ದಕ್ಷಿಣ ಚಿತ್ರರಂಗದ ಟಾಪ್ ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ರಿಲ್ಯಾಕ್ಸ್ ಮೂಡ್ನಲ್ಲಿರುವ ನಟಿ ಪ್ರವಾಸ, ಮೂವಿ ಟೈಮ್, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ತಮ್ಮ ದಿನ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಆರೋಗ್ಯ ಚೇತರಿಕೆ ಕಡೆ ಗಮನ ಹರಿಸಿದ್ದಾರೆ ಎಂಬ ವರದಿಗಳೂ ಇವೆ.
ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: ಮಯೋಸಿಟಿಸ್ ವಿರುದ್ಧ ಹೊರಾಡುತ್ತಿರುವ ಶಾಕುಂತಲಂ ನಟಿ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಆದರೆ ಶ್ರೀಮಂತ ನಟಿ ಚಿಕಿತ್ಸೆಗಾಗಿ 25 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಬರುವ ಊಹಾಪೋಹಗಳಿಗೆ ನೇರ ಉತ್ತರ ಕೊಡಲು ಹೆಸರುವಾಸಿಯಾಗಿರುವ ಬಹುಬೇಡಿಕೆ ನಟಿ ಇದೀಗ ಈ ವದಂತಿಗಳಿಗೂ ನೇರವಾಗಿ ತೆರೆ ಎಳೆದಿದ್ದಾರೆ.
ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥ:ತಮ್ಮ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅದಾಗ್ಯೂ, ನಟಿ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಗಳಿಸಿದ್ದೇನೆ. ತನ್ನನ್ನು ತಾನು ನಿಭಾಯಿಸಿಕೊಳ್ಳಲು ಸಮರ್ಥಳಾಗಿದ್ದೇನೆ ಎಂದು ತಿಳಿಸಿ ಆ ವರದಿಗಳನ್ನು ತಳ್ಳಿಹಾಕಿದ್ದಾರೆ.
ಸ್ಯಾಮ್ ಇನ್ಸ್ಟಾ ಸ್ಟೋರಿ:ಮಯೋಸಿಟಿಸ್ ಚಿಕಿತ್ಸೆಗಾಗಿ ಸಾಲ ಪಡೆದಿರುವ ವಿಚಾರಕ್ಕೆ ಸ್ಪಷ್ಟನೆ ಕೊಡಲು ನಟಿ ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡರು. ''ಮಯೋಸಿಟಿಸ್ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ!?. ಯಾರೋ ನಿಮಗೊಂದು ಕೆಟ್ಟ ಡೀಲ್ನ ವಿಷಯ ತಂದು ಕೊಟ್ಟಿದ್ದಾರೆ. ನಾನು ಅದರಲ್ಲಿ (25 ಕೋಟಿ ರೂ.) ಚಿಕ್ಕ ಪ್ರಮಾಣದಷ್ಟು ಮಾತ್ರ ಖರ್ಚು ಮಾಡುತ್ತಿದ್ದೇನೆ ಎಂಬುದನ್ನು ಹೇಳಲು ಖುಷಿಯಾಗಿದೆ'' ಎಂದು ಇನ್ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದಾರೆ.