ಕರ್ನಾಟಕ

karnataka

ETV Bharat / entertainment

ಮುಂಬೈ ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಶಾರುಖ್ ಖಾನ್​​ ವಿಚಾರಣೆ - ಕಾರಣ?

ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

shah rukh khan
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

By

Published : Nov 12, 2022, 3:22 PM IST

Updated : Nov 12, 2022, 4:47 PM IST

ಮುಂಬೈ: ಪಠಾಣ್​ ಸಿನಿಮಾದಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನುಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಕಸ್ಟಮ್ ಸುಂಕವನ್ನು ಪಾವತಿಸದಿದ್ದಕ್ಕಾಗಿ ಇಲಾಖೆ ಶಾರುಖ್ ಖಾನ್ ಮತ್ತು ಅವರ ತಂಡವನ್ನು ಪ್ರಶ್ನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

ಪ್ರಶಸ್ತಿ ಕಾರ್ಯಕ್ರಮಕ್ಕಾಗಿ ಯುಎಇಯ ಶಾರ್ಜಾಕ್ಕೆ ತೆರಳಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮುಂಬೈಗೆ ಹಿಂತಿರುಗಿದಾಗ ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಡೆದರು. ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಮೂಲಗಳ ಪ್ರಕಾರ, ನಟ 18 ಲಕ್ಷ ರೂಪಾಯಿ ಮೌಲ್ಯದ ದುಬಾರಿ ವಾಚ್‌ಗಳನ್ನು ತಂದಿದ್ದು, ಇದಕ್ಕಾಗಿ ಅವರು ಸುಮಾರು 7 ಲಕ್ಷದಷ್ಟು ಕಸ್ಟಮ್ ಸುಂಕವನ್ನು ಪಾವತಿಸಬೇಕಾಗಿತ್ತು. ಆದರೆ ಶಾರುಖ್​ ಸುಂಕ ಪಾವತಿಸದ ಹಿನ್ನೆಲೆ 7 ಲಕ್ಷ ರೂ. ದಂಡ ಹಾಕಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಮೂಲದಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಖ್ಯಾತ ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಪುಲಕ್ ಗೊಗೋಯ್ ನಿಧನ

ಶುಕ್ರವಾರ ಮಧ್ಯರಾತ್ರಿ 12.30ರ ವೇಳೆಗೆ ಶಾರುಖ್‌ ಖಾನ್‌ ಖಾಸಗಿ ಚಾರ್ಟೆಡ್‌ ವಿಮಾನದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಂದಾಜು ಮಧ್ಯಾರಾತ್ರಿ 1 ಗಂಟೆಯ ವೇಳೆಗೆ, ಟರ್ಮಿನಲ್‌-3ಯ ರೆಡ್‌ ಚಾನೆಲ್‌ನಿಂದ ಹೊರಬರುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಶಾರುಖ್ ಖಾನ್‌ ನವೆಂಬರ್‌ 11 ರಂದು ದುಬೈಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕಾಗಿ ತೆರಳಿದ್ದರು. ಅಲ್ಲಿ ಶಾರ್ಜಾ ಇಂಟರ್‌ನ್ಯಾಷನಲ್ ಬುಕ್ ಫೇರ್ 2022ರ 41 ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಾಜರಾಗಲು, ಶಾರುಖ್ ತಮ್ಮ ತಂಡವನ್ನು ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು. ಅದೇ ವಿಮಾನ ಮಲಕ ಅವರ ಶುಕ್ರವಾರ ತಡರಾತ್ರಿ ಮುಂಬೈಗೆ ಮರಳಿದ್ದು, ಆ ವೇಳೆ ಈ ಘಟನೆ ನಡೆದಿದೆ.

Last Updated : Nov 12, 2022, 4:47 PM IST

ABOUT THE AUTHOR

...view details