2018ರಲ್ಲಿ ಕೇದಾರನಾಥ್ ಸಿನಿಮಾದೊಂದಿಗೆ ಬಾಲಿವುಡ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸಾರಾ ಅಲಿ ಖಾನ್ ಸದ್ಯ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ನಿರ್ಮಾಪಕ ಕರಣ್ ಜೋಹರ್ ಅವರ ಮುಂಬರುವ ಬಯೋಪಿಕ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಪಾತ್ರದಲ್ಲಿ ನಟಿಸಲು ನಟಿ ಸಾರಾ ಅಲಿ ಖಾನ್ ಸಜ್ಜಾಗುತ್ತಿದ್ದಾರೆ.
ಚಿತ್ರಕ್ಕೆ ಆಯೇ ವತನ್ ಮೇರೆ ವತನ್ ಎಂದು ಹೆಸರಿಡಲಾಗಿದೆ. ಮಾಹಿತಿ ಪ್ರಕಾರ ಸೆಪ್ಟೆಂಬರ್ನಲ್ಲಿ ಬಯೋಪಿಕ್‌ನ ಚಿತ್ರೀಕರಣ ಪ್ರಾರಂಭವಾಗಲಿದೆ. ಸಾರಾ ಅಲಿ ಖಾನ್ ಈ ವರ್ಷದ ಆರಂಭದಲ್ಲೇ ಚಿತ್ರಕ್ಕೆ ಒಪ್ಪಿ ಸಹಿ ಹಾಕಿದ್ದಾರೆ. ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ:ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೆ ಸಜ್ಜಾದ ಅಕ್ಷಯ್ ಕುಮಾರ್ ಅಭಿನಯದ ಕಟ್‌ಪುಟ್ಲಿ
ಉಷಾ ಮೆಹ್ತಾ ಪರಿಚಯ: ಮಾರ್ಚ್ 1920ರಲ್ಲಿ ಗುಜರಾತ್ ರಾಜ್ಯದಲ್ಲಿ ಜನಿಸಿದ ಉಷಾ ಮೆಹ್ತಾ ಅಪ್ಪಟ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು. 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಭಾರತೀಯರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಚಳುವಳಿಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಲ ಭೂಗತ ರೇಡಿಯೋ ಸ್ಟೇಷನ್ ಎಂದು ಕರೆಯಲ್ಪಡುವ ಕಾಂಗ್ರೆಸ್ ರೇಡಿಯೊ ಸಂಘಟಿಸಿದ್ದಕ್ಕಾಗಿ ಅವರನ್ನು ಇಂದಿಗೂ ಸ್ಮರಿಸಲಾಗುತ್ತದೆ. 1998ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದೆ. 2000ರ ಆಗಸ್ಟ್ 11ರಂದು ಉಷಾ ಮೆಹ್ತಾ ಮೃತಪಟ್ಟಿದ್ದರು.