ಕರ್ನಾಟಕ

karnataka

ETV Bharat / entertainment

'ಎನ್​ಬಿಕೆ 108': ಕನ್ನಡತಿ ಶ್ರೀಲೀಲಾ​ಗೆ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಚಾನ್ಸ್‌! - ಈಟಿವಿ ಭಾರತ ಕನ್ನಡ

ನಟಿ ಶ್ರೀಲೀಲಾ ಅವರು 'ಎನ್​ಬಿಕೆ 108' ತೆಲುಗು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

movie
ಶ್ರೀಲೀಲಾ​

By

Published : Mar 10, 2023, 10:11 AM IST

ಕಿಸ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಟಾಲಿವುಡ್​ ಸೂಪರ್​ಸ್ಟಾರ್​ ನಂದಮೂರಿ ಬಾಲಕೃಷ್ಣ ಜೊತೆ ಕರುನಾಡ ಬೆಡಗಿ ನಟಿಸಲಿದ್ದಾರೆ. ಅನಿಲ್​ ರವಿಪುಡಿ ನಿರ್ದೇಶನದ 'ಎನ್​ಬಿಕೆ 108' ಸಿನಿಮಾದಲ್ಲಿ ಇವರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಘೋಷಿಸಿದೆ.

ಗುರುವಾರ ಹೈದರಾಬಾದ್​ನಲ್ಲಿ ನಡೆದ ಶೂಟಿಂಗ್​ನಲ್ಲಿ ಶ್ರೀಲೀಲಾ ಭಾಗವಹಿಸಿದ್ದಾರೆ. ಬಾಲಯ್ಯ ಮತ್ತು ಶ್ರೀಲೀಲಾ ಕೈ ಕೈ ಹಿಡಿದಿರುವ ಪೋಸ್ಟರ್​ ಬಿಡುಗಡೆಯಾಗಿದೆ. ಶ್ರೀ ಲೀಲಾ ನಗುತ್ತಾ ಕಣ್ಣು ಹೊಡೆದು ವಿಜಯದ ಚಿಹ್ನೆ ತೋರಿಸುತ್ತಿರುವುದು ಪೋಸ್ಟರ್​ನಲ್ಲಿ ಕಾಣುತ್ತದೆ. ಬಾಲಯ್ಯ ಅವರ ಮುಖವನ್ನು ಹೈಡ್​ ಮಾಡಲಾಗಿದೆ. ಅವರ ಕೈಯಲ್ಲಿರುವ ಖಡಗ ಮತ್ತು ಟ್ಯಾಟು ಕಂಡುಬಂದಿದೆ.

ಈ ಪೋಸ್ಟರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ ಎನ್​ಬಿಕೆ 108 ಚಿತ್ರದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಅನಿಲ್​ ರವಿಪುಡಿ ಹೇಳಿದ್ದರು. ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಮಾಹಿತಿ ಸಿಕ್ಕಿತ್ತು. ಇದೀಗ ಶ್ರೀ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದು ಅಧಿಕೃತವಾಗಿದೆ.

ಇದನ್ನೂ ಓದಿ:ಖಳನಟ ವಜ್ರಮುನಿಯ ‘‘ಯಲಾ‌ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್

ಈವರೆಗೆ ಅನಿಲ್​ ರವಿಪುಡಿ ಅವರು ಪಟಾಸ್​, ಎಫ್​ 2, ಎಫ್​ 3, ಸರಿಲೇರು ನೀಕೆವರು ಮುಂತಾದ ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎಲ್ಲಾ ಚಿತ್ರಗಳಿಗಿಂತ ಕೊಂಚ ವಿಭಿನ್ನವಾಗಿಯೇ ಎನ್​ಬಿಕೆ 108 ತಯಾರಾಗುತ್ತಿದೆಯಂತೆ. ಸಿನಿಮಾದಲ್ಲಿ ಬಾಲಕೃಷ್ಣ ಅವರ ಮಗಳಾಗಿ ಶ್ರೀಲೀಲಾ ನಟಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಬಾಲಯ್ಯರೊಂದಿಗೆ ನಾಯಕಿಯಾಗಿ ಯಾರು ನಟಿಸುತ್ತಾರೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಅದರೆ ಕಾಜಲ್​ ಅಗರ್ವಾಲ್​ ಹೆಸರು ಮೊದಲಿಗೆ ಕೇಳಿಬರುತ್ತಿದೆ. ಶೈನ್​ ಸ್ಕ್ರೀನ್ಸ್​ ನಿರ್ಮಿಸಿರುವ ಚಿತ್ರಕ್ಕೆ ತಮನ್​ ಸ್ವರ ಸಂಗೀತ ನೀಡಿದ್ದಾರೆ.

'ಪೆಲ್ಲಿ ಸಂದದ್​' ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಶ್ರೀಲೀಲಾ ಮೊದಲ ಪ್ರಯತ್ನದಲ್ಲೇ ಮನ್ನಣೆ ಗಳಿಸಿದ್ದರು. ರವಿತೇಜರೊಂದಿಗೆ ನಟಿಸಿದ 'ಧಮಾಕಾ' ಸಿನಿಮಾ ಅವರಿಗೆ ಹೆಸರು​ ತಂದುಕೊಟ್ಟಿತು. ಇದೀಗ ಎನ್​ಬಿಕೆ 108 ಸೇರಿದಂತೆ ಅನೇಕ ಟಾಪ್​ ಹೀರೋಗಳ ಚಿತ್ರಗಳಲ್ಲಿ ಶ್ರೀಲೀಲಾಗೆ ಅವಕಾಶಗಳು ಹರಿದುಬರುತ್ತಿವೆ.

ಇದನ್ನೂ ಓದಿ:ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ: ಮತ್ತೊಂದು ಗೆಲುವು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು

ABOUT THE AUTHOR

...view details