ಕರ್ನಾಟಕ

karnataka

ETV Bharat / entertainment

'ಫೇವರಿಟ್​​​ ಗರ್ಲ್​'.. ಸಮಂತಾಳ ಮೆಚ್ಚಿಕೊಂಡ ವಿಜಯ್​​ ದೇವರಕೊಂಡ; ವೈರಲ್​ ಆಯ್ತು ಸ್ಯಾಮ್​ ಪೋಸ್ಟ್!​ - ಈಟಿವಿ ಭಾರತ ಕನ್ನಡ

ನಟಿ ಸಮಂತಾ ರುತ್​ ಪ್ರಭು ಅವರು ನಟ ವಿಜಯ್​ ದೇವರಕೊಂಡ ಜೊತೆಗಿನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Samantha
ನಟಿ ಸಮಂತಾ ರುತ್​ ಪ್ರಭು

By

Published : Jun 1, 2023, 8:33 PM IST

ಸೌತ್​ ಸುಂದರ ನಟಿ ಸಮಂತಾ ರುತ್​ ಪ್ರಭು ಮತ್ತು ಟಾಲಿವುಡ್​ ಹ್ಯಾಂಡ್ಸಮ್​ ನಟ ವಿಜಯ್​ ದೇವರಕೊಂಡ 'ಖುಷಿ' ಚಿತ್ರಕ್ಕಾಗಿ ತೆರೆ ಮೇಲೆ ಒಂದಾಗಿದ್ದಾರೆ. ಇವರು ತೆರೆ ಹಿಂದೆಯೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಈ ಗೆಳೆತನ ಇಂದು ಮೊನ್ನೆಯದ್ದಲ್ಲ, ಸುಮಾರು ವರ್ಷಗಳದ್ದಂತೆ. ಅಲ್ಲದೇ ಸಮಂತಾ ಜೊತೆ ಎಲ್ಲಾ ಸಮಯದಲ್ಲೂ ಒಬ್ಬ ಉತ್ತಮ ಸ್ನೇಹಿತನಾಗಿ ವಿಜಯ್​ ದೇವರಕೊಂಡ ಇದ್ದರಂತೆ. ಈ ಬಗ್ಗೆ ಸ್ವತಃ ಸಮಂತಾ ಅವರೇ ಹೇಳಿಕೊಂಡಿದ್ದಾರೆ.

ಇಬ್ಬರು ಜೊತೆಯಾಗಿ ಡಿನ್ನರ್​ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸಮಂತಾ, "ನಿನ್ನ ಉನ್ನತ ಸ್ಥಾಯಿ, ಸಂತೋಷ, ಕಷ್ಟಗಳನ್ನು ನೋಡಿದ್ದೇನೆ. ನಿನ್ನ ಏಳು- ಬೀಳುಗಳನ್ನೂ ನೋಡಿದ್ದೇನೆ. ನಿನ್ನ ಜೀವನದ ಕಷ್ಟಗಳನ್ನು ಸಹಿತ ಕಂಡಿದ್ದೇನೆ. ಯಾವುದೇ ಸಮಯದಲ್ಲಿ ಕೆಲವು ಸ್ನೇಹಿತರು ನಮ್ಮೊಂದಿಗೆ ಶಾಶ್ವತವಾಗಿರುತ್ತಾರೆ. @ವಿಜಯದೇವರಕೊಂಡ" ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್​ ದೇವರಕೊಂಡ , ಸಮಂತಾ ಅವರನ್ನು 'ಫೇವರೆಟ್​ ಗರ್ಲ್​'​ ಎಂದಿದ್ದಾರೆ.

ಸಮಂತಾ ಪೋಸ್ಟ್​ಗೆ ಇಬ್ಬರ ಅಭಿಮಾನಿಗಳು ಕೂಡ ಕಮೆಂಟ್​ ಮಾಡಿದ್ದಾರೆ. ಲೈಕ್ಸ್​ ಮತ್ತು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಸಮಂತಾ ಮತ್ತು ವಿಜಯ್​ ಸ್ನೇಹವನ್ನು ಕೊಂಡಾಡಿದ್ದಾರೆ. ನಿಮ್ಮಿಬ್ಬರನ್ನು ತೆರೆ ಮೇಲೆ ಕಾಣಲು ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ. ಖುಷಿ ಸಿನಿಮಾ ಸಮಂತಾ ಮತ್ತು ವಿಜಯ್ ಕೆಲಸ ಮಾಡುತ್ತಿರುವ ಎರಡನೇ ಚಿತ್ರವಾಗಿದೆ. ಇದಕ್ಕೂ ಮೊದಲು ಮಹಾನಟಿ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ನಿರ್ದೇಶಕ ಶಿವ ನಿರ್ವಾಣ ಅವರೊಂದಿಗೆ ಸಮಂತಾ ಕೆಲಸ ಮಾಡುತ್ತಿರುವ ಎರಡನೇ ಪ್ರೊಜೆಕ್ಟ್​​ ಇದು. ಈ ಹಿಂದೆ 'ಮಜಿಲಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಧೂಮಪಾನ ಮಾಡದ ಸೆಲೆಬ್ರಿಟಿಗಳು: ಮೊದಲು ಧೂಮಪಾನಕ್ಕೆ ದಾಸರಾಗಿದ್ದ ಈ ಸ್ಟಾರ್​ಗಳು ಯಾವ ಕಾರಣಕ್ಕೆ ಬಿಟ್ಟರು ಗೊತ್ತಾ?

'ಖುಷಿ'ಯಲ್ಲಿ ಮತ್ತೆ ಒಂದಾದ ಸ್ನೇಹಿತರು: ಖುಷಿ ಚಿತ್ರದಲ್ಲಿ ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ಸಮಂತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ 'ಮಜಿಲಿ' ನಿರ್ದೇಶಕ ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಮಂತಾ ಮತ್ತು ವಿಜಯ್ ಹೊರತಾಗಿ, ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಸೇರಿದಂತೆ ದೊಡ್ಡ ತಾರಾಗಣವಿದೆ. ಹೇಶಂ ಸಂಗೀತ, ಜಿ.ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ:Gucci ರಾಯಭಾರಿಯಾಗಿ ಆಲಿಯಾ ಭಟ್​: ಖ್ಯಾತ ಹಾಲಿವುಡ್​ ಸೆಲೆಬ್ರಿಟಿಗಳ ಜೊತೆ ಭಾರತೀಯ ತಾರೆ

ABOUT THE AUTHOR

...view details