ಸಾರಾ ಅಲಿ ಖಾನ್ ಬಾಲಿವುಡ್ನಲ್ಲಿ ಬೆಳೆಯುತ್ತಿರುವ ನಟಿ. ಸಿನಿಮಾ, ಸೌಂದರ್ಯದ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋ ಮುಖೇನ, ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ತಾರೆಯರಿಗಾಗಿ ದೀಪಾವಳಿ ಪಾರ್ಟಿ ಹಮ್ಮಿಕೊಂಡಿದ್ದರು. ಸಮಾರಂಭಕ್ಕೆ ಸಾರಾ ಸಹ ಸಾಕ್ಷಿಯಾಗಿದ್ದರು. ಮಿನುಗುವ ಉಡುಗೆ ತೊಟ್ಟು ಕಂಗೊಳಿಸಿದ ಅಲಿಖಾನ್ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ತಮ್ಮ ವರ್ಕ್ ಔಟ್ ರಿಸಲ್ಟ್ ಫೋಟೋವನ್ನೂ ಶೇರ್ ಮಾಡಿದ್ದಾರೆ. ತಮ್ಮ ಅದ್ಭುತ ರೂಪಾಂತರಕ್ಕೂ ಮುನ್ನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೇವಲ ಎರಡು ವಾರಗಳ ಅವಧಿಯಲ್ಲಿ ಹೊಟ್ಟೆಯ ಕೊಬ್ಬನ್ನು ಇಳಿಸಿದ್ದು, ತಮ್ಮ ಫಿಟ್ನೆಸ್ ಪ್ರಯಾಣವನ್ನು ಬಹಳ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ತಮ್ಮ ಈ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಫಿಟ್ನೆಸ್ ವಿಚಾರವಾಗಿ ಅಭಿಮಾನಿಗಳಿಗೂ ಸ್ಪೂರ್ತಿ ಆಗಿದ್ದಾರೆ.
ಸೋಮವಾರ ರಾತ್ರಿ ನಟಿ ಸಾರಾ ಅಲಿ ಖಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿಸ್ ವಿಭಾಗದಲ್ಲಿ ತಮ್ಮ ಮೂರು ಫೋಟೋಗಳ ಕೊಲ್ಯಾಜ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಟ್ಟೆಯ ಕೊಬ್ಬನ್ನು ಇಳಿಸಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಮೇಲಿರುವ ಫೋಟೋವನ್ನು ಶೇರ್ ಮಾಡಲು ನಿಜವಾಗಿಯೂ ಅನ್ಕಂಫರ್ಟಬಲ್ ಫೀಲ್ ಆಗುತ್ತಿದೆ. ಆದರೆ ನನಗೆ 2 ವಾರಗಳಲ್ಲಿ ಈ ಫಲಿತಾಂಶ ಸಿಕ್ಕಿದ್ದು, ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ತೂಕದ ಸಮಸ್ಯೆ ಯಾವಾಗಲೂ ನನಗೆ ಹೋರಾಟವೇ. ಆದ್ರೆ ನನ್ನನ್ನು ಸರಿಯಾದ ಟ್ರ್ಯಾಕ್‌ನಲ್ಲಿ ಇರಿಸಿದ್ದಕ್ಕಾಗಿ ತರಬೇತುದಾರರಿಗೆ ಧನ್ಯವಾದಗಳು. ಹಾಲಿಡೇ ಕ್ಯಾಲೋರಿಗಳಿಗೆ ಬೈ ಬೈ. ಫಿಟ್ನೆಸ್ ಒಂದು ಪ್ರಯಾಣ. ಹಾಗಾಗಿ ಮುಂದುವರಿಯಿರಿ" ಎಂದು ಬರೆದುಕೊಂಡಿದ್ದಾರೆ. (ಕೊಲ್ಯಾಜ್ನಲ್ಲಿ ಮೇಲಿರುವ / ಮೊದಲಿರುವ ಫೋಟೋ ವರ್ಕ್ಔಟ್ ವೇಳೆಯದ್ದು. ಶಾರ್ಟ್ ಡ್ರೆಸ್ ಆದ ಹಿನ್ನೆಲೆ ಅದನ್ನು ಹಂಚಿಕೊಳ್ಳಳು ನಟಿ ಅನ್ಕಂಫರ್ಟಬಲ್ ಫೀಲ್ ಮಾಡಿದ್ದಾರೆ).