ಹೈದರಾಬಾದ್: ಸಮಂತಾ ರುತ್ ಪ್ರಭು ಮೊದಲ ಬಾರಿಗೆ ಪೌರಣಿಕ ಪಾತ್ರದಲ್ಲಿ ಬಣ್ಣ ಹಚ್ಚಿದ ಸಿನಿಮಾ ಶಾಂಕುಂತಲಂ. ಕಾಳಿದಾಸನ ಅಭಿಜ್ಞಾ ಶಾಕುಂತಲ ಸಂಸ್ಕೃತ ನಾಟಕ ಆಧಾರಿತ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಕಂಡಿದೆ. ಚಿತದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮಂತಾ ಅಭಿನಯಕ್ಕೆ ಜನರು ಮೆಚ್ಚಿದ್ದಾರೆ. ಸಿನಿಮಾ ಉದ್ಯಮದ ಪ್ರಕಾರ, ಮೊದಲ ದಿನದಿನವೇ ಗುಣಶೇಖರ್ ನಿರ್ದೇಶನದ ಈ ಸಿನಿಮಾ ಹೆಚ್ಚಿನ ವೀಕ್ಷಣೆ ಕಂಡಿದ್ದು, ಎಲ್ಲಾ ಭಾಷೆಗಳಲ್ಲಿ 5 ಕೋಟಿ ಲಾಭಾಗಳಿಸಿದೆ.
ತೆಲುಗು ರಾಜ್ಯದಲ್ಲಿ ಶಾಕುಂತಲಂ ಚಿತ್ರ ಥೀಯೆಟರ್ನಲ್ಲಿ ಶೇ 32.60ರಷ್ಟು ದರದಲ್ಲಿ ಆಸನಗಳ ಭರ್ತಿ ಯಾಗಿದೆ. ಸಮಂತಾ ಅಭಿನಯದ ಈ ಹಿಂದಿನ ಸಿನಿಮಾ ಯಶೋಧಾಗಿಂತ ಇದು ಉತ್ತಮ ಗಳಿಕೆ ಕಂಡಿದೆ ಎನ್ನಲಾಗಿದೆ. ಚಿತ್ರದಲ್ಲಿನ ಪ್ರಮುಖ ಪಾತ್ರವಾದ ಶಾಕುಂತಲಗೆ ನಟಿ ಸಮಂತಾ ಜೀವ ತುಂಬಿದ್ದು, ದೇವ್ ಮೋಹನ್ ದುಷ್ಯಂತನಾಗಿ ಕಾಣಿಸಿಕೊಂಡಿದ್ದಾರೆ. ವಾರಂತ್ಯದಲ್ಲಿ ಈ ಸಿನಿಮಾ ಮತ್ತಷ್ಟು ಜನರನ್ನು ಸೆಳೆಯುವಲ್ಲಿ ಸಫಲವಾಗಲಿದೆ ಎನ್ನಲಾಗಿದೆ.
ಸಮಂತಾ ಅಭಿನಯದ ಹಿಂದಿನ ಸಿನಿಮಾ ಯಶೋಧಾ ಮೊದಲ ದಿನ 3 ಕೋಟಿ ಲಾಭದೊಂದಿಗೆ ವಾರದೊಳಗೆ 10 ಕೋಟಿಯನ್ನು ಗಳಿಕೆಯ ದಾಖಲೆಯನ್ನು ಬಾಕ್ಸ್ ಆಫೀಸ್ ಹೊಂದಿದೆ. ಶಾಕುಂತಲಂ ಇದಕ್ಕೆ ಹೋಲಿಕೆ ಮಾಡಿದರೆ, ಶಾಕುಂತಲಂ ಹೆಚ್ಚಿನ ಗಳಿಕೆ ಮಾಡಿದ್ದು, ಮುಂದಿನ ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ಮತ್ತಷ್ಟು ದಾಖಲೆ ಬರೆಯಲಿದೆ ಎಂದು ಅಂದಾಜಿಸಲಾಗಿದೆ.
