ಕರ್ನಾಟಕ

karnataka

ETV Bharat / entertainment

ಕಾಮರ್ಸ್​​ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪಠಾಣ್​ ಹಾಡಿಗೆ ಭರ್ಜರಿ ಡ್ಯಾನ್ಸ್​: ಶಾರುಖ್​ನಿಂದ ಮೆಚ್ಚುಗೆ - ರೊಮ್ಯಾಂಟಿಕ್​ ಸ್ಟಾರ್​ ಶಾರುಖ್​ ಖಾನ್​

ಜೂಮೇ ಜೋ ಪಠಾಣ್ ವಿಶ್ವವಿದ್ಯಾನಿಲಯದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್​ - ಶಿಕ್ಷಕರು ನೃತ್ಯ ಮಾಡಿರುವ ವಿಡಿಯೋ ಹಂಚಿಕೊಂಡ ಎಸ್​ಆರ್​ಕೆ - ಶೈಕ್ಷಣಿಕ ರಾಕ್‌ಸ್ಟಾರ್‌ಗಳ ಗುಂಪು ಎಂದು ಮೆಚ್ಚುಗೆಯ ನುಡಿ

Shah Rukh Khan
ಶಾರುಖ್​ನಿಂದ ಮೆಚ್ಚುಗೆ

By

Published : Feb 22, 2023, 9:28 AM IST

ಮುಂಬೈ (ಮಹಾರಾಷ್ಟ್ರ): ಪಠಾಣ್ ಸಿನಿಮಾ ಮೂಲಕ ಶಾರುಖ್​ ಖಾನ್​ಗೆ ಮತ್ತೆ ಯಶಸ್ಸು ಬೆನ್ನು ಹತ್ತಿದೆ. ಸಹಸ್ರ ಕೋಟಿ ಗಳಿಕೆ ಮಾಡುವ ಮೂಲಕ ಪಠಾಣ್​ ಚಿತ್ರ ದಾಖಲೆ ನಿರ್ಮಾಣ ಮಾಡಿದೆ. ಭಾರತೀಯ ಚಿತ್ರ ರಂಗದ 1000 ಕೋಟಿ ಗಳಿಕೆ ಮಾಡಿದ ಐದನೇ ಸಿನಿಮಾ ಎಂಬ ಖ್ಯಾತಿ ಗಳಿಸಿದೆ.​ ಇಷ್ಟು ಗಳಿಕೆ ಮಾಡಿದ ಕಿಂಗ್​ ಖಾನ್​ ಅವರ ಮೊದಲ ಸಿನಿಮಾ ಇದಾಗಿದೆ.

