ಕರ್ನಾಟಕ

karnataka

ETV Bharat / entertainment

ಕಾಂತಾರ ನೋಡಿ ಮೆಚ್ಚಿದ ರಮ್ಯಾ, ರಿಷಬ್ ಅಪ್ಪಿಕೊಂಡು ಭಾವುಕರಾದ ರಕ್ಷಿತ್​ - ಪೊನ್ನಿಯಿನ್ ಸೆಲ್ವನ್ ಸಿನಿಮಾ

ಹೊಂಬಾಳೆ ಫಿಲ್ಮ್ಸ್ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿ​ಗಳಿಗೆ ಕಾಂತಾರ ಚಿತ್ರದ ಸ್ಪೆಷಲ್ ಶೋ ಆಯೋಜಿಸಿತ್ತು. ಈ ಸೆಲೆಬ್ರಿಟಿ ಶೋಗೆ ಮೋಹಕ ತಾರೆ ರಮ್ಯಾ, ನಟ ರಕ್ಷಿತ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿನಯ್ ಕುಮಾರ್ ಹಲವರು ಆಗಮಿಸಿದ್ದರು.

Sandalwood was impressed by Kantara movie  Kantara movie release today  Kantara movie special screen for sandalwood stars  Kantara movie hero Rishab shetty  ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡ ರಮ್ಯಾ  ಡಾ ರಾಜ್​ ಕುಮಾರ್ ಅವರ ವಜ್ರೇಶ್ವರಿ ಬ್ಯಾನರ್  ಕಾದಂಬರಿ ಆಧಾರಿತ ಸಿನಿಮಾ  ಕೋಟ್ಯಾಂತರ ಸಿನಿ ಪ್ರಿಯರ ನಂಬಿಕೆ ಮತ್ತು ವಿಶ್ವಾಸ  ಹೊಂಬಾಳೆ ಫಿಲ್ಮ್​ನ ನಿರ್ಮಾಪಕ ವಿಜಯ್ ಕಿರಂಗದೂರ್  ಮೋಹಕ ತಾರೆ ರಮ್ಯಾ  ಪೊನ್ನಿಯಿನ್ ಸೆಲ್ವನ್ ಸಿನಿಮಾ  ರಕ್ಷಿತ್ ಶೆಟ್ಟಿ ಈ ಸಿನಿಮಾದ ಕ್ಲೈಮಾಕ್ಸ್
ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡ ರಮ್ಯಾ

By

Published : Sep 30, 2022, 11:04 AM IST

Updated : Sep 30, 2022, 11:22 AM IST

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್​ ಕುಮಾರ್ ಅವರ ವಜ್ರೇಶ್ವರಿ ಬ್ಯಾನರ್ ಹಾದಿಯಲ್ಲೇ ಹೊಂಬಾಳೆ ಫಿಲ್ಮ್ಸ್​ನ ನಿರ್ಮಾಪಕ ವಿಜಯ್ ವಿಜಯ್ ಕಿರಗಂದೂರು ಈಗ ಸಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ರಾಜಕುಮಾರ, ಕೆಜಿಎಫ್, ಯುವರತ್ನ ಅಂತಹ ಸಿನಿಮಾ‌ಗಳ ನಿರ್ಮಾಣ. ಈಗ ಕಾಂತಾರ ಸಿನಿಮಾ ಸಹ ಇದೇ ​ ಸಾಲಿಗೆ ಸೇರಿದೆ.

