ಕರ್ನಾಟಕ

karnataka

ETV Bharat / entertainment

ವಿಡಿಯೋ: ಅಮರನಾಥ್ ಯಾತ್ರೆ ಕೈಗೊಂಡ ಪಟೌಡಿ ವಂಶದ ಕುಡಿ ಸಾರಾ ಅಲಿ ಖಾನ್ - Sara Ali Khan video

ಸಾರಾ ಅಲಿ ಖಾನ್ ಅವರ ಅಮರನಾಥ್ ಯಾತ್ರೆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Sara Ali Khan amarnath yatra video
ಸಾರಾ ಅಲಿ ಖಾನ್ ಅಮರನಾಥ್ ಯಾತ್ರೆ

By

Published : Jul 20, 2023, 6:57 PM IST

ಪಟೌಡಿ ವಂಶದ ಕುಡಿ, ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಪುತ್ರಿ ನಟಿ ಸಾರಾ ಅಲಿ ಖಾನ್ ಸಿನಿಮಾ ಹೊರತಾಗಿ ನಡೆನುಡಿಯಿಂದ ಅಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ನಟನೆ, ಸೌಂದರ್ಯ ಹೊರತುಪಡಿಸಿ ತಮ್ಮ ಜೀವನಶೈಲಿ ವಿಚಾರವಾಗಿ ಜನಮನದಲ್ಲಿ ಉಳಿದಿದ್ದಾರೆ.

ಅಮರನಾಥ ಯಾತ್ರೆ: ಇತ್ತೀಚೆಗೆ ಬಾಲಿವುಡ್​​ ನಟಿ ಸಾರಾ ಅಲಿ ಖಾನ್ ತಮ್ಮ ಕೆಲ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಕಣಿವೆ ಪ್ರದೇಶದ ಪ್ರವಾಸವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಈ ಫೋಟೋ ಶೇರ್ ಆದ ಬೆನ್ನಲ್ಲೇ, ನಟಿಯ ಹೊಸ ವಿಡಿಯೋವೊಂದು ಕಾಣಿಸಿಕೊಂಡಿದೆ. ವೈರಲ್​ ವಿಡಿಯೋದಲ್ಲಿ ಅವರು ಅಮರನಾಥಕ್ಕೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಸಾರಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ದೇವಾಲಯಗಳಿಗೆ ಭೇಟಿ: 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಯಶಸ್ಸಿನ ನಂತರ ನಟಿ ಸಾರಾ ಅಲಿ ಖಾನ್ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡಿದ್ದರು. ದೇವಸ್ಥಾನ ಭೇಟಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ಅಮರನಾಥ್ ಯಾತ್ರೆಗೆ ಹೊರಟಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಸಾರಾ ಅವರು ಹೆಚ್ಚಿನ ಭದ್ರತೆಯೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು.

ದೇವರ ದರ್ಶನ ಪಡೆದ ನಟಿ:ವಿಡಿಯೋದಲ್ಲಿ, ಜರಾ ಹಟ್ಕೆ ಜರಾ ಬಚ್ಕೆ ನಟಿ ತಿಳಿ ನೀಲಿ ಬಣ್ಣದ ಟ್ರ್ಯಾಕ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾಲು ಹೊದ್ದು, ಕಾಲಿಗೆ ಬೂಟು ತೊಟ್ಟು, ಕೈಯಲ್ಲಿ ಕೋಲು ಹಿಡಿದು ಮೆಟ್ಟಿಲುಗಳ ಕೆಳಗೆ ಬರುತ್ತಿರುವುದನ್ನು ಕಾಣಬಹುದು. ಬಾಬಾ ಅಮರನಾಥನ ದರ್ಶನ ಮುಗಿಸಿ ವಾಪಸ್​ ಆಗುತ್ತಿರುವಂತೆ ತೋರುತ್ತಿದೆ.

ಸಾರಾ ಅಲಿ ಖಾನ್ ಮುಂದಿನ ಸಿನಿಮಾ: 'ಏ ವತನ್ ಮೇರೆ ವತನ್', 'ಮೆಟ್ರೋ...ಇನ್ ದಿನೋ' ಮತ್ತು 'ಮರ್ಡರ್ ಮುಬಾರಕ್' ಚಿತ್ರಗಳಲ್ಲಿ ನಟಿ ಸಾರಾ ಅಲಿ ಖಾನ್​​ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಕೊನೆಯ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:Bawaal: ರೊಮ್ಯಾಂಟಿಕ್​ ಮೂಡ್​ನಲ್ಲಿ ಬವಾಲ್​ ಜೋಡಿ - ಜಾನ್ವಿ ಮಾದಕ ನೋಟ! Photos

ಸಾರಾ ಅಲಿ ಖಾನ್ ಕೊನೆ ಸಿನಿಮಾ: ನಟಿ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke). ಜೂನ್​​ 2ರಂದು ತೆರೆಕಂಡ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿತು. ವಿಕ್ಕಿ ಕೌಶಲ್​ ಜೊತೆ ತೆರೆ ಹಂಚಿಕೊಂಡ ಮೊದಲ ಚಿತ್ರವಿದು.

ಇದನ್ನೂ ಓದಿ:ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಚಿತ್ರತಂಡ.. ಸ್ಟೈಲಿಶ್ ಲುಕ್​ನಲ್ಲಿ ಗಮನ ಸೆಳೆದ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್

ABOUT THE AUTHOR

...view details