ಕರ್ನಾಟಕ

karnataka

ETV Bharat / entertainment

ಅಪ್ಪನ ಜೊತೆಗೆ ತೆರೆ ಹಂಚಿಕೊಳ್ಳಲು ಸಿದ್ದಳಾದ ಸುಹಾನಾ ಖಾನ್​; ಮತ್ತೊಂದು ಆ್ಯಕ್ಷನ್​ ಚಿತ್ರದಲ್ಲಿ 'ಕಿಂಗ್​' ಖಾನ್​​ - ಶಾರುಖ್​ ಖಾನ್​ ಮತ್ತು ಸುಹಾನಾ ಮೊದಲ ಬಾರಿಗೆ

ಈ ಚಿತ್ರಕ್ಕೆ ಕಿಂಗ್​ ಎಂದು ಹೆಸರಿಡಲಾಗಿದೆ. ಇದೊಂದು ವಿಶಿಷ್ಟ ಆ್ಯಕ್ಷನ್​​ ಥ್ರಿಲ್ಲರ್​ ಚಿತ್ರವಾಗಿದೆ

Sha rukh Khan and Suhana khan working together foretime
Sha rukh Khan and SuhSha rukh Khan and Suhana khan working together foretime ana khan working together foretime

By ETV Bharat Karnataka Team

Published : Nov 21, 2023, 4:33 PM IST

'ದಿ ಆರ್ಚೀಸ್'​ ವೆಬ್​ ಸಿರೀಸ್​ ಮೂಲಕ ಬಾಲಿವುಡ್​ ಪ್ರವೇಶಿಸಿರುವ ನಟಿ ಸುಹಾನಾ ಖಾನ್​​ ಇದೀಗ ತಂದೆಯೊಂದಿಗೆ ನಟಿಸಲು ಸಜ್ಜಾಗಿದ್ದಾಳೆ. ಶಾರುಖ್​ ಖಾನ್​ ಮತ್ತು ಸುಹಾನಾ ಮೊದಲ ಬಾರಿಗೆ ಒಟ್ಟಿಗೆ ಆ್ಯಕ್ಷನ್​​​ ಥ್ರಿಲ್ಲರ್​ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸುಜಯ್​ ಘೋಷ್​ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಸಿದ್ಧಾರ್ಥ್​ ಆನಂದ್​ ಅವರ ಮ್ಯಾಟ್ರಿಫ್ಲಿಕ್ಸ್​ ಎಂಟರ್ಟೈನಮೆಂಟ್​​ ಜೊತೆಗೆ ರೆಡ್​​ ಚಿಲ್ಲಿಸ್​​ ಎಂಟರ್​ಟೈನ್ಮೆಂಟ್​​ ಈ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಈ ಚಿತ್ರವು ಮುಂದಿನ ವರ್ಷದಿಂದ ಶೂಟಿಂಗ್​ ತಯಾರಿ ನಡೆಸಲಿದೆ.

ಖಾಸಗಿ ಮಾಧ್ಯಮವೊಂದರ ಆಪ್ತ ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಕಿಂಗ್​ ಎಂದು ಹೆಸರಿಡಲಾಗಿದೆ. ಇದೊಂದು ವಿಶಿಷ್ಟ ಸಾಹಸಮಯ ಥ್ರಿಲ್ಲರ್​ ಚಿತ್ರವಾಗಿದ್ದು, ಶಾರುಖ್​​ ಖಾನ್​ ಮತ್ತು ಸುಹಾನಾ ಖಾನ್​ ನಡುವಿನ ಡೈನಾಮಿಕ್​​ ಆ್ಯಕ್ಷನ್​​ ಒಳಗೊಂಡಿದೆ. ಇನ್ನು ಇದೇ ಮೊದಲ ಬಾರಿಗೆ ಅಪ್ಪ - ಮಗಳು ತಮ್ಮ ಮೊದಲ ಚಿತ್ರದಲ್ಲಿ ಸಾಹಸಮಯ ಚಿತ್ರದಲ್ಲಿ ನಟಿಸುವ ಮೂಲಕ ಹೊಸ ಸಂಪ್ರದಾಯ ಹಾಡಲಿದ್ದಾರೆ ಎಂಬ ಮಾತು ಕೂಡ ಬಾಲಿವುಡ್​ ಅಂಗಳದಲ್ಲಿ ಕೇಳಿ ಬಂದಿದೆ.

