'ಅನಿಮಲ್' ಸಿನಿಮಾ ಭಾರಿ ಯಶಸ್ಸು ಕಂಡಿದ್ದು, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ 'ಅನಿಮಲ್ ಪಾರ್ಕ್'ಗೆ ಸಜ್ಜಾಗಿದ್ದಾರೆ. 'ಅನಿಮಲ್ ಪಾರ್ಕ್' ಚಿತ್ರದ ಮುಂದುವರಿದ ಭಾಗವಾಗಿದೆ. ಪಾರ್ಟ್ 1 ಜಾಗತಿಕ ಮತ್ತು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು ಅಭಿಮಾನಿಗಳು ಸೀಕ್ವೆಲ್ ಕುರಿತು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಯಶ: ಇದೇ ಮೊದಲ ಬಾರಿ ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿರುವ ಸಿನಿಮಾ ಡಿಸೆಂಬರ್ 1ರಂದು ತೆರೆಗಪ್ಪಳಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಜೊತೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ನಡೆಸಿ, ಸರಿಸುಮಾರು 850 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.
ಅನಿಮಲ್ ಸೀಕ್ವೆಲ್: ಅನಿಮಲ್ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಹೀಗಿದ್ದರೂ ಬಾಕ್ಸ್ ಆಫೀಸ್ ಸಂಖ್ಯೆ ಎಲ್ಲರ ಹುಬ್ಬೇರಿಸಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಚಿತ್ರಕ್ಕೆ, ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಅನಿಮಲ್ ಪಾರ್ಕ್ ಬಗ್ಗೆ ಚರ್ಚೆ ನಡೆಯುತ್ತಿದೆ.
ನಿರ್ದೇಶಕರ ಮಾತು...:ಇತ್ತೀಚಿನ ಸಂದರ್ಶನದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನಿಮಲ್ 2 ಮತ್ತು 3ರ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ಶೆಡ್ಯೂಲ್ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಮುಂದಿನ ಭಾಗದ ಪಾತ್ರ, ಸೀಕ್ವೆನ್ಸ್ಗಳ ಸುಳಿವನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ರಣ್ಬೀರ್ ಮತ್ತು ಅನಿಲ್ ಕಪೂರ್ ಅವರ (ತಂದೆ-ಮಗನ ಪಾತ್ರ) ಭಾವನಾತ್ಮಕ ದೃಶ್ಯದ ನಂತರ ಕೊಂಚ ಕಠೋರ ದೃಶ್ಯವನ್ನು ಸಿನಿಮಾದಲ್ಲಿ ಸೂಕ್ತ ಸಂದರ್ಭದಲ್ಲಿ ಇರಿಸುವ ಕುರಿತು ಮಾತುಕತೆ ನಡೆಸಲಾಯಿತು ಎಂಬುದನ್ನು ಬಹಿರಂಗಪಡಿಸಿದರು. ''ಸ್ವಲ್ಪ ಸಮಯದವರೆಗೆ ಸ್ಕ್ರೀನ್ ಅನ್ನು ಬ್ಲ್ಯಾಂಕ್ ಆಗಿಡಲು ನಾನು ಯೋಚಿಸಿದೆ. ಆದರೆ ಪ್ರೇಕ್ಷಕರು ಥಿಯೇಟರ್ನಿಂದ ಎದ್ದು ಹೋಗುತ್ತಾರೆಂಬ ಭಯವಿತ್ತು'' ಎಂದರು. ಹಾಗಾಗಿ ಭಾವನಾತ್ಮಕ ದೃಶ್ಯಗಳೊಂದಿಗೆ ಕಠೋರ ದೃಶ್ಯಗಳನ್ನೂ ಬಳಸಿಕೊಳ್ಳಲಾಯಿತು ಎಂದು ತಿಳಿಸಿದರು.