ಕರ್ನಾಟಕ

karnataka

ETV Bharat / entertainment

ತೆರೆ ಹಂಚಿಕೊಂಡ ತಂದೆ ಮಗ: ಶಾರುಖ್​​ ಖಾನ್​​ ಜಾಹೀರಾತಿಗೆ ಪುತ್ರನೇ ನಿರ್ದೇಶಕ - Shah Rukh aryan video

D'yavol X ಜಾಹೀರಾತಿನಲ್ಲಿ ನಟ ಶಾರುಖ್​ ಖಾನ್​ ಮತ್ತು ಪುತ್ರ ಆರ್ಯನ್​ ಖಾನ್​ ತೆರೆ ಹಂಚಿಕೊಂಡಿದ್ದಾರೆ.

Shah Rukh Khan advertisement
ಶಾರುಖ್​​ ಖಾನ್​​ ಜಾಹೀರಾತು

By

Published : Apr 25, 2023, 7:35 PM IST

ಬಾಲಿವುಡ್​ ಕಿಂಗ್​​ ಶಾರುಖ್​ ಖಾನ್ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ​ಇವರ ಸಿನಿಮಾ ನಿರ್ಮಾಣಕ್ಕೆ ದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ನಿರ್ದೇಶನಕ್ಕೆ ಸ್ಟಾರ್​ ಡೈರೆಕ್ಟರ್​ಗಳು ಸಾಲುಗಟ್ಟಿ ನಿಲ್ಲುತ್ತಾರೆ. ಅಂತಹದಲ್ಲಿ ಅವರ ದೃಶ್ಯವೊಂದನ್ನು ಅತ್ಯಂತ ಕಿರಿಯ ಡೈರೆಕ್ಟರ್​ ನಿರ್ದೇಶಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಸ್ವತಃ ಶಾರುಖ್​​ ಹಿರಿಯ ಪುತ್ರ ಆರ್ಯನ್​ ಖಾನ್​​. ಹಾಗಂತ ಇದು ಸಿನಿಮಾ ಶೂಟಿಂಗ್​ ಅಲ್ಲ, ಬದಲಿಗೆ ಜಾಹೀರಾತು.

ಹೌದು, ಬಾಲಿವುಡ್​ನ ರೊಮ್ಯಾಂಟಿಕ್​ ಹೀರೋ ಶಾರುಖ್ ಖಾನ್ ಅವರು ತಮ್ಮ ಪುತ್ರ ಆರ್ಯನ್ ಖಾನ್ ನಿರ್ದೇಶನದ ಹೊಸ ಸ್ಟ್ರೀಟ್ ವೇರ್ ಬ್ರ್ಯಾಂಡ್​​ ವೇರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೂಪರ್‌ ಸ್ಟಾರ್‌ಗೆ ಹಲವು ವಿಧಗಳಲ್ಲಿ ಮೊದಲನೆಯ ಪ್ರಯತ್ನ ಎನ್ನಬಹುದು. ಏಕೆಂದರೆ ಶಾರುಖ್​ ಮೊದಲ ಬಾರಿ ಮಗ ಆರ್ಯನ್ ಖಾನ್‌ನೊಂದಿಗೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಅಲ್ಲದೇ ಮಗ ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದರೊಂದಿಗೆ ಎಸ್​ಆರ್​ಕೆ ಪುತ್ರ ಆರ್ಯನ್ ಖಾನ್ ಅವರು ಚಲನಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಐಷಾರಾಮಿ ಸ್ಟ್ರೀಟ್‌ವೇರ್ D'yavol X ಜಾಹೀರಾತಿನಲ್ಲಿ, ಕಂಪನಿಗೆ ಸೂಕ್ತವಾದ ಟ್ಯಾಗ್‌ಲೈನ್ ಅಥವಾ ಲೋಗೋ ಹಾಕಲು ಆರ್ಯನ್ ಹೆಣಗಾಡುತ್ತಾರೆ. ಅವರು "ಅತ್ಯುತ್ತಮ" ಮತ್ತು "ಟೈಮ್‌ಲೆಸ್" ನಂತಹ ಪದಗಳನ್ನು ಒತ್ತಿ ಹೇಳುತ್ತಾರೆ. ನಂತರ ಕೋಪದ ಭರದಲ್ಲಿ ಇಡೀ ಬ್ಲ್ಯಾಕ್​ ಬೋರ್ಡ್​​​ಗೆ ಕೆಂಪು ಬಣ್ಣ ಎರಚಿ ಹೋಗುತ್ತಾರೆ. ನಂತರ ಶಾರುಖ್ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಪೇಂಟ್​​ ಬ್ರಷ್​ ಹಿಡಿದು ಮುಂದೆ ಸಾಗುತ್ತಾರೆ. ಆರ್ಯನ್‌ ಎರಚಿದ್ದ ಕೆಂಪು ಬಣ್ಣದ ಚಿಹ್ನೆಯನ್ನು ಪೂರ್ಣಗೊಳಿಸುತ್ತಾರೆ. ಅಡ್ಡ ಮಾರ್ಕ್‌ನಂತೆ ಅಥವಾ Xನಂತೆ ಕಾಣುವಂತಹ ಡಿಸೈನ್​​ ಬ್ಲ್ಯಾಕ್​ ಬೋರ್ಡ್​ ಮೇಲೆ ಬರುತ್ತದೆ. ಈ X ಸಿಂಬಲ್​​ ಬ್ರ್ಯಾಂಡ್‌ನ ಲೋಗೋ ಆಗಿದೆ.

