ಕರ್ನಾಟಕ

karnataka

ETV Bharat / entertainment

'ಜಿಲಾಟೊ ಮಾರ್ನಿಂಗ್ ಟು ಯು'... ನಟಿ ಸಮಂತಾ ಮನೆಗೆ ಹೊಸ ಸದಸ್ಯನ ಆಗಮನ - ಸಮಂತಾ ಸಿನಿಮಾಗಳು

ನಟಿ ಸಮಂತಾ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ಜಿಲಾಟೊ ಎಂಬ ಬೂದು ಪರ್ಷಿಯನ್ ಬೆಕ್ಕನ್ನು ಅವರು ಮನೆಗೆ ತಂದಿದ್ದಾರೆ.

Samantha Ruth Prabhu
ನಟಿ ಸಮಂತಾ

By

Published : Jul 20, 2023, 9:05 PM IST

ಸೌತ್​ ಟಾಪ್​ ನಟಿ ಸಮಂತಾ ರುತ್​ ಪ್ರಭು ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ಹಾಗಂತ ಅಭಿಮಾನಿಗಳಿಂದ ದೂರವಾಗಿಲ್ಲ. ಅವರಿಗೆಂದೇ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ ನಟಿ ಸದ್ಯ ಆರೋಗ್ಯ ಚೇತರಿಕೆಗೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆ ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸಿದ್ದಾರೆ. ಖುಷಿ ಮತ್ತು ಸಿಟಾಡೆಲ್​ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರಗಳು. ಇವರೆಡರ ಶೂಟಿಂಗ್​ ಕೂಡ ಮುಕ್ತಾಯಗೊಳಿಸಿದ್ದಾರೆ.

ಇದೀಗ ನಟಿ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿನ ಅನೇಕ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಕೊಯಮತ್ತೂರಿನ ಇಶಾಗೆ ಭೇಟಿ ನೀಡಿ ಧ್ಯಾನ ಮಾಡಿದ್ದಾರೆ. ಈ ಫೋಟೋಗಳನ್ನು ಸಮಂತಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಇಂಟರ್ನ್​ನೆಟ್​ನಲ್ಲಿ ಟ್ರೆಂಡಿಂಗ್​ ಆಗಿವೆ. ಇದಲ್ಲದೇ ಮತ್ತೊಂದು ಪೋಸ್ಟನ್ನು ನಟಿ​ ಶೇರ್​ ಮಾಡಿದ್ದಾರೆ. ಸಮಂತಾ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ.

ಸ್ಟಾರ್​ ನಟಿ ಸಮಂತಾ ಸಾಕುಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ಅವರ ಮನೆಯಲ್ಲಿ ಈಗಾಗಲೇ ಎರಡು ನಾಯಿ ಮರಿಗಳಿವೆ. ಕೋರೆಹಲ್ಲಿನ ಹ್ಯಾಶ್​ ಮತ್ತು ಸಾಶಾ ನಂತರ ಮತ್ತೊಂದು ಹೊಸ ಪ್ರಾಣಿಯ ಆಗಮನವಾಗಿದೆ. ಜಿಲಾಟೊ ಎಂಬ ಬೂದು ಪರ್ಷಿಯನ್ ಬೆಕ್ಕನ್ನು ಮನೆಗೆ ತಂದಿದ್ದಾರೆ. ಅವರು ಬೆಕ್ಕಿನ ಜೊತೆಗಿರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಮುದ್ದಿನ ಬೆಕ್ಕನ್ನು ಪರಿಚಯಿಸಲು ಸಮಂತಾ ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು.