ಸದ್ಯ ಈ ಚಿತ್ರಕ್ಕೆ ಸಿದ್ದತೆಗಳು ಭರದಿಂದ ಸಾಗಿವೆ. ಜನವರಿಗೆ 2024ಯಿಂದ ಚಿತ್ರದ ಬಿಡುವಿಲ್ಲದ ಶೂಟಿಂಗ್​ ಆರಂಭವಾಗಲಿದೆ. ಮೂಲಗಳ ಪ್ರಕಾರ, ಪಠಾಣ್​​ ಚಿತ್ರದ ಶೂಟಿಂಗ್​ ಸಮಯದಲ್ಲಿ ಸಿದ್ದಾರ್ಥ್​​ ಮತ್ತು ಶಾರುಖ್​ ಖಾನ್​ ನಡುವೆ ಏರ್ಪಟ್ಟ ಸಂಬಂಧ ಚಿತ್ರದಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ ಎನ್ನಲಾಗಿದೆ. ಆ್ಯಕ್ಷನ್​​ ಜನರೇಷನ್​ನಲ್ಲಿ ಅತ್ಯುತ್ತಮ ನಿರ್ದೇಶಕ ಎಂಬುದನ್ನು ಸಿದ್ದಾರ್ಥ್​ ಸಾಬೀತು ಮಾಡಿದ್ದು, ಇದೇ ಪ್ರಯಾಣವನ್ನು ಅವರು ಕಿಂಗ್​ನಲ್ಲಿ ಮುಂದುವರೆಸಲಿದ್ದಾರೆ.

ಈ ನಡುವೆ ಕಿಂಗ್​ನ ಪ್ರಿ ಪ್ರೊಡಕ್ಷನ್​ ಕೆಲಸದತ್ತ ಸುಜಯ್​​ ಗಮನ ಹರಿಸಿದ್ದು, ಚಿತ್ರದ ಸ್ಕ್ರೀಪ್ಟ್​​ಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ. ಶಾರುಖ್​ ಖಾನ್​ ತಮ್ಮ ಪಠಾಣ್​ ಮತ್ತು ಜವಾನ್​ ಚಿತ್ರಗಳಿಗಿಂದ ವಿಭಿನ್ನವಾದ ಆ್ಯಕ್ಷನ್​ ಲುಕ್​ನಲ್ಲಿ ಇಲ್ಲಿ ಮಿಂಚಲಿದ್ದಾರೆ. ಸಾಹಸದ ಹೊರತಾಗಿ ಭಾವನಾತ್ಮಕತೆಯ ಚಿತ್ರದ ಜೀವಾಳವಾಗಿದೆ.

ಕಿಂಗ್​ ಚಿತ್ರದ ಸೆಟ್ಟೆರುವ ಮುನ್ನ ಡಿಸೆಂಬರ್​ 21ರಂದು ಶಾರುಖ್​ ಖಾನ್​ ಅಭಿನಯದ ಡುಂಕಿ ಚಿತ್ರ ತೆರೆಕಾಣಲಿದೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ತಾಪ್ಸಿ ಪನ್ನು, ವಿಕ್ಕಿ ಕೌಶಲ್​​, ಬೊಮ್ಮನ್​ ಇರಾನಿ ಸೇರಿದಂತೆ ಹಲವು ನಟ - ನಟಿಯರು ಈ ಚಿತ್ರದಲ್ಲಿದ್ದಾರೆ. ಸುಹಾನಾ ಖಾನ್​​ ಅಭಿಯನದ ದಿ ಆರ್ಚೀಸ್​ ಡಿಸೆಂಬರ್​ 7ರಂದು ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಪ್ರತಿಷ್ಟಿತ ಎಮ್ಮಿ ಪ್ರಶಸ್ತಿ ಗೆದ್ದ ಭಾರತದ ವೀರ್​ದಾಸ್: ವಿಜೇತರ ಪಟ್ಟಿ ಹೀಗಿದೆ

ABOUT THE AUTHOR

...view details