ಕರ್ನಾಟಕ

karnataka

ETV Bharat / entertainment

ಸಿಟಾಡೆಲ್​ ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​ ಪಡೆದು ಚಿಕಿತ್ಸೆಗೆ ತೆರಳುವರಾ ಸಮಂತಾ? - ಸಮಂತಾ ಆರೋಗ್ಯ

ಸಮಂತಾ ರುತ್ ಪ್ರಭು ನಟನೆಯ ಸಿಟಾಡೆಲ್​ ಶೂಟಿಂಗ್​ ಪೂರ್ಣಗೊಂಡಿದೆ.

citadel shooting complete
ಸಮಂತಾ ಸಿಟಾಡೆಲ್​ ಶೂಟಿಂಗ್​ ಕಂಪ್ಲೀಟ್​​

By

Published : Jul 13, 2023, 2:24 PM IST

ಸೌತ್​ ಸಿನಿ ಕ್ಷೇತ್ರದ ಟಾಪ್​​ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಖಷಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ್ದರು. ಇದೀಗ ಸಿಟಾಡೆಲ್​ ಇಂಡಿಯನ್​ ವರ್ಷನ್​ನ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ಬಹುಬೇಡಿಕೆಯ ತಾರೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸೆಲ್ಫಿ ಶೇರ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯದೆಡೆಗೆ ಗಮನ ಹರಿಸುವ ನಿಟ್ಟಿನಲ್ಲಿ, ಸಿನಿಮಾಗಳಿಂದ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳಲು ಉದ್ದೇಶಿಸಿದ್ದಾರೆ ಎಂಬ ಮಾಹಿತಿ ಇದೆ.

ನಟಿ ಸಮಂತಾ ರುತ್ ಪ್ರಭು ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರೀಸ್‌ನಲ್ಲಿ ಸೆಲ್ಫಿ ಹಂಚಿಕೊಂಡಿದ್ದಾರೆ. "ಜುಲೈ 13 (ವೈಟ್​ ಹಾರ್ಟ್ ಎಮೋಜಿ ಜೊತೆಗೆ) ನನಗೆ ಯಾವಾಗಲೂ ವಿಶೇಷ ದಿನವಾಗಿರುತ್ತದೆ. ಸಿಟಾಡೆಲ್​ ಚಿತ್ರೀಕರಣ ಪೂರ್ಣ" ಎಂದು ಬರೆದುಕೊಂಡಿದ್ದಾರೆ. ಸಮಂತಾ ಕಳೆದ ವಾರ ತಮ್ಮ ಮುಂಬರುವ ಕುಶಿ ಸಿನಿಮಾದ ಚಿತ್ರೀಕರಣವನ್ನೂ ಸಹ ಪೂರ್ಣಗೊಳಿಸಿದ್ದಾರೆ. ಸಿಟಾಡೆಲ್ ಶೂಟಿಂಗ್ ಸಹ​ ಮುಕ್ತಾಯವಾಗಿದ್ದು, ತಮ್ಮ ಎಲ್ಲ ಪ್ರಾಜೆಕ್ಟ್‌ಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಸ್ಪೈ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸೀರೀಸ್​ 'ಸಿಟಾಡೆಲ್'​ ಹಾಲಿವುಡ್​​ನ ಸರಣಿ​. ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅದರಲ್ಲಿ ನಟಿಸಿದ್ದಾರೆ. ಇಂಡಿಯನ್​ ವರ್ಷನ್​ ಸಿಟಾಡೆಲ್​ ರೆಡಿಯಾಗಿದ್ದು, ರಾಜ್ ಮತ್ತು ಡಿಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸರಣಿಯಲ್ಲಿ ಬಾಲಿವುಡ್​ ನಟರಾದ ವರುಣ್ ಧವನ್ ಮತ್ತು ಸಿಕಂದರ್ ಖೇರ್ ಕೂಡ ಇದ್ದಾರೆ. ವರುಣ್ ಧವನ್ ನಾಯಕರಾಗಿ ನಟಿಸುತ್ತಿದ್ದು, ಸಮಂತಾ ಕೆಲ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಮಂತಾ ರುತ್ ಪ್ರಭು ಅವರು ಶಿವ ನಿರ್ವಾಣ ಅವರ ಕುಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆಗೆ ಅಭಿನಯಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರವು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಸಿನಿಮಾದ ಆರಾಧ್ಯ ಎಂಬ ಹಾಡು ಈಗಾಗಲೇ ರಿಲೀಸ್​ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ವಿಭಿನ್ನ ಧರ್ಮದವರು ಪ್ರೀತಿಸುವ ಕಥೆಯನ್ನು ಈ ಸಿನಿಮಾ ಹೇಳಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಕೂಡ ಇದ್ದಾರೆ.

ಇದನ್ನೂ ಓದಿ:2023ರ ಟಾಪ್​ 10 ಸಿನಿಮಾಗಳ ಪಟ್ಟಿ ಬಿಡುಗಡೆ: ಕನ್ನಡಿಗರಿಗೆ ನಿರಾಶೆ

'ಮಯೋಸಿಟಿಸ್' ಎಂಬ ಕಾಯಿಲೆ ವಿರುದ್ಧ ನಟಿ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿಸಿದಿರುವ ವಿಚಾರ. ಸೂಕ್ತ ಚಿಕಿತ್ಸೆ ಪಡೆಯುವುದರ ಜೊತೆ ಜೊತೆಗೆ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಅನಾರೋಗ್ಯ ಹಿನ್ನೆಲೆ, ಖುಷಿ, ಸಿಟಾಡೆಲ್ ಬಿಟ್ಟರೆ ಬೇರೆ ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿರಲಿಲ್ಲ. ಒಪ್ಪಿಕೊಂಡಿರುವ ಪ್ರಾಜೆಕ್ಟ್​​ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳಿಗೆ ಸಂಬಂಧಿಸಿದ ಅಡ್ವಾನ್ಸ್ ನಗದನ್ನೂ ಕೂಡ ನಿರ್ಮಾಪಕರಿಗೆ ನಟಿ ಮರಳಿಸಿದ್ದಾರೆ ಎಂಬ ವರದಿ ಇದೆ.

ಇದನ್ನೂ ಓದಿ:ಸುದೀಪ್​​, ರಜನಿಕಾಂತ್​ TO ಶಾರುಖ್​​: ತೆರೆ ಮೇಲೆ ಬಾಂಡ್ಲಿಯಾಗಿ ಕಾಣಿಸಿಕೊಂಡ ನಟರಿವರು!

ABOUT THE AUTHOR

...view details