ಕರ್ನಾಟಕ

karnataka

ETV Bharat / entertainment

ಸ್ಯಾಂಡಲ್​ವುಡ್​ ತಾರೆಯರ ಮನೆಯಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ - ಯಶ್​ ಮನೆಯಲ್ಲಿ ಯುಗಾದಿ ಸಂಭ್ರಮ

ಕನ್ನಡ ಚಿತ್ರರಂಗದ ಸ್ಟಾರ್​ಗಳ ಮನೆಗಳಲ್ಲೂ ಯುಗಾದಿ ಹಬ್ಬ ಸಂಭ್ರಮ ಜೋರಾಗಿತ್ತು. ಹಿಂದೂಗಳ ಹೊಸ ವರ್ಷ, ಚಂದ್ರಮಾನ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದ್ದಾರೆ.

sandalwood-stars-celebrated-ugadi-festival
ಕನ್ನಡ ಚಿತ್ರರಂಗದ ಸ್ಟಾರ್​ಗಳ ಮನೆಗಳಲ್ಲೂ ಯುಗಾದಿ ಹಬ್ಬ ಸಂಭ್ರಮ

By

Published : Apr 2, 2022, 10:53 PM IST

ಚಂದ್ರಮಾನ ಯುಗಾದಿ ಹಿಂದೂಗಳ ಹೊಸ ವರ್ಷ, ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಕನ್ನಡ ಚಿತ್ರರಂಗದ ಸ್ಟಾರ್​ಗಳ ಮನೆಗಳಲ್ಲೂ ಯುಗಾದಿ ಹಬ್ಬ ಸಂಭ್ರಮ ಜೋರಾಗಿತ್ತು. ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ, ಜಗ್ಗೇಶ್, ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ, ನಟ ದಿಗಂತ್, ನಟಿ ರಾಗಿಣಿ‌‌ ಸೇರಿ ಹಲವರು ಸಡಗರದಿಂದ ಯುಗಾದಿ ಹಬ್ಬ ಆಚರಿಸಿದರು.

ರಿಯಲ್​ ಸ್ಟಾರ್​​ ಉಪೇಂದ್ರ ಮನೆಯಲ್ಲಿ ಯುಗಾದಿ ಸಂಭ್ರಮ
ಮೊಮ್ಮಗನೊಂದಿಗೆ ಜಗ್ಗೇಶ್​ ಸಂಭ್ರಮ

ಇತ್ತೀಚೆಗೆ ಯಶ್ ಕೆಜಿಎಫ್​ ಚಾಪ್ಟರ್-2 ಸಿನಿಮಾ ಪ್ರಚಾರಕ್ಕಾಗಿ ತಮ್ಮ ತಂಡದೊಂದಿಗೆ ದೆಹಲಿಗೆ ತೆರಳಿದ್ದರು. ಸದ್ಯ ಹಬ್ಬದ ನಿಮಿತ್ತ ಯಶ್ ಪ್ರಚಾರ ಕಾರ್ಯಕ್ಕೆ ಬ್ರೇಕ್​ ಕೊಟ್ಟು, ಕುಟುಂಬದವರ ಜೊತೆ ಯುಗಾದಿ ಆಚರಿಸಿದ್ದಾರೆ‌. ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆರ್ಯಾ ಹಾಗೂ ಯಥರ್ವ್​ ಜೊತೆ ಯಶ್ ಹೋಳಿಗೆ ಊಟ ಸವಿದರು. ಅದರಲ್ಲಿ ಯಶ್ ಮಗ ಥೇಟ್ ಅಪ್ಪನ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು ಕಂಡುಬಂತು.

ಯುಗಾದಿ ಊಟ ಸವಿಯುತ್ತಿರುವ ಯಶ್​ ಕುಟುಂಬ

ಇನ್ನು 'ಹೋಂ‌‌‌ ಮಿನಿಸ್ಟರ್' ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ, ಫ್ಯಾಮಿಲಿ ಜೊತೆ ಹೊಸ ಬಟ್ಟೆ ತೊಟ್ಟು ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ. ಹಾಗೆಯೇ ನಟ ಜಗ್ಗೇಶ್ ಮನೆಯಲ್ಲೂ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್​ ಹಾಗೂ ಪತ್ನಿ ಪರಿಮಳ ಜೊತೆ ಹಬ್ಬವನ್ನು ಸಂಭ್ರಮಿಸಿದರು.

ಯುಗಾದಿ ಆಚರಿಸಿದ ನಟಿ ರಾಗಿಣಿ ದ್ವಿವೇದಿ
ಪತ್ನಿ ಪ್ರೇರಣಾ ಜೊತೆ ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಯುಗಾದಿ ಆಚರಣೆ

ಧ್ರುವ ಸರ್ಜಾ, ಪತ್ನಿ ಪ್ರೇರಣಾ, ದಿಗಂತ್ ಹಾಗೂ ಐಂದ್ರಿತಾ ರೇ ಹಾಗೂ ನಟಿ ರಾಗಿಣಿ ದ್ವಿವೇದಿ ಹೊಸ ಬಟ್ಟೆ ಧರಿಸಿ ಯುಗಾದಿ ಹಬ್ಬ ಆಚರಣೆ ಮಾಡಿದರು.

ಹಬ್ಬದ ಸಂಭ್ರಮದಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ
ಯುಗಾದಿ ಆಚರಿಸಿದ ಜಗ್ಗೇಶ್​ ಕುಟುಂಬ

ABOUT THE AUTHOR

...view details