ಕರುನಾಡಿನಲ್ಲಿ 'ರಾಜ್ಯೋತ್ಸವ' ದಿನದ ಸಂಭ್ರಮ ಮನೆ ಮಾಡಿದೆ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ಇಂದಿಗೆ 50 ವರ್ಷ ತುಂಬಿದೆ. ಈ ಹಿನ್ನೆಲೆ ಸಂಭ್ರಮ ದುಪ್ಪಟ್ಟಾಗಿದೆ. ಕರುನಾಡಿನಾದ್ಯಂತ ''ಕರ್ನಾಟಕ ರಾಜ್ಯೋತ್ಸವ'' ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕನ್ನಡ ಚಿತ್ರರಂಗದ ಖ್ಯಾತನಾಮರು ಸಹ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ನಟ ಶಿವರಾಜ್ಕುಮಾರ್ ಟ್ವೀಟ್: ಸಾಮಾಜಿಕ ಜಾಲತಾಣದ ವೇದಿಕೆ ಎಕ್ಸ್ (ಟ್ವಿಟರ್) ನಲ್ಲಿ, ಕನ್ನಡ ಧ್ವಜ ಹಿಡಿದ ಫೋಟೋ ಹಂಚಿಕೊಂಡಿರುವ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ''ಕರ್ನಾಟಕದ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್: ಕಾಂತಾರ, ಕೆಜಿಎಫ್ ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂಬ ಪೋಸ್ಟರ್ ಶೇರ್ ಮಾಡಿ, ''ಕರ್ನಾಟಕದ ಸಮಸ್ತ ಜನತೆಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದೆ.
ನಟ ದರ್ಶನ್ ಪೋಸ್ಟ್:ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಅಪ್ಪಟ ಕನ್ನಡಿಗನಾಗಿ ಫೋಟೋ ಹಂಚಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ''ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಬದುಕು ಕಲಿಸಿದ ಈ ಮಾತೃಭೂಮಿಯ ಹಬ್ಬದಂದು ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ನಟ ಸುದೀಪ್ ಟ್ವೀಟ್: ಅಭಿನಯ ಚಕ್ರವರ್ತಿ ಸುದೀಪ್, ''ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ವಿಶ್ವದೆಲ್ಲೆಡೆ ಹಬ್ಬಿರುವ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.
ನಟ ಚೇತನ್ ಪೋಸ್ಟ್: ಟ್ವಿಟರ್ನಲ್ಲಿ ತಮ್ಮ ಫೋಟೋ ಹಂಚಿಕೊಂಡಿರುವ ಕನ್ನಡ ನಟ, ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್ ಅವರು, ''ಕನ್ನಡ ರಾಜ್ಯೋತ್ಸವದ ಶುಭಾಶಯಗಳು!'' ಎಂದು ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಟ್ವೀಟ್:ಎಕ್ಸ್ನಲ್ಲಿ ಕನ್ನಡ ಧ್ವಜದ ಫೋಟೋ ಹಂಚಿಕೊಂಡಿರುವ ಚಂದನವನದ ಮೋಹಕತಾರೆ ರಮ್ಯಾ, ''ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ಸಿಂಹಪ್ರಿಯಾ ವಿಡಿಯೋ ಪೋಸ್ಟ್:ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ, 'ಸಿಂಹಪ್ರಿಯಾ' ಖ್ಯಾತಿಯ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ವಿಡಿಯೋ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ನಿಂತು ಕನ್ನಡ ನಾಡಿನ ಸಮಸ್ತ ಜನತೆಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ಪೋಸ್ಟ್: ಸೂಪರ್ ಹಿಟ್ ಕೆಜಿಎಫ್ ಸಿನಿಮಾದ ನಾಯಕ ನಟಿ ಶ್ರೀನಿಧಿ ಶೆಟ್ಟಿ, ವರನಟ ಡಾ. ರಾಜ್ಕುಮಾರ್ ಮತ್ತು ನಗುಮೊಗದ ಒಡೆಯ ಪುನೀತ್ ರಾಜ್ಕುಮಾರ್ ಫೋಟೋಗೆ ಕೈಮುಗಿಯುತ್ತಿರುವ ಮತ್ತು ಪ್ರೀತಿ ವ್ಯಕ್ತಪಡಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ''ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ, ಅಂದದ ಗುಡಿ, ಚೆಂದದ ಗುಡಿ, ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ, ಅಂದದ ಗುಡಿ ಗಂಧದ ಗುಡಿ, ಚಂದದ ಗುಡಿ ಶ್ರೀಗಂಧದ ಗುಡಿ, ಅಹಹ ಅಹಹ.....'' ಎಂದು ಬರೆದುಕೊಂಡಿದ್ದಾರೆ.
