ಕರ್ನಾಟಕ

karnataka

ETV Bharat / entertainment

'ಡಾಲಿ ನಟ ರಾಕ್ಷಸ, ನವೀನ್​​ ಹೊಸ ರಾಕ್ಷಸ': 'ಗುರುದೇವ್​ ಹೊಯ್ಸಳ'ನಿಗೆ ಸಿನಿ ತಾರೆಗಳ ಮೆಚ್ಚುಗೆ - etv bharat kannada

'ಗುರುದೇವ್​ ಹೊಯ್ಸಳ' ಸಿನಿಮಾಗೆ ಪ್ರೇಕ್ಷಕರಿಂದ ಮಾತ್ರವಲ್ಲದೇ ಸಿನಿ ತಾರೆಯರಿಂದ ಮೆಚ್ಚುಗೆ ಸಿಕ್ಕಿದೆ.

movie
ಗುರುದೇವ್​ ಹೊಯ್ಸಳ

By

Published : Apr 2, 2023, 5:05 PM IST

Updated : Apr 2, 2023, 5:26 PM IST

ರಾಮ ನವಮಿಯಂದು ನಟ ರಾಕ್ಷಸ ಡಾಲಿ ಧನಂಜಯ್​ ಅಭಿನಯದ 'ಗುರುದೇವ್​ ಹೊಯ್ಸಳ' ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿದೆ. ಚಿತ್ರಮಂದಿರಗಳಲ್ಲಿ ಅದ್ಭುತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಖಡಕ್​ ಪೊಲೀಸ್​ ಅಧಿಕಾರಿಯಾಗಿ ಡಾಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಿನಿ ಪ್ರೇಮಿಗಳ ಜೊತೆ ಸಿನಿ ತಾರೆಯರು ಕೂಡ ಸಿನಿಮಾವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಗುರುದೇವ್​ ಹೊಯ್ಸಳ ನೋಡದವರು ಕೂಡಲೇ ಥಿಯೇಟರ್​ಗೆ ತೆರಳಿ ಸಿನಿಮಾವನ್ನು ವೀಕ್ಷಿಸುವಂತೆ ತಿಳಿಸಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​​ ಟ್ವೀಟ್​: "ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ. ಇಂತಹ ಉತ್ತಮ ಚಿತ್ರವನ್ನು ನೀಡಿದಕ್ಕಾಗಿ ಧನಂಜಯ್​, ನವೀನ್​ ಶಂಕರ್​ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂಬುದಾಗಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​ ಮಾಡಿದ್ದಾರೆ.

ಸಳ ಸಳ ಸಳ, ಜೈ ಹೊಯ್ಸಳ.. "ಫಸ್ಟ್​ ಹಾಫ್​ ಸಳ ಸಳ ಸಳ, ಸೆಕೆಂಡ್​ ಆಫ್​ ಜೈ ಹೊಯ್ಸಳ. ಉತ್ತಮ ಸಂದೇಶವುಳ್ಳ ಸಿನಿಮಾ. ಡಾಲಿ ಧನಂಜಯ್​ ನಟ ರಾಕ್ಷಸ, ನವೀನ್​ ಶಂಕರ್​ ಹೊಸ ರಾಕ್ಷಸ. ನೋಡಲೇಬೇಕಾದ ಸಿನಿಮಾ 'ಗುರುದೇವ್​ ಹೊಯ್ಸಳ' ತುಂಬಾ ಚೆನ್ನಾಗಿದೆ ಚಿತ್ರ" ಎಂದು ಖ್ಯಾತ ನಿರ್ದೇಶಕ ಸಂತೋಷ್​ ಆನಂದರಾಮ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಲಿ ಆಗಿ ನವೀನ್​ ಶಂಕರ್​ ಅತ್ಯುತ್ತಮ.. "ಸತ್ತಾಗ ಕೊಡೋದು ಡೆತ್​ ಸರ್ಟಿಫಿಕೇಟ್​, ಕಾಸ್ಟ್​ ಸರ್ಟಿಫಿಕೇಟ್​ ಅಲ್ಲ. ಧನಂಜಯ್​, ಅಮೃತಾ ಅಯ್ಯಂಗಾರ್, ಬಲಿ ಆಗಿ ನವೀನ್​ ಶಂಕರ್​ ಅತ್ಯುತ್ತಮ. ಜಾತಿ, ಪ್ರೀತಿ, ಕನ್ನಡ, ಪೊಲೀಸ್​ ಚರ್ಚಾ ವಿಷಯಗಳ ಪೈಸಾವಸೂಲ್​ ಚಿತ್ರ. ನಿರ್ದೇಶನ, ಸಂಗೀತ, ಛಾಯಾಗ್ರಹಣ, ನಿರ್ಮಾಣ ಎಲ್ಲವೂ ಉತ್ತಮವಾಗಿದೆ. ಅಭಿನಂದನೆಗಳು ಚಿತ್ರತಂಡಕ್ಕೆ" ಎಂದು ನಿರ್ದೇಶಕ ಸಿಂಪಲ್​ ಸುನಿ ಟ್ವೀಟ್​ ಮಾಡಿದ್ದಾರೆ.

