ಕರ್ನಾಟಕ

karnataka

ETV Bharat / entertainment

ಬ್ರೇಕ್‌ನ ನಂತರ ಸಿನಿಮಾ: ಮುಂಬೈ ಏರ್​​ಪೋರ್ಟ್​​ನಲ್ಲಿ ನಟಿ ಸಮಂತಾ ಕಂಡಿದ್ದು ಹೀಗೆ.. - ಸಮಂತಾ ಅನಾರೋಗ್ಯ

​​ನಟಿ ಸಮಂತಾ ರುತ್ ಪ್ರಭು ಶನಿವಾರ ರಾತ್ರಿ ಮುಂಬೈ ಏರ್​​ಪೋರ್ಟ್​​ನಲ್ಲಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದರು.

Samantha Ruth Prabhu
ನಟಿ ಸಮಂತಾ ರುತ್ ಪ್ರಭು

By

Published : Jul 9, 2023, 12:57 PM IST

Updated : Jul 9, 2023, 1:10 PM IST

ಶನಿವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಟಾಲಿವುಡ್​​ ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದಾರೆ. ಸೌಂದರ್ಯ ಮತ್ತು ಅಭಿನಯ ಚಾತುರ್ಯಕ್ಕಾಗಿ ಮೆಚ್ಚುಗೆ ಗಳಿಸಿರುವ ನಟಿ, ಭಾರತೀಯ ಚಿತ್ರರಂಗದಲ್ಲಿ ಬೇಡಿಕೆಯಿರುವ ಪ್ರತಿಭೆಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಇವರೀಗ ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ.

ಸಿನಿಮಾಗಳಿಂದ ಲಾಂಗ್​ ಬ್ರೇಕ್​ : ಮೈಯೋಸಿಟಿಸ್ ಎಂಬ ಕಾಯಿಲೆ ವಿರುದ್ಧ ಹೋರಾಡುತ್ತಿದ್ದರೂ ಕೂಡ ತಾವು ಒಪ್ಪಿಕೊಂಡ ಕೆಲಸಗಳಲ್ಲಿ ತೊಡಗಿಸಿಕೊಂಡು, ಪೂರ್ಣ ಪ್ರಮಾಣದ ಶ್ರದ್ಧೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ಮೈಯೋಸಿಟಿಸ್ ಕಾಯಿಲೆಗೆ ತುತ್ತಾಗಿರುವ ವಿಷಯವನ್ನು ಬಹಿರಂಗಪಡಿಸಿದ ನಂತರ ಸಣ್ಣ ವಿರಾಮ ತೆಗೆದುಕೊಂಡು ಬಳಿಕ ತಮ್ಮ ಉದ್ಯಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ಇದೀಗ ಮತ್ತೊಂದು ಲಾಂಗ್​ ಬ್ರೇಕ್​ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ತಮ್ಮ ಕೆಲಸದ ಸಲುವಾಗಿ ಮುಂಬೈಗೆ ಬಂದಿರುವ ಸಮಂತಾ ರುತ್ ಪ್ರಭು ಶನಿವಾರ ವಿಮಾನ ನಿಲ್ದಾಣದಲ್ಲಿ ಕಂಡರು. ಆದಾಗ್ಯೂ, ಆ ಸಮಯದಲ್ಲಿ ಅವರು ಬಿಳಿ ಕ್ಯಾಪ್ ಮತ್ತು ಕಪ್ಪು ಫೇಸ್​ ಮಾಸ್ಕ್ ಧರಿಸುವ ಮೂಲಕ ಪಾಪರಾಜಿಗಳಿಂದ ದೂರ ಸರಿದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾಗಳಿಗೆ ಪೋಸ್ ನೀಡದೇ ಮುನ್ನಡೆದರು. ಎಂದಿನಂತೆ ಸಮಂತಾ ಸ್ಟೈಲಿಶ್ ಕ್ಯಾಶುಯಲ್ ಉಡುಪಿನೊಂದಿಗೆ ಏರ್​ಪೋರ್ಟ್​ ಲುಕ್​ ಅನ್ನು ಪೂರ್ಣಗೊಳಿಸಿಕೊಂಡಿದ್ದರು.

ಸಮಂತಾ ಮಯೋಸಿಟಿಸ್​ಗೆ ಚಿಕಿತ್ಸೆ ಪಡೆಯಲು, ತಮ್ಮ ಆರೋಗ್ಯದೆಡೆಗೆ ಗಮನಹರಿಸಲು ತಮ್ಮ ವೃತ್ತಿಜೀವನದಿಂದ ಸುದೀರ್ಘ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ನಂಬಲಾಗಿದೆ. ಸದ್ಯ ಒಪ್ಪಿಕೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಿ, ಮುಂದಿನ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಕೊಂಚ ರಿಲ್ಯಾಕ್ಸ್​ ಮಾಡಲು ನಟಿ ಯೋಜಿಸುತ್ತಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಚಿಕಿತ್ಸೆಗಾಗಿ ಅಮೇರಿಕಕ್ಕೆ ತೆರಳಿದ್ದಾರೆ ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ:ನಿರ್ಮಾಪಕರಿಗೆ ಅಡ್ವಾನ್ಸ್ ಹಣ​ ವಾಪಸ್​ ಕೊಟ್ಟ ನಟಿ ಸಮಂತಾ.. ಸಿನಿಮಾಗಳಿಂದ ಬ್ರೇಕ್​!

ಸಮಂತಾ ರುತ್ ಪ್ರಭು ಅವರ ಮುಂದಿನ ಸಿನಿಮಾಗಳು ಖುಷಿ ಮತ್ತು ಸಿಟಾಡೆಲ್​. ಮಹಾನಟಿಯಲ್ಲಿ ಜನಪ್ರಿಯ ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದ್ದು, ಮತ್ತೆ ಖುಷಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಇಬ್ಬರೂ ಬಹಳ ಸಮಯದ ಸ್ನೇಹಿತರು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರ ಇದೇ ವರ್ಷದ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಲಿದೆ. ಅಲ್ಲದೇ ಸಿಟಾಡೆಲ್​ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದ ಸ್ಪೈ ಥ್ರಿಲ್ಲರ್ ಸರಣಿ, ಹಾಲಿವುಡ್​ನ ಸೀರಿಸ್​​ ಭಾರತೀಯ ರೂಪಾಂತರ ಆಗಿರುವ ಸಿಟಾಡೆಲ್‌ ಮೂಲಕ ಸಮಂತಾ ಒಟಿಟಿ ಪ್ರವೇಶಿಸಲಿದ್ದಾರೆ. ರಾಜ್ ಮತ್ತು ಡಿಕೆ ಅವರ ಈ ಪ್ರಾಜೆಕ್ಟ್​ನಲ್ಲಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:'ಖುಷಿ' ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​​ - ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಸಮಂತಾ!

Last Updated : Jul 9, 2023, 1:10 PM IST

ABOUT THE AUTHOR

...view details