿನಿ ಜೀವನದ ಪ್ರಮುಖ ಸಿನಿಮಾಗಳಾಗಿದೆ.

ಫೆ. 10ರಂದು 'ದಿಲ್​ ವಾಲೇ ದುಲ್ಹಾನಿಯಾ ಲೇ ಜಾಯೆಂಗೆ' ಚಿತ್ರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಈಗಿನಿಂದಲೇ ಬುಕ್ಕಿಂಗ್​ ಮಾಡಿಕೊಳ್ಳಬಹುದಾಗಿದೆ. ಈ ಚಿತ್ರ ಸಿನಿಮಾ ಮಂದಿರದಲ್ಲಿ ಕೇವಲ ಒಂದು ವಾರಗಳ ಕಾಲ ಮಾತ್ರ ಪ್ರದರ್ಶನವಾಗಲಿದೆ ಎಂದು ಯಶ್​ ರಾಜ್​ ಫಿಲ್ಮ್​ ತಿಳಿಸಿದೆ.

ಇದನ್ನೂ ಓದಿ: 'ಪಠಾಣ್'​ ಆ್ಯಕ್ಷನ್ ಸೀಕ್ವೆನ್ಸ್‌ ಶೂಟಿಂಗ್‌ ಹೇಗಿತ್ತು?: ಶಾರುಖ್‌ ಖಾನ್, ನಿರ್ದೇಶಕರ ಅನುಭವ ಕೇಳಿ..

ABOUT THE AUTHOR

...view details