ಇದನ್ನೂ ಓದಿ:ಶೂಟಿಂಗ್​ನಲ್ಲಿ ಬ್ಯುಸಿಯಾದ ಮಾಜಿ ವಿಶ್ವಸುಂದರಿ: ಅಭಿಮಾನಿಗಳಲ್ಲಿ ಸಂತಸ

ಜೀವನಶೈಲಿ ಐಷಾರಾಮಿ ಬ್ರ್ಯಾಂಡ್​ D'YAVOL X ಅನ್ನು ಕಳೆದ ವರ್ಷವೇ ಸ್ಟಾರ್ ಕಿಡ್ ಆರ್ಯನ್​​ ಖಾನ್​​ ಪರಿಚಯಿಸಿದ್ದರು. ಇದರ ಜಾಹೀರಾತು ಹೊರಬಂದಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. "ಈ ಜೀವನಶೈಲಿ ಐಷಾರಾಮಿ ಬ್ರ್ಯಾಂಡ್​​ ಪರಿಕಲ್ಪನೆಗೆ ಸುಮಾರು 5 ವರ್ಷಗಳು ಹಿಡಿದಿದೆ. D'YAVOL X ಅಂತಿಮವಾಗಿ ಇಲ್ಲಿದೆ" ಎಂದು ಬರೆದುಕೊಂಡಿದ್ದಾರೆ. ಜಾಹೀರಾತು ತಂಡದ ಸಂಪೂರ್ಣ ವಿವರವನ್ನು ತಾವು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಶಾರುಖ್​​ ಪುತ್ರನ ಬಟ್ಟೆ ಬ್ರ್ಯಾಂಡ್ ಜಾಹೀರಾತು: ತಂದೆಗೆ ಆ್ಯಕ್ಷನ್​ ಕಟ್​ ಹೇಳಿದ ಮಗ

ಆರ್ಯನ್ ಖಾನ್ ತಂದೆ ಶಾರುಖ್​​ ಅವರೊಂದಿಗೆ ಆಗಾಗ್ಗೆ ಗುರುತಿಸಲ್ಪಡುತ್ತಾರೆ. ಐಪಿಎಲ್ ಈವೆಂಟ್‌ಗಳು ಮತ್ತು ಚಲನಚಿತ್ರ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಹೊರತಾಗಿ, ಆರ್ಯನ್ ಇತ್ತೀಚೆಗೆ ಶಾರುಖ್ ಅವರೊಂದಿಗೆ ದಿವಂಗತ ನಿರ್ದೇಶಕ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನದಲ್ಲಿ ಕಾಣಿಸಿಕೊಂಡರು. ಚೋಪ್ರಾ ಕುಟುಂಬಕ್ಕೆ ಸಂತಾಪ ಸೂಚಿಸಲು ಭೇಟಿ ಕೊಟ್ಟಿದ್ದ ವೇಳೆ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು. ಇನ್ನು ಕೆಲ ದಿನಗಳ ಹಿಂದೆ ನಡೆದ ನೀತಾ ಮುಖೇಶ್​ ಅಂಬಾನಿ ಕಲ್ಚರಲ್ ಸೆಂಟರ್​ ಉದ್ಘಾಟನಾ ಸಮಾರಂಭದಲ್ಲಿ ಇಡೀ ಖಾನ್​ ಕುಟುಂಬಸ್ಥರು ಉಪಸ್ಥಿತರಿದ್ದರು.

ABOUT THE AUTHOR

...view details