ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಮುಂಬೈನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಮೆಟ್ರೋದಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಳಿ ಕುರ್ತಾ ಮತ್ತು ಕನ್ನಡಕವನ್ನು ಧರಿಸಿರುವ ಸಾರಾ ನಗುತ್ತಾ ಕ್ಯಾಮರಾದತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. 'ಮುಂಬೈ ಮೇರಿ ಜಾನ್, ನಿಮಗಿಂತ ಮೊದಲು ನಾನು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ ಎಂದು ಭಾವಿಸಿರಲಿಲ್ಲ' ಎಂಬುದಾಗಿ ಕ್ಯಾಪ್ಶನ್ ನೀಡಿದ್ದಾರೆ.
ವಿಡಿಯೋಗೆ ಮೆಟ್ರೋ ಇನ್ ದಿನೋ ನಟ ಆದಿತ್ಯ ರಾಯ್ ಕಪೂರ್ ಮತ್ತು ನಿರ್ದೇಶಕ ಅನುರಾಗ್ ಬಸು ಅವರನ್ನು ಟ್ಯಾಗ್ ಮಾಡಿದ್ದಾರೆ. 'ಮೆಟ್ರೋ ಇನ್ ದಿನೋ' ಮಾನವ ಸಂಬಂಧಗಳ ಕಹಿ ಕಥೆಯಾಗಿದೆ. ಅನುರಾಗ್ ಬಸು ಅವರು ನಿರ್ದೇಶಿಸಿದ್ದು, ಆಶಿಕಿ 2 ಹೀರೋ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಪ್ರಮುಖ ನಟರಾಗಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಪಂಕಜ್ ತ್ರಿಪಾಠಿ ಮತ್ತು ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಹಿಂದೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕ ಅನುರಾಗ್ ಬಸು, "ಮೆಟ್ರೋ ಇನ್ ದಿನೋ ಜನರ ಕಥೆ, ಇದು ಜನರಿಗಾಗಿ. ನಾನು ಈ ಕೆಲಸದಲ್ಲಿ ತೊಡಗಿ ಸ್ವಲ್ಪ ಸಮಯವಾಗಿದೆ. ನನಗೆ ಯಾವಾಗಲೂ ಆಧಾರಸ್ತಂಭದಂತಿರುವ ಭೂಷಣ್ ಕುಮಾರ್ ಜೊತೆ ಮತ್ತೆ ಸಹಕರಿಸಲು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದರು.
ಇದನ್ನೂ ಓದಿ:ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ
ಮುಂದುವರೆದು, "ಸಿನಿಮಾ ಕಥೆ ತುಂಬಾ ನೈಜವಾಗಿ ಮೂಡಿ ಬಂದಿದೆ. ಯಾವುದೇ ಸಿನಿಮಾದಲ್ಲಾದರೂ ಸಂಗೀತ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನನ್ನ ಆತ್ಮೀಯ ಗೆಳೆಯ ಪ್ರೀತಮ್ ಅಕ್ಷರಶಃ ಪಾತ್ರಗಳಿಗೆ ಮತ್ತು ಕಥೆಗೆ ಜೀವ ತುಂಬಿದ್ದಾರೆ" ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ಮೆಟ್ರೋ ಇನ್ ದಿನೋ ಕುರಿತಾಗಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇನ್ನೂ ಅವರ ಇತ್ತೀಚಿನ ಚಲನಚಿತ್ರ ಗ್ಯಾಸ್ಲೈಟ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವಿಕ್ರಾಂತ್ ಮಸ್ಸೆ ಮತ್ತು ಚಿತ್ರಾಂಗದಾ ಸಿಂಗ್ ಸಹ ನಟಿಸಿರುವ ಈ ಚಿತ್ರವು ಇನ್ನೂ ಉತ್ತಮ ವಿಮರ್ಶೆಗಳನ್ನು ಸ್ವೀಕರಿಸಿಲ್ಲ.
ನಟಿ ಸಾರಾ ಅಲಿ ಖಾನ್ ಅವರು ಪಟೌಡಿ ವಂಶದ ಕುಡಿ. ಇದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬಹು ಬೇಡಿಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿಯಾಗಿರುವ ಇವರು ಬಾಲಿವುಡ್ನಲ್ಲಿ ಭದ್ರ ಸ್ಥಾನ ಗಿಟ್ಟಿಸಿಕೊಳ್ಳಲು ಶ್ರಮ ವಹಿಸುತ್ತಿದ್ದಾರೆ. ತಂದೆ ಕೂಡ ಮಗಳ ಏಳಿಗೆಗೆ ಪ್ರೋತ್ಸಾಹಿಸುತ್ತಿದ್ದು, ಹೇಳಿಕೊಳ್ಳುವಷ್ಟು ದೊಡ್ಡ ಹಿಟ್ ಹಿಂದಿ ಚಿತ್ರ ಮಾಡಿಲ್ಲ ಸಾರಾ ಅಲಿ ಖಾನ್. ಆದರೆ ಉತ್ತಮ ಅಭಿನಯದ ಜೊತೆಗೆ ಬಗೆ ಬಗೆಯಾದ ಫೋಟೋಗಳ ಮೂಲಕ ಅಭಿಮಾನಿಗಳನ್ನು ತಲುಪಿದ್ದಾರೆ.
ಇದನ್ನೂ ಓದಿ:ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್ನೊಂದಿಗೆ ಬಂದ ವಿಕ್ರಮ್