ಕರ್ನಾಟಕ

karnataka

ETV Bharat / entertainment

'ನನ್ನ ಸಿಂಬಾ, ಎಲ್ಲರ ರಾಕಿ': ರಣ್​​ವೀರ್ ಸಿಂಗ್ ಜೊತೆ ಮತ್ತೆ ಸಾರಾ ಅಲಿ ಖಾನ್​ ಸಿನಿಮಾ - Ranveer Sara photo

ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ರಣ್​​ವೀರ್ ಸಿಂಗ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

Ranveer Singh Sara Ali Khan
ರಣ್​​ವೀರ್ ಸಿಂಗ್ ಸಾರಾ ಅಲಿ ಖಾನ್​

By

Published : Jul 30, 2023, 12:00 PM IST

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬಾಲಿವುಡ್​ ನಟಿ ಸಾರಾ ಅಲಿ ಖಾನ್ 'ಸಿಂಬಾ' ಸಿನಿಮಾ ನಂತರ ರಣ್​​ವೀರ್ ಸಿಂಗ್ ಜೊತೆ ಮತ್ತೆ ಕೆಲಸ ಮಾಡಿದ್ದಾರೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಹಾಡೊಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದು, ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

'ನನ್ನ ಸಿಂಬಾ, ಎಲ್ಲರ ರಾಕಿ, ಘರ್ಜಿಸುತ್ತಿರಿ'...: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಸಕ್ರಿಯರಾಗಿರುವ ಪಟೌಡಿ ವಂಶದ ಕುಡಿ ಸಾರಾ ಅಲಿ ಖಾನ್, ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದ ಕೆಲವು ಫೋಟೋಗಳನ್ನು ಪ್ರಕಟಿಸಿದ್ದಾರೆ. ಲಯನ್​ ಮತ್ತು ಫೈಯರ್ ಎಮೋಜಿ ಹಾಕಿ 'ಮೇರಾ ಸಿಂಬಾ, ಸಬ್ಕಾ ರಾಕಿ' ('ನನ್ನ ಸಿಂಬಾ, ಎಲ್ಲರ ರಾಕಿ, ಘರ್ಜಿಸುತ್ತಿರಿ') ಎಂದು ಬರೆದಿದ್ದಾರೆ. ಸಾರಾ ಮತ್ತು ರಣ್​​​ವೀರ್ ಸಿಂಗ್ ಬ್ಲ್ಯಾಕ್​ ಮ್ಯಾಚಿಂಗ್​​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ 'ಸಿಂಬಾ' ಜೋಡಿ ಸಖತ್​ ಹಾಟ್ ಆಗಿ ಕಾಣಿಸುತ್ತಿದೆ.

ಸಾರಾ ಅಲಿ ಖಾನ್ ಶೇರ್ ಮಾಡಿರುವ ಪೋಸ್ಟ್‌ಗೆ ಚಿತ್ರದ 'ರಾಕಿ' ರಣ್​ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ರೆಡ್​ ಹಾರ್ಟ್ ಎಮೋಜಿಗಳೊಂದಿಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ನ ಪಾಪುಲರ್ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಫೈಯರ್ ಆ್ಯಂಡ್ ರೆಡ್ ಹಾರ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಸಿಂಬಾ ಜೋಡಿಯನ್ನು ಮೆಚ್ಚಿದ ಅಭಿಮಾನಿಯೊಬ್ಬರು 'ನೀವು ಒಟ್ಟಿಗೆ ಬಹಳ ಚೆನ್ನಾಗಿ ಕಾಣುತ್ತಿದ್ದೀರಿ' ಎಂದಿದ್ದಾರೆ. ಇತರೆ ಅಭಿಮಾನಿಗಳು ಕೂಡ ಪ್ರೀತಿಯ ಧಾರೆ ಎರೆದಿದ್ದಾರೆ.

ಸಾರಾ ಅಲಿ ಖಾನ್ ಸಿನಿಮಾಗಳು..: ಸಾರಾ ಕೊನೆಯದಾಗಿ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್​ ಜೊತೆ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಅನುರಾಗ್ ಬಸು ಅವರ ಮುಂಬರುವ ಚಿತ್ರ 'ಮೆಟ್ರೋ...ಇನ್ ದಿನೋ' ಅಲ್ಲಿ ಅಭಿನಯಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್‌ರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣ ಸೇನ್ ಶರ್ಮಾ, ಅನುಪಮ್ ಖೇರ್, ಫಾತಿಮಾ ಸನಾ ಶೇಖ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಕೂಡ ಇದ್ದಾರೆ. 'ಏ ವತನ್ ಮೇರೆ ವತನ್' ಪ್ರಾಜೆಕ್ಟ್​ ಕೂಡ ನಟಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:Rarkpk: ತೆರೆಕಂಡ ಎರಡೇ ದಿನದಲ್ಲಿ ₹27 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಮೊದಲ ದಿನ 11.10 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಎರಡನೇ ದಿನ 16 ಕೋಟಿ ರೂ. ಸಂಗ್ರಹಿಸುವ ಮೂಲಕ ಎರಡು ದಿನಗಳಲ್ಲಿ ಒಟ್ಟು 27 ಕೋಟಿ ರೂ. ಸಂಪಾದಿಸಿದೆ. ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಗಿಟ್ಟಿಸಿರುವ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.

ABOUT THE AUTHOR

...view details