ಕರ್ನಾಟಕ

karnataka

ETV Bharat / entertainment

ಮರ್ಡರ್ ಮುಬಾರಕ್ ಶೂಟಿಂಗ್​ನಲ್ಲಿ ಪಟೌಡಿ ಕುಡಿ ಬ್ಯುಸಿ - ಸಾರಾ ಅಲಿ ಖಾನ್ ಸಿನಿಮಾಗಳು

ಮರ್ಡರ್ ಮುಬಾರಕ್ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಪಟೌಡಿ ಕುಡಿ ಸಾರಾ ಅಲಿ ಖಾನ್.

Sara Ali Khan in Murder Mubarak
ಸಾರಾ ಅಲಿ ಖಾನ್

By

Published : Mar 9, 2023, 6:20 PM IST

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮನ್ನು ಮುಂದಿನ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ದೇಶಕ ಹೋಮಿ ಅದಜಾನಿಯಾ (Homi Adajania) ಅವರೊಂದಿಗೆ ಮುಂಬರುವ ಚಿತ್ರದ ಮೊದಲ ಶೆಡ್ಯೂಲ್​ ಅನ್ನು ಇಂದು ಪೂರ್ಣಗೊಳಿಸಿದ್ದಾರೆ.

ನಿರ್ದೇಶಕ ಹೋಮಿ ಅದಜಾನಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಟಿ ಸಾರಾ ಅಲಿ ಖಾನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ''ಮೊದಲ ಹಂತದ ಶೂಟಿಂಗ್​ ಪೂರ್ಣಗೊಂಡಿದೆ. ಈಗ ನಿಜವಾದ ಕೆಲಸ ಪ್ರಾರಂಭವಾಗಿದೆ" ಎಂದು ಫೋಟೋ ಕ್ಯಾಪ್ಷನ್​ ಕೊಟ್ಟಿದ್ದಾರೆ. ನಿರ್ದೇಶಕ ಹೋಮಿ ಅದಜಾನಿಯಾ ಅವರ ಸ್ಟೋರಿಗೆ ನಟಿ ಸಾರಾ ಅಲಿ ಖಾನ್ ಪ್ರತಿಕ್ರಿಯಿಸಿದ್ದಾರೆ. ಮೊದಲ ಶೆಡ್ಯೂಲ್​ ಪೂರ್ಣಗೊಂಡಿದೆ ಎಂಬುದನ್ನು ನಂಬಲಾಗುತ್ತಿಲ್ಲ, ನಿಮ್ಮನ್ನು ಪ್ರೀತಿಸುತ್ತೇನೆ ಎಂದು ನಟಿ ಕಾಮೆಂಟ್​ ಮಾಡಿದ್ದಾರೆ.

ಮರ್ಡರ್ ಮುಬಾರಕ್ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣ

ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ "ಮರ್ಡರ್ ಮುಬಾರಕ್" (Murder Mubarak) ಚಿತ್ರದ ಶೂಟಿಂಗ್​ ಪ್ರಾರಂಭಿಸಿದ್ದಾರೆ. ನಟಿ ಕರಿಷ್ಮಾ ಕಪೂರ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಕರಿಷ್ಮಾ ಕಪೂರ್​ ಕೆಲ ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಶೂಟಿಂಗ್​ ಸೆಟ್​ನ ಫೋಟೋ ಪೋಸ್ಟ್ ಮಾಡಿದ್ದರು.

