ಕರ್ನಾಟಕ

karnataka

ETV Bharat / entertainment

'ಸೂತ್ರಧಾರಿ' ಚಂದನ್ ಶೆಟ್ಟಿ ಜೊತೆ ಸಂಜನಾ ರೊಮ್ಯಾನ್ಸ್ - chandan shetty latest news

'ಸೂತ್ರಧಾರಿ' ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆ ಸಲಗ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ಅಭಿನಯಿಸುತ್ತಿದ್ದಾರೆ.

sootradhari movie
ಚಂದನ್ ಶೆಟ್ಟಿ ಜೊತೆ ಸಂಜನಾ

By

Published : Dec 22, 2022, 5:15 PM IST

ಸ್ಯಾಂಡಲ್‌ವುಡ್‌ನಲ್ಲಿ ಗಾಯಕ, ಸಂಗೀತ ನಿರ್ದೇಶಕನಾಗಿ ಬಹು ಬೇಡಿಕೆ ಹೊಂದಿರುವ ಮ್ಯೂಸಿಕ್‌ ಕಂಪೋಸರ್ ಚಂದನ್ ಶೆಟ್ಟಿ. ಕೆಲ ತಿಂಗಳ ಹಿಂದೆ ಎಲ್ರ ಕಾಲೆಳಿಯುತ್ತೆ ಕಾಲ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಈ ಸಿನಿಮಾ ಬಿಡುಗಡೆ ಆಗುವ ಮೊದಲೇ 'ಸೂತ್ರಧಾರಿ' ಸಿನಿಮಾಗೆ ಕೈ ಹಾಕಿರೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಜೊತೆ ತಬಲ ನಾಣಿ ಜೊತೆಯಾಗಿದ್ದರು. ಈ ಸಿನಿಮಾದ ನಾಯಕಿ ಯಾರಾಗ್ತಾರೆ ಅಂತಾ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿತ್ತು. ಈಗ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಚಂದನ್ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲು ಸಲಗ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ರೆಡಿಯಾಗಿದ್ದಾರೆ. ಸದ್ಯ ಈ ಚಿತ್ರದ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇದು ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು ಈ ಹಾಡಿನಲ್ಲಿ ಚಂದನ್ ಹಾಗು ಸಂಜನಾ ಆನಂದ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಜೊತೆ ಸಂಜನಾ

ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಮೊದಲ ಚಿತ್ರ. ಚಂದನ್​ ಶೆಟ್ಟಿ ನಾಯಕನಾಗಿ ನಟಿಸುವುದರ ಜೊತೆಗೆ, ತಾವೇ ಸಂಗೀತ ಸಂಯೋಜಿಸಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಬಲ ನಾಣಿ ಸೇರಿ ಅನೇಕ ಹಿರಿಯ ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ.ಈಗಾಗಲೆ ಶೇ.90ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇದಾಗಿದೆ.

ಇದನ್ನೂ ಓದಿ:ಬೇಶರಂ ರಂಗ್​ ಬೆನ್ನಲ್ಲೇ 'ಜೂಮೇ ಜೋ ಪಠಾನ್' ರಿಲೀಸ್​

ದಮಯಂತಿ ಸಿನಿಮಾವನ್ನು ನಿರ್ದೇಶನ ಮಾಡಿ, ನಿರ್ಮಾಣ ಮಾಡಿದ್ದ ನವರಸನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ಹೇಳಿ ಮಾಡಿಸಿದ ಹಾಗಿದೆ. ಸೂತ್ರಧಾರಿ ಸಿನಿಮಾದ ಈ ಹಾಡನ್ನು ಈ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​​ ಮಾಡಿದೆ.

ABOUT THE AUTHOR

...view details