ಗುರುದೇವ್​ ಹೊಯ್ಸಳಗೆ ಅಭಿನಂದನೆಗಳು.. "ಇಷ್ಟು ಒಳ್ಳೆಯ ಕಥೆಯನ್ನು ನಮಗೆ ನೀಡಿದ ಗುರುದೇವ್​ ಹೊಯ್ಸಳಗೆ ಅಭಿನಂದನೆಗಳು. ಡಾಲಿ ಧನಂಜಯ್​, ಕಾರ್ತಿಕ್​. ಯೋಗಿ ರಾಜ್​, ಅಮೃತಾ ಅಯ್ಯಂಗಾರ್​, ಕೆಆರ್​ಜಿ ಸ್ಟುಡಿಯೋಸ್​, ನವೀನ್​ ಶಂಕರ್​ ಮತ್ತು ಇಡೀ ತಂಡಕ್ಕೆ ಕಂಗ್ರಾಜುಲೇಷನ್ಸ್"​ ಎಂದು ನಟಿ ಸಪ್ತಮಿ ಗೌಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಗುರುದೇವ್​ ಹೊಯ್ಸಳ ವಿಭಿನ್ನ.. "ಮೇಲ್ನೋಟಕ್ಕೆ ಮಾಮೂಲಿ ಪೊಲೀಸ್​ ಸಿನಿಮಾ ಎನಿಸಿದರೂ, ಒಳಗಿರುವ ಒಂದು ಸೂಕ್ಷ್ಮ ವಿಚಾರ ಗುರುದೇವ್​ ಹೊಯ್ಸಳ ಸಿನಿಮಾವನ್ನು ವಿಭಿನ್ನವಾಗಿಸಿದೆ. ಗುರುದೇವ್​ ಹೊಯ್ಸಳನಾಗಿ ಡಾಲಿ ಧನಂಜಯ್​ ಮತ್ತು ಬಾಲಿಯಾಗಿ ನವೀನ್​ ಶಂಕರ್​ ಅತ್ಯುತ್ತಮ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು" ಎಂದು ನಿರ್ದೇಶಕ ಶಶಾಂಕ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:'ಭಾರತದ ಮೈಕಲ್ ಜಾಕ್ಸನ್' ಪ್ರಭು ದೇವ ಕನ್ನಡ ಹೇಗಿದೆ? ಇಂದು ಸಂಜೆ ವೀಕೆಂಡ್‌ ವಿತ್ ರಮೇಶ್ ಶೋ ನೋಡಿ!

ಗುರುದೇವ್​ ಹೊಯ್ಸಳ ಚಿತ್ರವನ್ನು ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಿಸಿದ್ದಾರೆ. ವಿಜಯ್​ ಅವರ ನಿರ್ದೇಶನವಿದ್ದು, ಅಜನೀಶ್​ ಲೋಕನಾಥ್​ ಸಂಗೀತವಿದೆ. ಖಡಕ್​ ಡೈಲಾಗ್​ಗಳನ್ನು ಮಾಸ್ತಿ ಅವರು ಬರೆದಿದ್ದು, ಕಾರ್ತಿಕ್​ ಅವರ ಛಾಯಾಗ್ರಹಣ ಮತ್ತು ದೀಪು ಎಸ್​ ಕುಮಾರ್​ ಅವರ ಸಂಕಲನವಿದೆ. ಡಾಲಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಮುಂತಾದವರು ಇದ್ದಾರೆ.

ಇದನ್ನೂ ಓದಿ:ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ

Last Updated : Apr 2, 2023, 5:26 PM IST

ABOUT THE AUTHOR

...view details