ಕರ್ನಾಟಕ

karnataka

ETV Bharat / entertainment

Kushi Review: ಸಮಂತಾ ವಿಜಯ್​ ದೇವರಕೊಂಡ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?! - ಕುಶಿ ಲೇಟೆಸ್ಟ್ ನ್ಯೂಸ್

Kushi: ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ ಕುಶಿ ಸಿನಿಮಾ ಇಂದು ಬಿಡುಗಡೆ ಆಗಿದೆ.

samantha Vijay Deverakonda starrer Kushi
ಸಮಂತಾ ವಿಜಯ್​ ದೇವರಕೊಂಡ ಕುಶಿ ಸಿನಿಮಾ

By ETV Bharat Karnataka Team

Published : Sep 1, 2023, 2:01 PM IST

ಅಭಿಮಾನಿಗಳ ಕಾಯುವಿಕೆ ಪೂರ್ಣಗೊಂಡಿದೆ. ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಕುಶಿ' ಇಂದು ತೆರೆಗಪ್ಪಳಿಸಿದೆ. ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ಕಲಾವಿದರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಅಭಿನಯದ ಕುಶಿ ಸಿನಿಮಾ ತನ್ನ ಟ್ರೇಲರ್​ ಮೂಲಕ ದೇಶಾದ್ಯಂತ ಉತ್ಸಾಹ ಹೆಚ್ಚಿಸಿತ್ತು. ಕಥೆ ತಿಳಿದುಕೊಳ್ಳಲು ಕಾತರರಾಗಿದ್ದ ಪ್ರೇಕ್ಷಕರಿಂದು ಚಿತ್ರಮಂದಿರಗಳತ್ತ ದೌಡಾಯಿಸಿ, ಸಿನಿಮಾ ಕಣ್ತುಂಬಿಕೊಂಡರು. ಸಾಂಗ್ಸ್, ಟ್ರೇಲರ್​ ಮೂಲಕ ಕುತೂಹಲ ಮೂಡಿಸಿದ್ದ ಸಿನಿಮಾ ಸದ್ಯ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ.

ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಕಾಂಬಿನೇಶನ್​ನ ಎರಡನೇ ಸಿನಿಮಾವಿದು. ಇದಕ್ಕೂ ಮುನ್ನ ಮಹಾನಟಿ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಜೋಡಿ ಅಭಿನಯದ ಎರಡನೇ ಸಿನಿಮಾ ಮೇಲೆ ನಿರೀಕ್ಷೆ ಕೊಂಚ ಹೆಚ್ಚಿತ್ತು. ಅದರಂತೆ ಇಂದು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಮೊದಲ ಶೋಗಳನ್ನು ವೀಕ್ಷಿಸಿರುವ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪಾಸಿಟಿವ್​ ಮೌತ್​ ಟಾಕ್ಸ್ ಮುಂದುವರಿದರೆ ಸಿನಿಮಾ ಗೆಲ್ಲೋದು ಬಹುತೇಕ ಖಚಿತ.

ಸಿನಿಮಾದ ಕಥಾವಸ್ತು, ಹಾಡುಗಳು, ಹಿನ್ನೆಲೆ ಸಂಗೀತ, ಪಾತ್ರಗಳು, ನಟನೆಗೆ ಪಾಸಿಟಿವ್​ ರಿವ್ಯೂವ್​ ಸಿಕ್ಕಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಹೆಚ್ಚಿನವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ನಟನೆಯ ಕೊನೆಯ ಸಿನಿಮಾಗಳಾದ ಶಾಕುಂತಲಂ ಮತ್ತು ಲೈಗರ್​ ಬಾಕ್ಸ್​ ಆಫೀಸ್​​ನಲ್ಲಿ ಹಿನ್ನೆಡೆ ಕಂಡಿರುವುದು ನಿಮಗೆ ತಿಳಿದಿರುವ ವಿಚಾರವೇ. ಹಾಗಾಗಿ ಇಬ್ಬರಿಗೂ ಯಶಸ್ಸಿನ ಅಗತ್ಯವಿದ್ದು, ಕುಶಿ ಚಿತ್ರದ ಮೇಲೆ ಭರವಸೆ ಹೊಂದಿದ್ದಾರೆ.

ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳಿರುವ ಸಿನಿಮಾ ಸಮಂತಾ ವಿಜಯ್​ ಕೆಮಿಸ್ಟ್ರಿಯಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುವ ಸಾಧ್ಯತೆಗಳಿವೆ. ಈ ಜೋಡಿ ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಒಟ್ಟಾಗಿ ತೆರೆ ಮೇಲೆ ಬಂದಿದ್ದಾರೆ. ಇದೊಂದು ಕಂಪ್ಲೀಟ್​ ರೊಮ್ಯಾಂಟಿಕ್​ ಲವ್​ಸ್ಟೋರಿ ಮತ್ತು ಫ್ಯಾಮಿಲಿ ಎಂಟರ್​ಟೈನರ್​ ಚಿತ್ರವಾಗಿದೆ. ಚಿತ್ರ ಕಥಾಹಂದರವನ್ನು ಶ್ಲಾಘಿಸಿ ಪ್ರೇಕ್ಷಕರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಭಾವನೆಗಳ ಜೊತೆ ಸುಂದರ ಪಯಣವಿದು.. ಭಾವಪೂರ್ಣ ಸಿನಿಮಾದಲ್ಲಿ ನಟ ರಮೇಶ್ ಪಂಡಿತ್

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟ್ವೀಟ್​ ಮಾಡಿ, ''ಉತ್ತಮವಾಗಿ ರೂಪಿಸಲ್ಪಟ್ಟ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ, ನಮ್ಮ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದಾದಂತ ಸಿನಿಮಾ, ಶಿವ ನಿರ್ವಾಣ ಅವರ ನಿರೂಪಣೆ ಅತ್ಯುತ್ತಮವಾಗಿದೆ, ಸಿನಿಮಾ ಉದ್ದಕ್ಕೂ ಮನರಂಜನೆ ಇದೆ, ತಿಂಗಳುಗಳ ಬಳಿಕ ಫ್ರೆಶ್​ ಎಂಟರ್​ಟೈನರ್​ ಸಿನಿಮಾ ಸಿಕ್ಕಿದೆ, ಬ್ಲಾಕ್​​ಬಸ್ಟರ್, ರೇಟಿಂಗ್​: 3.5/5'' ಎಂದು ಬರೆದಿದ್ದಾರೆ. ಮತ್ತೋರ್ವ ನೆಟ್ಟಿಗ ಟ್ವೀಟ್​ ಮಾಡಿದ್ದು, ''ಕುಶಿ ಬ್ಲಾಕ್​ಬಸ್ಟರ್ ವೈಬ್ಸ್​, ಕುಶಿಗಾಗಿ ನನ್ನ ಪಾಸಿಟಿವ್​ ರಿವ್ಯೂವ್​, 5 ವರ್ಷಗಳ ಬಳಿಕ ಬ್ಲಾಕ್​​ಬಸ್ಟರ್ ಸಿನಿಮಾ ಮಾಡಿದ್ದಕ್ಕೆ ವಿಜಯ್​ ದೇವರಕೊಂಡ ಅವರಿಗೆ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ದುಬೈನ​ ಬುರ್ಜ್​ ಖಲೀಫಾದಲ್ಲಿ ಜವಾನ್​ ಟ್ರೇಲರ್​ ಅನಾವರಣ: 'ನನ್ನ ಬೋಳುತಲೆ ನೋಟ ಇದೇ ಮೊದಲು ಮತ್ತು ಕೊನೆ' ಎಂದ ಶಾರುಖ್​​

ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಜೋಡಿ ವಿಪ್ಲವ್​ ಹಾಗೂ ಆರಾಧ್ಯ ಪಾತ್ರಗಳನ್ನು ನಿರ್ವಹಿಸಿದೆ. ಇಬ್ಬರೂ ವಿಭಿನ್ನ ಹಿನ್ನೆಲೆಯಿಂದ ಬಂದವರು. ಇವರ ಪ್ರೀತಿಗೆ ಪೋಷಕರ ಸಮ್ಮತಿ ಇರುವುದಿಲ್ಲ. ತಂದೆ ತಾಯಿ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುತ್ತಾರೆ. ನಂತರ ಅವರ ಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ.

ABOUT THE AUTHOR

...view details