ಶಾಕುಂತಲಂ ಸಿನಿಮಾವನ್ನು ನಿರ್ಮಾಪಕರು ಭಾರೀ ಬಜೆಟ್ನಲ್ಲಿ ನಿರ್ಮಿಸಿದ್ದು, ಇದನ್ನು ಟ್ರೈಲರ್ನಲ್ಲೇ ಕಾಣಬಹುದಾಗಿದೆ. ಅದ್ದೂರಿ ಸೆಟ್ಗಳ ಉತ್ತಮ ಛಾಯಗ್ರಾಹಣ ಚಿತ್ರವನ್ನು ಮತ್ತಷ್ಟು ಶ್ರೀಮಂತವಾಗಿಸಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾರೆ. ಇದರ ಹೊರತಾಗಿ ಅಧಿತಿ ಬಾಲನ್, ಗೌತಮಿ, ಸಚ್ಚಿನ್ ಖೇಡೆಕರ್ ಮತ್ತು ಅನನ್ಯಾ ನಗಲ್ಲಾ ಸೇರಿದಂತೆ ಹಲವು ಚಿತ್ರ ಕಲಾವಿದರ ತಂಡ ಇದೆ.
ಚಿತ್ರಕ್ಕೆ ಫಿಲ್ಮ್ ಮೇಕರ್ ರಾಜ್ ಮತ್ತು ಡಿಕೆ ಮೆಚ್ಚಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಸಮಂತಾ ರುತ್ ಪ್ರಭು ಮತ್ತು ವರಣ್ ಧವನ್ ಅಭಿಯನದ ಸಿಟೆಡಾಲ್ ಅನ್ನು ರಾಜ್ ಮತ್ತು ಡಿಕೆ ನಿರ್ಮಿಸಿದ್ದಾರೆ. "ಮ್ಯಾಜಿಕಲ್ ಸೀನ್ಗಳು, ಉತ್ತಮ ಕಥೆ, ಜತೆಗೆ ಸಮಂತಾರ ಉತ್ತಮ ಪ್ರದರ್ಶನ ಗಮನ ಸೆಳೆಯುವಂತಿದೆ. ಕಾಳಿದಾಸರ ಮೇರುಕೃತಿಗೆ ಇದಕ್ಕಿಂತ (ಸಿನಿಮಾ, ಸಮಂತಾ ನಟನೆ) ಉತ್ತಮವಾದದ್ದು ಇರಲಾರದು. ಸಮಂತಾ ನೀವು ಮಾತ್ರ ಈ ಬೃಹತ್ ಮಹಾಕಾವ್ಯವನ್ನು ಇಷ್ಟು ಉತ್ತಮವಾಗಿ ಸಾಗಿಸಲು ಸಾಧ್ಯ. ಇಡೀ ತಂಡಕ್ಕೆ ಅಭಿನಂದನೆಗಳು, ನೋಡಲೇಬೇಕಾದ ಚಿತ್ರ'' ಎಂದು ಟ್ವೀಟ್ ಮಾಡಿ, ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ: ಈಗಾಗಲೇ ಕಾಳಿದಾಸನ ಈ ಅಭಿಜ್ಞಾ ಶಾಕುಂತಲೆ ನಾಟಕ ಆಧಾರಿಸಿ ಅನೇಕ ಭಾಷೆಗಳಲ್ಲಿ ಚಿತ್ರಗಳು ಹೊರ ಬಂದಿದೆ. ಇದೀಗ ಹೊಸ ಅವತರಣಿಕೆಯಲ್ಲಿ ಪಂಚ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಿಳಿ ಉಡುಪಿನಲ್ಲಿ ಕಂಗೊಳಿಸಿರುವ ನಟಿ ಸಮಂತಾ ಶಾಕುಂಲತೆ ಪ್ರತಿಬಿಂಬದಂತೆ ಕಾಣುತ್ತಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಥಿಯೇಟರ್, ಒಟಿಟಿ, ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ವರಾಹ ರೂಪಂ' ಹಾಡು ಬಳಸದಂತೆ ಕೋರ್ಟ್ ಆದೇಶ