ಕರ್ನಾಟಕ

karnataka

ETV Bharat / entertainment

''ಸ್ಟಾರ್​ ನಟಿಯಾಗಿ ವೃತ್ತಿ ಜೀವನ ಮುಗಿಯಿತು'' ಎಂದ ನಿರ್ಮಾಪಕರಿಗೆ ಸಮಂತಾ ತಿರುಗೇಟು - ನಿರ್ಮಾಪಕ ಚಿಟ್ಟಿಬಾಬು

ತನ್ನ ವೃತ್ತಿಜೀವನ ಮುಗಿಯಿತೆಂದು ಟೀಕೆಗಳ ಸುರಿಮಳೆಗೈದಿದ್ದ ಟಾಲಿವುಡ್​ ನಿರ್ಮಾಪಕ ಚಿಟ್ಟಿ ಬಾಬುವಿಗೆ ನಟಿ ಸಮಂತಾ ರುತ್​​ ಪ್ರಭು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

samantha-ruth-prabhus-killer-comeback-on-producer-claiming-her-career-is-over
''ಸ್ಟಾರ್​ ನಟಿಯಾಗಿ ವೃತ್ತಿ ಜೀವನ ಮುಗಿಯಿತು'' ಎಂದ ನಿರ್ಮಾಪಕರಿಗೆ ಸಮಂತಾ ತಿರುಗೇಟು

By

Published : Apr 23, 2023, 4:32 PM IST

ಹೈದರಾಬಾದ್ : ನಟಿ ಸಮಂತಾ ರುತ್​ ಪ್ರಭು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ತನ್ನ ವೃತ್ತಿ ಜೀವನದ ಬಗ್ಗೆ ಕಟುವಾಗಿ ಟೀಕಿಸಿದ್ದ ಟಾಲಿವುಡ್​ ನಿರ್ಮಾಪಕ ಚಿಟ್ಟಿ ಬಾಬು ಅವರಿಗೆ ತಮ್ಮದೇ ರೀತಿಯಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಬಹು ಬೇಡಿಕೆಯ ನಟಿಯಾಗಿರುವ ನಟಿ ಸಮಂತಾ ವಿರುದ್ಧ ನಿರ್ಮಾಪಕ ಚಿಟ್ಟಿ ಬಾಬು ಟೀಕಾ ಪ್ರಹಾರ ನಡೆಸಿದ್ದರು. ಸ್ಟಾರ್​ ಹೀರೋಯಿನ್​ ಆಗಿ ವೃತ್ತಿ ಜೀವನ ಮುಗಿಯಿತು. ಈಗ ತನ್ನ ಚಿತ್ರಗಳನ್ನು ಪ್ರಚಾರ ಮಾಡಲು ಚೀಪ್​ ಟ್ರಿಕ್ಸ್​ ಬಳಸುತ್ತಾರೆ ಎಂದು ಚಿಟ್ಟಿ ಬಾಬು ವಾಗ್ದಾಳಿ ನಡೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಂತಾ, ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ. ಇದರಲ್ಲಿ ಕಿವಿಯಲ್ಲಿ ಕೂದಲು ಯಾಕೆ ಬೆಳೆಯುತ್ತದೆ ಎಂದು ಗೂಗಲ್​ ಮಾಡಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ನಲ್ಲಿ 'ಹೆಚ್ಚಿದ ಟೆಸ್ಟೋಸ್ಟೆರಾನ್' ನಿಂದಾಗಿ ಕಿವಿಯಲ್ಲಿ ಕೂದಲು ಬೆಳೆಯುತ್ತದೆ. ಈ ಇನ್​​ಸ್ಟಾಗ್ರಾಮ್​ನಲ್ಲಿ ಸ್ಟೋರಿಗೆ "#IYKYK" ಎಂಬ ಹ್ಯಾಶ್‌ ಟ್ಯಾಗ್ ಹಾಕಿದ್ದಾರೆ. ಈ ಮೂಲಕ ನಿರ್ಮಾಪಕರನ್ನು ಸಮಂತಾ ವ್ಯಂಗ್ಯವಾಡಿದ್ದಾರೆ.

