ಮುಂಬೈ:ನಟಿ ಸಮಂತಾ ರುತ್ ಪ್ರಭ್ ಅವರ ಬಹುನಿರೀಕ್ಷಿತ ಚಿತ್ರ 'ಶಾಕುಂತಲಂ' ಇನ್ನೇನು ತೆರೆಗೆ ಬರಲು ಸಜ್ಜಾಗಿದೆ. ಈ ಮೊದಲು ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಚಿತ್ರದ ಕಾತುರತೆ ಮಟ್ಟ ಹೆಚ್ಚಿಸಿದೆ. ಪುರಾಣ ಕಥೆಯನ್ನು ಹೊಂದಿರುವ 'ಶಾಕುಂತಲಂ' ಚಿತ್ರದ ಮೊದಲ ಹಾಡನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. 'ಮಲ್ಲಿಕಾ ಮಲ್ಲಿಕಾ' ಹಾಡು ಬಿಡುಗಡೆಯಾಗಿದ್ದು, ಈ ಬಗ್ಗೆ ನಟಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಹಾಡಿನ ಸಮರ್ಪಣೆ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಸ್ಟಿಲ್ ಫೋಟೋವನ್ನು ಹಂಚಿಕೊಂಡಿರುವ ನಟಿ, ಮಲ್ಲಿಕಾ ನಿಮಗಾಗಿ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಬಿಳಿ ಉಡುಗೆಯಲ್ಲಿ ಕೊಳದ ಮುಂದೆ ನಟಿ ಸಮಂತಾ ಕಂಡು ಬಂದಿದ್ದಾರೆ. ಇನ್ನು ಈ ಹಾಡಿಗೆ ರಮ್ಯಾ ಬೆಹ್ರಾ ಧ್ವನಿಯಾಗಿದ್ದರು, ಮಣಿ ಶರ್ಮಾ ನಿರ್ದೇಶನ ಮಾಡಿದ್ದಾರೆ. ಇನ್ನು ಹಾಡಿನ ಸಾಹಿತ್ಯವನ್ನು ಚೈತನ್ಯ ಪ್ರಸಾದ್ ಬರೆದಿದ್ದಾರೆ.
ಅಭಿಮಾನಿಗಳಿಂದ ಮೆಚ್ಚುಗೆ: ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಪ್ರೀತಿಯ ಶುಭಾಶಯಗಳನ್ನು ಹರಿಸಿದ್ದಾರೆ. 'ನಿಮ್ಮ ನೋಟ ನನ್ನ ಎದೆ ಬಡಿತ ಹೆಚ್ಚಿಸಿದೆ' ಎಂಬು ಒಬ್ಬ ಅಭಿಮಾನಿ ಬರೆದರೆ ಮತ್ತೊಬ್ಬರು 'ನೀವು ಈ ಕಾಲದ ರಾಣಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ರೋಮ್ಯಾಂಟಿಕ್ ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ದುಷ್ಯಂತನಾಗಿ ದೇವ್ ಮೋಹನ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಎಂದರೆ, ಈ ಸಿನಿಮಾದಲ್ಲಿ ಪುಷ್ಪ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರ ಮಗಳು ನಟಿಸುತ್ತಿದ್ದಾಳೆ, ಇದೇ ಮೊದಲ ಬಾರಿಗೆ ಈಕೆ ತೆರೆ ಮೇಲೆ ಬಣ್ಣ ಹಚ್ಚಿದ್ದಾಳೆ