ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂಲಕ ವಿಶ್ವದಾದ್ಯಂತ ಸೂಪರ್ ಸ್ಟಾರ್ ಆದ ನಟ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1,500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಅವರಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡ ನಂತರ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋದು ಎಲ್ಲರ ಕುತೂಹಲ.
ಸದ್ಯಕ್ಕೆ ಅವರ ಯಾವುದೇ ಚಿತ್ರದ ಬಗ್ಗೆ ಅನೌನ್ಸ್ ಆಗಿಲ್ಲ. ಆದರೆ ನಟ ಯಶ್ ಮಾತ್ರ ಮಕ್ಕಳು ಹಾಗೂ ಪತ್ನಿ ರಾಧಿಕಾ ಪಂಡಿತ್ ಜೊತೆ ಟ್ರಿಪ್ ಅಂತಾ ಫಾರಿನ್ ಪ್ರವಾಸ ಮಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್ ಒಂದು ಮಿಷನ್ ಗನ್ ಹಿಡಿದು ಎದುರಾಳಿಯನ್ನು ಶೂಟ್ ಮಾಡುವ ಸನ್ನಿವೇಶ ಅಂತು ಯಶ್ ಸ್ಟಾರ್ ಡಮ್ ಅನ್ನು ಹೆಚ್ಚಿಸಿತ್ತು. ಇದೀಗ ರಾಕಿ ಭಾಯ್ ಗನ್ ಹಿಡಿದು ಶೂಟ್ ಮಾಡುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಅಂದ ಹಾಗೆ ರಾಕಿಂಗ್ ಸ್ಟಾರ್ ಯಶ್ ಸದ್ಯ ಕುಟುಂಬದ ಜೊತೆ ಭರ್ಜರಿ ಟ್ರಿಪ್ ಮಾಡುತ್ತಿದ್ದಾರೆ. ಅಲ್ಲದೇ ಯಶ್ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಜೊತೆಗಿನ ವಿಡಿಯೋ, ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯಶ್ ಮತ್ತೊಮ್ಮೆ ಗನ್ ಹಿಡಿದು ಫೀಲ್ಡ್ಗೆ ಇಳಿದಿದ್ದಾರೆ.
ಆದರೆ, ಇದು ಸಿನಿಮಾದ ಶೂಟಿಂಗ್ಗಾಗಿ ಅಲ್ಲ. ಕೇವಲ ಮನೋರಂಜನೆಗಾಗಿ ಶೂಟಿಂಗ್ ಗೇಮ್ ಆಟವನ್ನು ಆಡಿದ್ದಾರೆ. ಇದರ ವಿಡಿಯೋ ತುಣುಕನ್ನು ಅವರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.