ಬಾಲಿವುಡ್‌ನ ಬೆಡಗಿ ಸಾರಾ ಅಲಿ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಶೈನ್ ಆಗುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಕಳೆದ ವರ್ಷ ಬಿಡುಗಡೆಯಾದ 'ಅತ್ರಂಗಿ ರೇ' ಚಿತ್ರದಲ್ಲಿ ಸಾರಾ ಕೊನೆಯದಾಗಿ ಕಾಣಿಸಿಕೊಂಡರು, ಅಂದಿನಿಂದ ಸಾರಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೂಲಕ ಸುದ್ದಿಯಲ್ಲಿರುತ್ತಾರೆ.
ಇದೀಗ ಸಾರಾ ಅಲಿ ಖಾನ್ ಬಿಕಿನಿ ಧರಿಸಿ ಬೀಚ್ ಬಳಿ ಸೈಕಲ್ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಈ ಸುಂದರ ಚಿತ್ರವನ್ನು ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.