ಕರ್ನಾಟಕ

karnataka

ETV Bharat / entertainment

ಸರ್ಕಾರಿ ವಾರಿ ಪಾಟಾ ಸಿನಿಮಾ ಟ್ರೈಲರ್​ ರಿಲೀಸ್​.. ಮಾಸ್​ ಲುಕ್​ನಲ್ಲಿ ಸೂಪರ್​ ಸ್ಟಾರ್​ ಮಹೇಶ್​ಬಾಬು - ತೆಲುಗಿನ ಸರ್ಕಾರಿ ವಾರಿ ಪಾಟ ಸಿನಿಮಾ ಟ್ರೈಲರ್​

ಪರಶುರಾಮ್​ ಪೆಟ್ಲ ಅವರ ನಿರ್ದೇಶನದ, ಸೂಪರ್​ಸ್ಟಾರ್​ ಮಹೇಶ್​ ಬಾಬು ನಾಯಕನಾಗಿ ನಟಿಸಿರುವ ಸರ್ಕಾರಿ ವಾರಿ ಪಾಟಾ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಮೇ 12 ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.

sarkaru-vaari-paata
ಸರ್ಕಾರಿ ವಾರಿ ಪಾಟಾ

By

Published : May 2, 2022, 5:23 PM IST

ಹೈದರಾಬಾದ್ (ತೆಲಂಗಾಣ):ಸೂಪರ್ ಸ್ಟಾರ್​ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ಮುಂಬರುವ 'ಸರ್ಕಾರಿ ವಾರಿ ಪಾಟಾ' ಸಿನಿಮಾದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಪ್ರಿನ್ಸ್​ ಮಹೇಶ್​ ಬಾಬು ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಕಮರ್ಷಿಯಲ್​ ಸಿನಿಮಾ ಇದಾಗಲಿದೆ.

ಪರಶುರಾಮ್​ ಪೆಟ್ಲ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸರ್ಕಾರಿ ವಾಟಿ ಪಾಟಾ ಸಿನಿಮಾವನ್ನು ನವೀನ್ ಯರ್ನೇನಿ, ವೈ. ರವಿಶಂಕರ್, ರಾಮ್ ಅಚಂತಾ ಮತ್ತು ಗೋಪಿಚಂದ್ ಅಚಂತಾ ಅವರು ಮೈತ್ರಿ ಮೂವಿ ಮೇಕರ್ಸ್, ಜಿಎಂಬಿ ಎಂಟರ್‌ಟೈನ್‌ಮೆಂಟ್ ಮತ್ತು 14 ರೀಲ್ಸ್ ಪ್ಲಸ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ಮೇ 12 ರಂದು ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗಿದೆ.

ಟ್ರೇಲರ್‌ನಲ್ಲಿರುವಂತೆ ಸರ್ಕಾರಿ ವಾರಿ ಪಾಟಾ ಹೈ ವೋಲ್ಟೇಜ್ ಮಾಸ್ ಅಂಶಗಳನ್ನು ಹೊಂದಿದೆ. ಮಹೇಶ್ ಬಾಬು ಎಂದಿನಂತೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇದು ಯುವಕರು, ಕೌಟುಂಬಿಕ ಭಾವನೆಗಳು ಮತ್ತು ಆ್ಯಕ್ಷನ್‌ಗಳ ಮಿಶ್ರಣವಾಗಿದೆ. ನಿರ್ದೇಶಕ ಪರಶುರಾಮ್ ಪೆಟ್ಲ ಹೇಳುವಂತೆ, ಮಹೇಶ್ ಬಾಬು ಹಿಂದೆಂದೂ ನೋಡಿರದ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ. ಮಹೇಶ್ ಬಾಬುಗೆ ನಾಯಕಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್ ನಟಿಸಿದ್ದಾರೆ.

ಓದಿ:ಕೆಜಿಎಫ್​​ 2 ಅಬ್ಬರದ ನಡುವೆ ಮಕಾಡೆ ಮಲಗಿದ ಹಿಂದಿಯ ರನ್​ವೇ 34, ಹೀರೋಪಂತಿ 2!

ABOUT THE AUTHOR

...view details