ಚಿತ್ರ ಯಶಸ್ಸಿನ ಸಂತೋಷದಲ್ಲಿರುವ ಹೀರೋ ರೊಮ್ಯಾಂಟಿಕ್​ ಸ್ಟಾರ್​ ಶಾರುಖ್​ ಖಾನ್​ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದಾರೆ. ಶಾರುಖ್ ಎರಡು ದಿನಗಳ ಕೆಳಗೆ ಟ್ವಿಟರ್​ನಲ್ಲಿ ಆಸ್ಕ್​ಎಸ್ಆ​ರ್​ಕೆ(AskSRK) ಎಂಬ ಹ್ಯಾಷ್​​ಟ್ಯಾಗ್ ಅಡಿಯಲ್ಲಿ ತಮ್ಮ ಅಭಿಮಾನಿಗಳಿಗೆ ಉತ್ತರಿಸಿದ್ದರು. ಪಠಾಣ್​ ಸಿನಿಮಾದ ಹಾಡಿಗೆ ಮಾಡಿರುವ ರೀಲ್ಸ್​ನ್ನು ತಮ್ಮ ಇನ್​ಸ್ಟಾ ಮತ್ತು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಂಚಿಕೊಂಡಿರುವ ವಿಡಿಯೋದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ 'ಜೂಮೇ ಜೋ ಪಠಾಣ್​' ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಡಿಯೋಗೆ ಶಾರುಖ್​, "ನಮಗೆ ಕಲಿಸುವ ಮತ್ತು ನಮ್ಮೊಂದಿಗೆ ಮೋಜು ಮಾಡುವ ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಹೊಂದಲು ಎಷ್ಟು ಅದೃಷ್ಟ. ಶೈಕ್ಷಣಿಕ ರಾಕ್‌ಸ್ಟಾರ್‌ಗಳ ಗುಂಪು!" ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನ ವಾಣಿಜ್ಯ ವಿಭಾಗದ್ದು ಎಂದು ತಿಳಿದು ಬಂದಿದ್ದು, ಈ ವಿಡಿಯೋವನ್ನು ವಾಣಿಜ್ಯ ವಿಭಾಗದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "JMC ಯ ಕೂಲ್​ ಪ್ರೊಫೆಸರ್‌, Commacumen'23, ಮೋಜಿನ ದಿನಗಳು ಎಂಬ ಹ್ಯಾಷ್​​ ಟ್ಯಾಗ್​ ಗಳನ್ನು ಬಳಸಿ ಶೇರ್​ ಮಾಡಲಾಗಿತ್ತು. ಈ ವಿಡಿಯೋವನ್ನು ಶಾರುಖ್​ ಹಂಚಿಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಪಠಾಣ್​ ಜೊತೆಗೆ ಎಲ್ಲರೂ ಇದ್ದಾರೆ. ಹೆಚ್ಚಿನವರು ಜೂಮೇ ಜೋ ಪಠಾಣ್ ಗುಂಗಿನಲ್ಲಿದ್ದಾರೆ. ಈ ರೀತಿ ಮಾಡಲು ಶಾರುಖ್​ ಖಾನ್​ಗೆ ಮಾತ್ರ ಸಾಧ್ಯ ಎಂದು ಒಬ್ಬ ಬರೆದರೆ. ಮತ್ತೊಬ್ಬ "ನಾನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ್ದು ನೀವು ನಟಿಸಿದ್ದೀರಿ ಎಂಬ ಕಾರಣಕ್ಕೆ. ಸಿನಿಮಾ ಮೇಲೆ ಪ್ರೀತಿ ಹುಟ್ಟಲು ನೀವು ಕಾರಣ. ಪಠಾಣ್ ತುಂಬಾ ಚೆನ್ನಾಗಿದೆ @iamsrk ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಇದುವರೆಗೂ ಐದು ಸಿಮಾಗಳು ಮಾತ್ರ 1000 ಕೋಟಿ ಮೀರಿ ಗಳಿಕೆ ಮಾಡಿವೆ. ಅದರಲ್ಲಿ ಪಠಾಣ್​ ಕೂಡ ಒಂದು. 2016ರಲ್ಲಿ ತೆರೆ ಕಂಡ ಮಿಸ್ಟರ್​ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅಭಿನಯದ 'ದಂಗಲ್' ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಈ ಚಿತ್ರವು ವಿಶ್ವದಾದ್ಯಂತ 2,023.81 ಕೋಟಿ ಗಳಿಕೆ ಮಾಡಿತ್ತು. ಇದಾದ ನಂತರ ಸೌತ್​ ಸೂಪರ್​ ಸ್ಟಾರ್​​ ಪ್ರಭಾಸ್​ ನಟನೆಯ ಬಾಹುಬಲಿ-2 ಚಿತ್ರವು 1,810.59 ಕೋಟಿ ರೂ., ಕನ್ನಡದ ರಾಕಿಂಗ್​​​ ಸ್ಟಾರ್​​ ಕೆಜಿಎಫ್-2 ಚಿತ್ರವು 1,235.20 ಕೋಟಿ, ಜೂ. ಎನ್​​ಟಿಆರ್, ರಾಮ್​ಚರಣ್​ ಅಭಿನಯದ​​ 'ಆರ್​ಆರ್​ಆರ್​' 1,169 ಕೋಟಿ ರೂ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವ ಚಿತ್ರಗಳಾಗಿವೆ.

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 2013ರಲ್ಲಿ ಬಿಡುಗಡೆಯಾದ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರವು ವಿಶ್ವದಾದ್ಯಂತ 424.54 ಕೋಟಿ ರೂ. ಗಳಿಸಿತ್ತು. ಪಠಾಣ್‌ಗಿಂತ ಮೊದಲು ಶಾರುಖ್‌ ಅವರ ಹೆಚ್ಚು ಗಳಿಕೆಯ ಚಿತ್ರ ಚೆನ್ನೈ ಎಕ್ಸ್‌ಪ್ರೆಸ್ ಆಗಿತ್ತು. ಹ್ಯಾಪಿ ನ್ಯೂ ಇಯರ್ 383 ಕೋಟಿ ರೂ., ದಿಲ್​ವಾಲೆ 376.85 ಕೋಟಿ ರೂ. ಮತ್ತು ರಯೀಸ್ ವಿಶ್ವದಾದ್ಯಂತ 281.44 ಕೋಟಿ ರೂ. ಕಲೆಕ್ಷನ್ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ 'ಪಠಾಣ್'​: ಟೀಕೆಗಳನ್ನು ಮೆಟ್ಟಿ ಸಾಧನೆ ಮಾಡಿದ ಹಿಂದಿ ಚಿತ್ರ!

ABOUT THE AUTHOR

...view details