ನಟ ಗಣೇಶ್ ಪೋಸ್ಟ್:'ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಕನ್ನಡಕ್ಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದಾ - ಕುವೆಂಪು' ಎಂದು ಬರೆದಿರುವ ಪೋಸ್ಟರ್ ಶೇರ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್, ''ಜೈ ಕರ್ನಾಟಕ, ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ನಟಿ ರಾಗಿಣಿ ದ್ವಿವೇದಿ:ಕನ್ನಡ ಧ್ವಜಕ್ಕೆ ಹೊಂದಿಯಾಗುವಂತಹ ಸೀರೆಯುಟ್ಟು ನಟಿ ರಾಗಿಣಿ ದ್ವಿವೇದಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸರಣಿ ಫೋಟೋಗಳನ್ನು ಶೇರ್ ಮಾಡಿರುವ ಅವರು,''ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ನಟಿ ರಚಿತಾ ರಾಮ್: ಇನ್ಸ್ಟಾಗ್ರಾಮ್ನಲ್ಲಿ ಕೆಂಪು ಸೀರೆಯುಟ್ಟ ಫೋಟೋ ಹಂಚಿಕೊಂಡಿರುವ ನಟಿ ರಚಿತಾ ರಾಮ್, ''ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ. ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅಮೃತ ಭಾರತಿಗೆ 50ರ ಕನ್ನಡದ ಆರತಿ: ದೇಶದ ಆರ್ಥಿಕ ವಿಕಾಸದ ಹಾದಿಯಲ್ಲಿ ಕರ್ನಾಟಕದ್ದೇ ಮೇಲ್ಪಂಕ್ತಿ
ನಟ ಜಗ್ಗೇಶ್ ಪೋಸ್ಟ್:'ಎಲ್ಲಾದರು ಇರು ಕನ್ನಡವಾಗಿರು, ಶುಭ ಬುಧವಾರ' ರಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಹಲವು ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ.
ನಟಿ-ಸಂಸದೆ ಸುಮಲತಾ ಅಂಬರೀಶ್: ಕನ್ನಡ ಚಿತ್ರರಂಗದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ತಾವು ಮತ್ತು ಪತಿ, ದಿ. ನಟ ಅಂಬರೀಷ್ ಇರುವ ಪೋಸ್ಟರ್ ಶೆರ್ ಮಾಡಿ, ''ನೀ ಮೆಟ್ಟುವ ನೆಲ - ಅದೇ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ... ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಉಸಿರಾಗಲಿ, ಕನ್ನಡವೇ ಹಸಿರಾಗಲಿ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕರುನಾಡಿಗೆ 50ರ ಸಂಭ್ರಮ: 21 ಕೋಟಿಯಿಂದ 3.27 ಲಕ್ಷ ಕೋಟಿವರೆಗಿನ ವಿಕಾಸದ ರಾಜ್ಯ ಬಜೆಟ್ ಇತಿಹಾಸ
ನಟ ರಿಷಬ್ ಶೆಟ್ಟಿ: ಕಾಂತಾರ ಸಾರಥಿ ರಿಷಬ್ ಶೆಟ್ಟಿ ಟ್ವೀಟ್ ಮಾಡಿ,''ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.