ಇದನ್ನೂ ಓದಿ:ಒಂದೇ ಫ್ರೇಮ್​ನಲ್ಲಿ ಸೌತ್​ ಸೂಪರ್​​ಸ್ಟಾರ್ಸ್.. ಅಮೆರಿಕದಲ್ಲಿ ಕಮಲ್​ ಹಾಸನ್​​, ಪ್ರಭಾಸ್ ಮಿಂಚಿಂಗ್​​

ಸಿಟಾಡೆಲ್​ ನಟಿ ಕೆಂಪು ಗೌನ್​ನಲ್ಲಿ ಕಂಡಿದ್ದಾರೆ. ಆಹ್ಲಾದಕರ ಮಾನ್ಸೂನ್​ ಮುಂಜಾನೆಯಲ್ಲಿ ಸಮಂತಾ ಜಿಲಾಟೊವನ್ನು ಅಪ್ಪಿಕೊಂಡು ಮಲಗಿರುವುದನ್ನು ಕಾಣಬಹುದು. ಬೆಕ್ಕು ಕ್ಯಾಮರಾ ನೋಡುತ್ತಿದ್ದರೆ ಸಮಂತಾ ಬೆಕ್ಕನ್ನು ನೋಡುತ್ತಿರುವಂತೆ ಫೋಟೋವನ್ನು ತೆಗೆಯಲಾಗಿದೆ. 'ಜಿಲಾಟೊ ಮಾರ್ನಿಂಗ್ ಟು ಯು' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಸುಂದರ ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಸ್ಯಾಮ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸಮಂತಾ ಸಿನಿಮಾಗಳು:ಸಮಂತಾ ರುತ್ ಪ್ರಭು ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳು ಖುಷಿ ಮತ್ತು ಸಿಟಾಡೆಲ್‌. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ 'ಖುಷಿ' ಚಿತ್ರದ ಕೆಲವು ದೃಶ್ಯಗಳು ವಿಜಯ್​ ಮತ್ತು ಸಮಂತಾ ಆನ್ ​ಸ್ಕ್ರೀನ್​ ರೋಮ್ಯಾಂಟಿಕ್​ ಅದ್ಬುತವಾಗಿದೆ ಎಂಬ ಸುಳಿವು ನೀಡಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಸೆಟ್ಟೇರಿದ ಈ ಚಿತ್ರ ನಟಿ ಸಮಂತಾ ಚಿಕಿತ್ಸೆ ಹಿನ್ನೆಲೆ ಬಿಡುಗಡೆ ವಿಳಂಬಗೊಂಡಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಸೆಪ್ಟಂಬರ್​ 1ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರವು 60 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ.

ಸ್ಪೈ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸೀರೀಸ್​ 'ಸಿಟಾಡೆಲ್'​ ಹಾಲಿವುಡ್​​ನ ಸರಣಿ​. ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅದರಲ್ಲಿ ನಟಿಸಿದ್ದಾರೆ. ಇಂಡಿಯನ್​ ವರ್ಷನ್​ ಸಿಟಾಡೆಲ್​ ರೆಡಿಯಾಗಿದ್ದು, ಸಮಂತಾ ನಟಿಸಿದ್ದಾರೆ. ವೆಬ್​ಸೀರಿಸ್​ಗೆ ರಾಜ್ ಮತ್ತು ಡಿಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸರಣಿಯಲ್ಲಿ ಬಾಲಿವುಡ್​ ನಟರಾದ ವರುಣ್ ಧವನ್ ಮತ್ತು ಸಿಕಂದರ್ ಖೇರ್ ಕೂಡ ಇದ್ದಾರೆ. ವರುಣ್ ಧವನ್ ನಾಯಕರಾಗಿ ನಟಿಸುತ್ತಿದ್ದು, ಸಮಂತಾ ಕೆಲ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ನ 'ನವರಸ' ಪ್ರೋಮೋ ರಿಲೀಸ್​.. ಐಸಿಸಿ ಟ್ರೋಫಿಯೊಂದಿಗೆ​ ಶಾರುಖ್ ಖಾನ್ ಮಿಂಚು.. ಫ್ಯಾನ್ಸ್​ ಪ್ರತಿಕ್ರಿಯೆ ಹೀಗಿದೆ...

ABOUT THE AUTHOR

...view details