ನಿರ್ಮಾಪಕ ಚಿಟ್ಟಿಬಾಬು ಅವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ಗಮನಿಸಬಹುದು. ಸಮಂತಾ ಅವರ ಅಭಿಮಾನಿಗಳು ನಟಿಯ ಪ್ರತಿಕ್ರಿಯೆಯ ಜೊತೆಗೆ ನಿರ್ಮಾಪಕರ ಫೋಟೋವನ್ನು ಎಡಿಟ್​ ಮಾಡಿ ಪೋಸ್ಟ್​​ ಶೇರ್​ ಮಾಡಿಕೊಂಡಿದ್ದಾರೆ. ಇನ್ನು, ಸಮಂತಾ ತನ್ನ ಮೇಲೆ ಯಾರಾದರೂ ಟೀಕಾಪ್ರಹಾರ ನಡೆಸಿದರೆ ತಮ್ಮದೇ ರೀತಿಯಲ್ಲಿ ತಿರುಗೇಟು ನೀಡುತ್ತಾರೆ.

ನಿರ್ಮಾಪಕ ಚಿಟ್ಟಿಬಾಬು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸಮಂತಾ ಬಗ್ಗೆ, ಸ್ಟಾರ್​ ನಟಿಯ ವೃತ್ತಿ ಜೀವನ ಮುಗಿಯಿತು. ಜೊತೆಗೆ ತಮ್ಮ ಸಿನೆಮಾಗಳನ್ನು ಪ್ರಚಾರ ನಡೆಸಲು ಚೀಪ್​ ಟ್ರಿಕ್​ಗಳನ್ನು ಬಳಕೆ ಮಾಡುತ್ತಿದ್ದಾಳೆ ಎಂದಿದ್ದರು.

ಈ ಬಗ್ಗೆ ಸಮಂತಾ ತಮ್ಮ ಇನ್​ಸ್ಟಾಗ್ರಾಮ್​​ ನಲ್ಲಿ ಕಾರಿನಲ್ಲಿ ಕುಳಿತು ಗಾಢವಾಗಿ ಆಲೋಚಿಸುತ್ತಿರುವ ಫೋಟೊ ಒಂದನ್ನು ಹಂಚಿಕೊಂಡು, ಭಗವದ್ಗೀತೆಯ ಸಾಲುಗಳನ್ನು ಅಡಿಬರಹವಾಗಿ ಬರೆದುಕೊಂಡಿದ್ದರು. ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ. ಮಾ ಕರ್ಮಾ ಫಲ ಹೇತುರ್ಭೂ ಮಾತೇ ಸಂಗೋಸ್ತ್ವ ಕರ್ಮಣಿ ಎಂಬ ಶ್ಲೋಕವನ್ನು ಹಾಕಿಕೊಂಡಿದ್ದರು. ಇದರರ್ಥ ನಿನ್ನ ಕರ್ತವ್ಯವನ್ನು ನೀನು ಮಾಡು. ಅದರ ಫಲಾಫಲವನ್ನು ನನಗೆ ಬಿಡು ಎಂದು. ಈ ಮೂಲಕ ತಮ್ಮ ಮೇಲಿನ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದರು.

ಸಮಂತಾ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ, ಸಮಂತಾ ನಟನೆಯ ಪೌರಾಣಿಕ ಕಥೆಯನ್ನು ಆಧರಿಸಿರುವ ಸಿನಿಮಾ ಶಾಕುಂತಲಂ ತೆರೆ ಕಂಡು ಅಷ್ಟೇನೂ ಸದ್ದು ಮಾಡಿಲ್ಲ. ಸುಮಾರು 60 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ನಿರೀಕ್ಷೆಯಷ್ಟು ಗಳಿಕೆ ಮಾಡಿಲ್ಲ. ಸದ್ಯ ಬಾಲಿವುಡ್​ ನಟ ವರುಣ್ ಧವನ್ ಜೊತೆ ಸಿಟಾಡೆಲ್ ಎಂಬ ವೆಬ್ ಸೀರೀಸ್​ನಲ್ಲಿ ಸಮಂತಾ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಶಿವ ನಿರ್ವಾಣ ನಿರ್ದೇಶನದ ತೆಲುಗು ರೋಮ್ಯಾಂಟಿಕ್ ಡ್ರಾಮಾ ಖುಶಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ :ಶಾಕುಂತಲೆ ಸಮಂತಾ ಭಗವದ್ಗೀತೆ ಶ್ಲೋಕ ಹೇಳಿದ್ದೇಕೆ?

ABOUT THE AUTHOR

...view details