ಟಾಲಿವುಡ್ ಬೆಡಗಿ ಸಮಂತಾ ರುತ್ ಪ್ರಭು ಅವರ ಮುಂಬರುವ ಚಿತ್ರ 'ಶಾಕುಂತಲಂ'. ಈ ಸಿನಿಮಾದಲ್ಲಿ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಸಹ ಅಭಿನಯಿಸಿದ್ದಾರೆ. ಇದು ಅಲ್ಲು ಅರ್ಹಾಳ ಚೊಚ್ಚಲ ಚಿತ್ರ.
ಸ್ಟಾರ್‌ಕಿಡ್‌ನ ಚೊಚ್ಚಲ ಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಅಲ್ಲು ಅರ್ಜುನ್ ಮತ್ತು ಅಲ್ಲು ಸ್ನೇಹಾ ರೆಡ್ಡಿ ಅವರ ಪುತ್ರಿ, 6 ವರ್ಷದ ಅಲ್ಲು ಅರ್ಹಾ ಜೊತೆಗೆ ಕೆಲಸ ಮಾಡಿದ ಬಗ್ಗೆ ಕೆಲವು ಆಸಕ್ತಿದಾಯಕ ಅವಲೋಕನಗಳನ್ನು ಹಂಚಿಕೊಂಡಿದ್ದಾರೆ 'ಶಾಕುಂತಲೆ' ಸಮಂತಾ ರುತ್ ಪ್ರಭು.
ಸಮಂತಾ ರುತ್ ಪ್ರಭು ಸದ್ಯ ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಂದರ್ಶನವೊಂದರಲ್ಲಿ ಅರ್ಹಾ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಹಾ ನಿಜಕ್ಕೂ ಅದ್ಭುತ. ಭವಿಷ್ಯದ ಸೂಪರ್ ಸ್ಟಾರ್. ಆತ್ಮವಿಶ್ವಾಸ ಹೆಚ್ಚಿದ್ದು, ಕಿಂಚಿತ್ತೂ ಭಯ ಆ ಮಗುವಲ್ಲಿರಲಿಲ್ಲ. ಚೊಚ್ಚಲ ಚಿತ್ರದ ಸೆಟ್‌ಗಳಲ್ಲಿ ಸುಮಾರು 200 ಸಿಬ್ಬಂದಿಯೊಂದಿಗೆ ಸಡಗರದಿಂದ, ಆರಾಮವಾಗಿ ಓಡಾಡಿಕೊಂಡಿದ್ದಳು ಎಂದು ಗುಣಗಾನ ಮಾಡಿದ್ದಾರೆ.
ಅಲ್ಲು ಅರ್ಹಾ ಮೇಲೆ ಮತ್ತಷ್ಟು ಮೆಚ್ಚುಗೆಯ ಮಳೆ ಸುರಿಸಿದ ಸಮಂತಾ, ಅರ್ಹಾ "ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿ ಹುಟ್ಟಿದ್ದಾಳೆ''. ಭವಿಷ್ಯದಲ್ಲಿ ಚಲನಚಿತ್ರರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದರೆ ಈ ಉದ್ಯಮದಲ್ಲಿ ಸಾಧನೆಗೈಯಲು ನಿರ್ಧರಿಸಿದರೆ ತಂದೆಯ ಹೆಸರು ಅಗತ್ಯ ಬೀಳುವುದಿಲ್ಲ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರೀಕರಣದ ಎರಡನೇ ದಿನ ಅರ್ಹಾ ಯಾವುದೇ ತೊಂದರೆ, ದೂರುಗಳಿಲ್ಲದೇ 12 ಗಂಟೆ ಶಿಫ್ಟ್ನಲ್ಲಿದ್ದಳು. ತನ್ನ ಅಭಿನಯದಿಂದ ಎಲ್ಲರನ್ನೂ ಮೆಚ್ಚಿಸಿದೆ ಆ ಮಗು ಎಂದು ಸಮಂತಾ ಹೇಳಿದರು.