ಕರ್ನಾಟಕ

karnataka

ETV Bharat / entertainment

ನಿರ್ಮಾಪಕರಿಗೆ ಅಡ್ವಾನ್ಸ್ ಹಣ​ ವಾಪಸ್​ ಕೊಟ್ಟ ನಟಿ ಸಮಂತಾ.. ಸಿನಿಮಾಗಳಿಂದ ಬ್ರೇಕ್​! - Samantha movies

ಅನಾರೋಗ್ಯ ಹಿನ್ನೆಲೆ ಸಮಂತಾ ರುತ್​ ಪ್ರಭು ಸಿನಿಮಾಗಳಿಂದ ಒಂದು ವರ್ಷ ಬ್ರೇಕ್​ ಪಡೆಯಲಿದ್ದಾರೆ ಎಂಬ ವರದಿಯಾಗಿದೆ.

Samantha Ruth Prabhu
ಸಮಂತಾ ರುತ್​ ಪ್ರಭು

By

Published : Jul 5, 2023, 1:04 PM IST

ತೆಲುಗು ಚಿತ್ರರಂಗದ ಸ್ಟಾರ್ ನಟಿ ಸಮಂತಾ ರುತ್​ ಪ್ರಭು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಒಂದು ವರ್ಷ ಸಿನಿಮಾಗಳಿಗೆ ಬ್ರೇಕ್ ನೀಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಆದರೆ ಈ ಬಗ್ಗೆ ನಟಿ ಸಮಂತಾ ರುತ್​ ಪ್ರಭು ಅಥವಾ ಅವರ ತಂಡ ಯಾವುದೇ ಅಧಿಕೃತ ಮಾಹಿತಿ, ಪ್ರಕಟಣೆ ನೀಡಿಲ್ಲ. ಒಂದು ವರ್ಷ ಸಿನಿಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ವದಂತಿಗಳನ್ನು ತಿಳಿದ ಅಭಿಮಾನಿಗಳು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೋಷಿಯಲ್​ ಮೀಡಿಯಾದಲ್ಲಿ ಬೇಡಿಕೆ ಇಟ್ಟಿದ್ದಾರೆ.

ಇತ್ತೀಚೆಗಷ್ಟೇ 'ಶಾಕುಂತಲಂ' ಚಿತ್ರದಲ್ಲಿ ನಟಿಸಿದ್ದ ಸ್ಯಾಮ್ ಸದ್ಯ ಅರ್ಜುನ್​​ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಹಿಂದಿ 'ಸಿಟಾಡೆಲ್' ವೆಬ್ ಸೀರಿಸ್​​ ಚಿತ್ರೀಕರಣವೂ ಮುಂದುವರಿದಿದೆ. ಇವೆರಡನ್ನೂ ಮುಗಿಸಿದ ನಂತರ ಒಂದು ವರ್ಷ ಸಿನಿಮಾಗಳಿಗೆ ಬ್ರೇಕ್ ನೀಡಲು ನಿರ್ಧರಿಸಿದ್ದಾರೆ.

ಕೆಲ ಸಮಯದಿಂದ ಸಮಂತಾ ಅವರು 'ಮಯೋಸಿಟಿಸ್' ಎಂಬ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾರೆ. ಒಂದೆಡೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಆರೋಗ್ಯದ ಕಡೆ ಸಂಪೂರ್ಣ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿಯೇ ಖುಷಿ, ಸಿಟಾಡೆಲ್ ಬಿಟ್ಟರೆ ಬೇರೆ ಪ್ರಾಜೆಕ್ಟ್​​ಗಳು ಓಕೆ ಆಗಿಲ್ಲ. ಈ ಹಿಂದೆ ಒಪ್ಪಿಕೊಂಡ ಕೆಲ ಚಿತ್ರಗಳಿಗೆ ಸಂಬಂಧಿಸಿದ ಅಡ್ವಾನ್ಸ್ ಹಣ​ವನ್ನೂ ಸಹ ನಿರ್ಮಾಪಕರಿಗೆ ವಾಪಸ್ ನೀಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಖುಷಿ ಚಿತ್ರ ಶೂಟಿಂಗ್ ಹಂತದಲ್ಲಿದೆ. ಮೂರು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಸಮಂತಾ ರುತ್​ ಪ್ರಭು ಭಾಗವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:'ಭೇಟಿಯಾಗೋಣ, ಬನ್ನಿ..': ಫ್ಯಾನ್ಸ್‌ ಜೊತೆ ರಿಷಬ್​ ಶೆಟ್ಟಿ ಜನ್ಮದಿನಾಚರಣೆ! ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ..

ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಖುಷಿ ಈ ಸಾಲಿನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಇವರಿಬ್ಬರ ಗೆಳೆತನ ಈ ಸಿನಿಮಾ ಸೆಟ್​ಗೆ ಮಾತ್ರ ಸೀಮಿತವಾಗಿಲ್ಲ. ಇವರಿಬ್ಬರೂ ಬಹಳ ವರ್ಷಗಳಿಂದ ಉತ್ತಮ ಸ್ನೇಹಿತರು. ಈ ಬಗ್ಗೆ ಸ್ವತಃ ಸಮಂತಾ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದರು. ಇತ್ತೀಚೆಗಷ್ಟೇ ಗೆಳೆಯ ವಿಜಯ್​ ದೇವರಕೊಂಡ ಬಗ್ಗೆ ಗುಣಗಾನ ಮಾಡಿ ನಟಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ವಿಜಯ್​ ದೇವರಕೊಂಡ ಸಮಂತಾ 'ಫೇವರೆಟ್​ ಗರ್ಲ್​'​ ಎಂದು ಹೇಳಿದ್ದರು. ಇವರಿಬ್ಬರೂ ಸ್ಕ್ರೀನ್​​ ಶೇರ್ ಮಾಡಿರುವ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್ 1 ರಂದು ಖುಷಿ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ:Tamannaah Bhatia: 'ಅಂತಹ ದೃಶ್ಯಗಳಲ್ಲಿ ಪುರುಷರಿದ್ದರೆ ಚಪ್ಪಾಳೆ, ಸ್ತ್ರೀಗೇಕೆ ಟೀಕೆ'

ABOUT THE AUTHOR

...view details