ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾಧ್ಯಮದ ಮುಂದೆ ಬಂದಾಗಲೆಲ್ಲಾ ತಮ್ಮ ನಗುಮುಖದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಮುದ್ದಾದ ಸ್ಮೈಲ್ನಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಆದರೆ, ಈ ಬಾರಿ ಮಾಲ್ವೊಂದರಲ್ಲಿ ನಟಿ ಪಾಪ್ಗಳ ವಿರುದ್ಧ ಕೋಪಗೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಾಪರಾಜಿಗಳು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ಸಾರಾ ಅಲಿ ಖಾನ್ ಆಹಾರ ಪದಾರ್ಥಗಳನ್ನು, ಅಗತ್ಯ ವಸ್ತುಗಳನ್ನು ಖರೀದಿಸಲು ಮಾಲ್ಗೆ ಹೋಗುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಪಾಪ್ಗಳು ಅವರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ. ಈ ವೇಳೆ, ಕೋಪಗೊಂಡ ನಟಿ ಕ್ಯಾಮರಾ ಆಫ್ ಮಾಡುವಂತೆ ಕೇಳುತ್ತಾರೆ. "ಸರ್! ದಯವಿಟ್ಟು ನಿಲ್ಲಿಸಿ. ಇದು ಸರಿ ಕಾಣುತ್ತಿಲ್ಲ" ಎಂದು ಹೇಳುತ್ತಾರೆ.
ವಿಡಿಯೋದಲ್ಲಿ ಸಾರಾ ಅಲಿ ಖಾನ್ ಸಂಪೂರ್ಣ ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸುಂದರವಾದ ಸೂಟ್ ಧರಿಸಿದ್ದಾರೆ. ಲೈಟ್ ಮೇಕಪ್ ಮತ್ತು ಪೋನಿಟೇಲ್ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋಗೆ ನೆಟ್ಟಿಗರು ಬಗೆ ಬಗೆ ಕಮೆಂಟ್ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. 'ಸಾರಾ ಅಲಿ ಖಾನ್ ಅವರನ್ನು ಬಿಟ್ಟು ಬಿಡಿ' ಎಂದು ಹೇಳಿದ್ದಾರೆ.