ಹೈದರಾಬಾದ್:ನಾನು ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟಾಲಿವುಡ್ ನಟಿ ಸಮಂತಾ ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಕಳೆದ ಕೆಲವು ತಿಂಗಳುಗಳಿಂದ ನಾನು "ಮಯೋಸಿಟಿಸ್" ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನಾನು ಆದಷ್ಟು ಬೇಗ ಹುಷಾರಾಗುತ್ತೀನಿ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಸಹ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನಟಿಯ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹರಿದಾಡತೊಡಗಿದ್ದವು. ಸಮಂತಾ ಚರ್ಮದ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದವು. ಇದರಿಂದ ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದರು. ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಸಮಂತಾ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸ್ವತಃ ಈ ಕುರಿತು ಹೇಳಿಕೊಂಡಿರುವ ಸಮಂತಾ, ಒಂದು ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ. ಡ್ರಿಪ್ಸ್ ಹಾಕಿಕೊಂಡೇ ಚಿತ್ರದ ಡಬ್ಬಿಂಗ್ ಮಾಡುತ್ತಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ. ಯಶೋದಾ ಚಿತ್ರದ ಟ್ರೈಲರ್‌ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ಬದುಕು ನನ್ನ ಮುಂದೆ ಕೊನೆಯಿಲ್ಲದ ಸವಾಲುಗಳನ್ನು ಇಟ್ಟಿದೆ. ನಿಮ್ಮ ಪ್ರೀತಿ ಮತ್ತು ಬಾಂಧವ್ಯವು ಆ ಸವಾಲುಗಳನ್ನು ಎದುರಿಸಲು ನನಗೆ ಹೆಚ್ಚಿನ ನೈತಿಕತೆ ಮತ್ತು ಧೈರ್ಯವನ್ನು ನೀಡುತ್ತದೆ. ಕಳೆದ ಕೆಲವು ತಿಂಗಳುಗಳಿಂದ "ಮಯೋಸಿಟಿಸ್" ಎಂಬ ಆಟೋಇಮ್ಯೂನ್ ಸ್ಥಿತಿಗೆ ಚಿಕಿತ್ಸೆ ಪಡೆಯುತ್ತಿರುವೆ. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಇದನ್ನು ನಿಮ್ಮೊಂದಿಗೆ ಸ್ವಲ್ಪ ತಡವಾಗಿ ಹಂಚಿಕೊಳ್ಳುತ್ತಿದ್ದೇನೆ.