ಹೌದು ಚಿತ್ರತಂಡ ನಿನ್ನೆಯಷ್ಟೇ ಬೆಂಗಳೂರು,‌ ಮೈಸೂರು,‌ ಮಂಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ಸಾಕಷ್ಟು ಕಡೆಗಳಲ್ಲಿ ಪೇಯ್ಡ್ ಪ್ರಿಮಿಯರ್ ಶೋ ಅನ್ನು ಹಮ್ಮಿಕೊಂಡಿತ್ತು. ಅದೇ ರೀತಿ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿ​ಗಳಿಗೆ ಸ್ಪೆಷಲ್ ಶೋವನ್ನು ಹೊಂಬಾಳೆ ಫಿಲ್ಮ್ಸ್ ಆಯೋಜಿಸಿತ್ತು. ಈ ಸೆಲೆಬ್ರಿಟಿ ಶೋಗೆ ಮೋಹಕ ತಾರೆ ರಮ್ಯಾ, ನಟ ರಕ್ಷಿತ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿನಯ್ ಕುಮಾರ್, ನಿರ್ದೇಶಕ ಅನೂಪ್ ಭಂಡಾರಿ,‌ ಸಿಂಪಲ್ ಸುನಿ, ನಟಿ‌ ಅಮೂಲ್ಯ‌ ಸೇರಿದಂತೆ ಸಾಕಷ್ಟು ಚಿತ್ರರಂಗ ತಾರೆಯರು ಬಂದು ಕಾಂತಾರ ಸಿನಿಮಾ ನೋಡಿ‌ ಮೆಚ್ಚಿಕೊಂಡರು.

ಈ ಸಿನಿಮಾ ನೋಡಿ ಮಾತನಾಡಿರೋ‌ ಮೋಹಕ ತಾರೆ ರಮ್ಯಾ, ಈ ಸಿನಿಮಾದ‌ ಕಥೆ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಭೂತಾರಾಧನೆ ಪಾತ್ರ ಮಾಡಿರುವ ಪರಿ ನಿಜಕ್ಕೂ ಅದ್ಭುತ ಅಂತಾ ಕೊಂಡಾಡಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಈ ಸಿನಿಮಾದ ಕ್ಲೈಮಾಕ್ಸ್ ನೋಡಿ, ಚಿತ್ರಮಂದಿರದಲ್ಲಿ ಓಡಿ ಬಂದು ರಿಷಬ್ ಶೆಟ್ಟಿಯನ್ನ ಅಪ್ಪಿಕೊಂಡು ಭಾವುಕರಾದರು.

ಹೆಸರಿಗೆ ತಕ್ಕಂತೆ ಕಾಂತಾರ ಕನ್ನಡನಾಡಿನ ಒಂದು ದಂತಕಥೆಯ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರೋ ಕಾಂತಾರ ಬಹುಭಾಷಾ ಚಿತ್ರ ಪೊನ್ನಿಯಿನ್ ಸೆಲ್ವನ್ ಎದುರು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಊರಿನ ನಾಯಕ ರಿಷಬ್ ಶೆಟ್ಟಿ ಹಾಗೂ ಅರಣ್ಯ ಅಧಿಕಾರಿ ಕಿಶೋರ್ ನಡುವಿನ‌ ಸಂಘರ್ಷ, ಇತಿಹಾಸದ ಹಿನ್ನೆಲೆ ಇರುವ ಕರಾವಳಿ ಭಾಗದ ಭೂತರಾಧನೆ, ಅದು ಸುಳ್ಳು ಅಲ್ಲಾ ತುಂಬಾ ಶಕ್ತಿ ಇರುವ ಆರಾಧನೆ ಎಂಬುದನ್ನ ಕಾಂತಾರ ಸಿನಿಮಾ ಒಳಗೊಂಡಿದೆ. ಇದರ ಜೊತೆಗೆ ದಕ್ಷಿಣ ಭಾಗದ ಸಂಸ್ಕೃತಿಯನ್ನ ಬಿಂಬಿಸುವ ಕಾಂತಾರ ಸಿನಿಮಾವನ್ನ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡನಾಡಿ‌ನ ಸೊಗಡಿನಂತೆ ಮಾಡಿರುವ ತೃಪ್ತಿ ಹೊಂದಿದ್ದಾರೆ.

ಓದಿ:ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿ ಅನಾವರಣವೇ ಕಾಂತಾರ: ನಿರ್ಮಾಪಕ ವಿಜಯ್ ಕಿರಗಂದೂರ್

Last Updated : Sep 30, 2022, 11:22 AM IST

ABOUT THE AUTHOR

...view details