ಕಾಕ್‌ಟೈಲ್ (Cocktail) ಚಿತ್ರಕ್ಕೆ ಹೆಸರುವಾಸಿಯಾಗಿರುವ ನಿರ್ದೇಶಕ ಹೋಮಿ ಅದಜಾನಿಯಾ ಈ ಚಿತ್ರಕ್ಕೂ ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ. ಚಿತ್ರದ ಬಗ್ಗೆ ಸಾರಾ ಅಲಿ ಖಾನ್​​ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಇನ್ನು ನಟಿ ಸಾರಾ ಅಲಿ ಖಾನ್​​ ಆ್ಯಕ್ಷನ್​, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ 'ಗ್ಯಾಸ್‌ಲೈಟ್‌'ನಲ್ಲಿ ವಿಕ್ರಾಂತ್ ಮಸ್ಸೆ (Vikrant Massey) ಮತ್ತು ಚಿತ್ರಾಂಗದಾ ಸಿಂಗ್ (Chitrangada Singh) ಅವರೊಂದಿಗೆ ನಟಿಸಿದ್ದಾರೆ. ಇದು ಮಾರ್ಚ್ 31ರಂದು OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಜೊತೆಗೆ, ಲಕ್ಷ್ಮಣ್ ಉಟೇಕರ್ ( Laxman Utekar) ನಿರ್ದೇಶನದ ಮುಂಬರುವ ರೊಮ್ಯಾಂಟಿಕ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ಸಾರಾ ನಟಿಸಲಿದ್ದಾರೆ. ಇದಲ್ಲದೇ, ಕಣ್ಣನ್ ಅಯ್ಯರ್ ನಿರ್ದೇಶನದ ಏ ವತನ್ ಮೇರೆ ವತನ್ ಚಿತ್ರದಲ್ಲೂ ನಟಿಸಲಿದ್ದಾರೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಚಲನಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ ಮತ್ತು ಕರಣ್ ಜೋಹರ್, ಅಪೂರ್ವ ಮೆಹ್ತಾ ನಿರ್ಮಿಸಲಿದ್ದಾರೆ.

ಮೆಟ್ರೋ ಇನ್​ ದಿನೋ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ರಾಯ್ ಕಪೂರ್ ಜೊತೆಗೆ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದರೆ, ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ, ಕೊಂಕಣಾ ಸೇನ್, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಷಣ್ ಕುಮಾರ್, ಅನುರಾಗ್ ಬಸು, ಕೃಷ್ಣ ಕುಮಾರ್ ನಿರ್ಮಾಣದ ಸಿನಿಮಾವನ್ನು ಅನುರಾಗ್ ಬಸು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ:ಕಬ್ಜ ಹವಾ: 30ಕ್ಕೂ ಹೆಚ್ಚು ಅದ್ಧೂರಿ ಸೆಟ್​​​​ಗಳಿಗಾಗಿ ಕೋಟಿ ಕೋಟಿ ಖರ್ಚು!

'ಅತ್ರಂಗಿ ರೆ' ಸಿನಿಮಾ ಸಾರಾ ಅಲಿ ಖಾನ್ ಅವರ ಕೊನೆಯ ಚಿತ್ರ. 2021ರ ಡಿಸೆಂಬರ್​ನಲ್ಲಿ ತೆರೆ ಕಂಡ ಈ ಚಿತ್ರದ ಬಳಿಕ ನಟಿಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಉತ್ತರದ ನಟ ಅಕ್ಷಯ್ ಕುಮಾರ್ ಮತ್ತು ದಕ್ಷಿಣದ​ ಸೂಪರ್​ ಸ್ಟಾರ್​​ ಧನುಷ್ ಅವರೊಂದಿಗೆ 'ಅತ್ರಂಗಿ ರೆ' ಚಿತ್ರದಲ್ಲಿ ಸಾರಾ ಕೊನೆಯದಾಗಿ ಅಭಿನಯಿಸಿದ್ದರು. ಇದಾದ ಬಳಿಕ ಸಾರಾ ಅಲಿ ಖಾನ್​ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಈ ಪಟೌಡಿ ಕುಡಿ.

ಇದನ್ನೂ ಓದಿ:'ಒಂದೊಳ್ಳೆ ಸಿನಿಮಾಗೆ ಭಾಷೆಯ ಹಂಗಿಲ್ಲ': ಅಮೆರಿಕದಲ್ಲಿ ರಾಮ್ ​ಚರಣ್​​ ಮಾತು

ABOUT THE AUTHOR

...view details