ಬೆಂಗಳೂರು :ನಗರದ ಆರ್‌ಆರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆ ಎಂಬಲ್ಲಿ ಸ್ಯಾಂಡಲ್ವುಡ್ ಯುವ ನಟ ಸತೀಶ್ ವಜ್ರ ಎಂಬುವರ ಭೀಕರ ಹತ್ಯೆ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ನಟನ ಬಾಮೈದನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಲ್ಲಿ ಸ್ಯಾಂಡಲ್ವುಡ್ ಯುವ ನಟನ ಬರ್ಬರ ಹತ್ಯೆ - ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ಯುವ ನಟನ ಹತ್ಯೆ
ಬೆಂಗಳೂರಿನ ಆರ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣಗೆರೆ ಎಂಬಲ್ಲಿ ಸ್ಯಾಂಡಲ್ವುಡ್ ಯುವ ನಟನ ಕೊಲೆ ಮಾಡಲಾಗಿದೆ.
ಬೆಂಗಳೂರಲ್ಲಿ ಸ್ಯಾಂಡಲ್ವುಡ್ ಯುವ ನಟನ ಬರ್ಬರ ಹತ್ಯೆ
ಇತ್ತೀಚೆಗೆ 'ಲಗೋರಿ' ಎಂಬ ಕಿರು ಚಿತ್ರದ ಮೂಲಕ ಸತೀಶ್ ಜನರ ಗಮನ ಸೆಳೆದಿದ್ದರು. ಮೂಲತಃ ಮದ್ದೂರು ಮೂಲದ ಯುವ ನಟ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚಿರಪರಿಚಿತರಾಗಿದ್ದರು. 3 ತಿಂಗಳ ಹಿಂದಷ್ಟೆ ಸತೀಶ್ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶವವನ್ನು ಮರಣೋತ್ತರ ಪರಿಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಆರ್‌ಆರ್‌ನಗರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಅಪಾರ್ಟ್ಮೆಂಟ್ ನಲ್ಲಿ ಡ್ರಗ್ಸ್ ಪಾರ್ಟಿ ಶಂಕೆ: ವಿದೇಶಿ ಪ್ರಜೆಗಳು ಸೇರಿ ಯುವತಿ - ಯುವಕ ಅಂದರ್
Last Updated : Jun 18, 2022, 3:33 PM IST
TAGGED:
ಯುವ ನಟ ಸತೀಶ್ ವಜ್ರ ಕೊಲೆ