ಕರ್ನಾಟಕ

karnataka

ETV Bharat / entertainment

Samanatha Viral Video: 'ಊ ಅಂಟವಾ' ಹಾಡಿಗೆ ಸೊಂಟ ಬಳುಕಿಸಿದ ಸೌತ್​ ಸುಂದ್ರಿ ಸಮಂತಾ..! - ವರುಣ್ ಧವನ್

Watch: 'ಸಿಟಾಡೆಲ್' ಚಿತ್ರೀಕರಣಕ್ಕಾಗಿ ಸರ್ಬಿಯಾಕ್ಕೆ ತೆರಳಿದ್ದ ಸಮಂತಾ ಕ್ಲಬ್‌ವೊಂದರಲ್ಲಿ 'ಊ ಅಂಟವಾ ಮಾವ ಉಹೂ ಅಂಟವಾ ಮಾವ' ಹಾಡಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ.

samantha
ಸಮಂತಾ

By

Published : Jun 11, 2023, 7:27 PM IST

ದಕ್ಷಿಣದ ಸುಂದರ ನಟಿ ಸಮಂತಾ ರುತು ಪ್ರಭು ಮತ್ತು ಬಾಲಿವುಡ್​ ನಟ ವರುಣ್ ಧವನ್​ 'ಸಿಟಾಡೆಲ್'​ ವೆಬ್​ ಸೀರೀಸ್​ಗಾಗಿ ಒಂದಾಗಿದ್ದಾರೆ. ಸದ್ಯ ಅವರಿಬ್ಬರು ಶೂಟಿಂಗ್​ಗಾಗಿ ಸರ್ಬಿಯಾಕ್ಕೆ ತೆರಳಿದ್ದಾರೆ. ಅಲ್ಲಿಂದ ಸಮಂತಾ ಅವರ ವಿಡಿಯೋವೊಂದು ವೈರಲ್​ ಆಗಿದ್ದು, ಅಭಿಮಾನಿಗಳನ್ನು ಬೆರಗಾಗಿಸಿದೆ. 'ಊ ಅಂಟವಾ ಮಾವ ಉಹೂ ಅಂಟವಾ ಮಾವ' ಹಾಡಿಗೆ ಸ್ಯಾಮ್​ ಸಖತ್​ ಸ್ಟೆಪ್​ ಹಾಕಿದ್ದಾರೆ.

'ಸಿಟಾಡೆಲ್' (ಭಾರತೀಯ ಆವೃತ್ತಿ) ಚಿತ್ರೀಕರಣಕ್ಕಾಗಿ ಸರ್ಬಿಯಾಕ್ಕೆ ತೆರಳಿದ್ದ ಸಮಂತಾ ಕ್ಲಬ್‌ವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ನಟ ವರುಣ್​ ಧವನ್​ ಜೊತೆ ಕುಣಿದಿದ್ದಾರೆ. ಅವರೇ ಸ್ಯಾಮ್​ರನ್ನು ಡ್ಯಾನ್ಸ್​ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋ ಇಂಟರ್​ನೆಟ್​ಗೆ ಕಿಚ್ಚು ಹಚ್ಚಿದೆ. ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೂ ಎಲ್ಲರೂ ಈ ವಿಡಿಯೋಗೆ ಮನಸೋತಿದ್ದಾರೆ.

ದೃಶ್ಯದಲ್ಲಿ ಸಮಂತಾ ಕಪ್ಪು ಬಣ್ಣದ ಲೆದರ್ ಟಾಪ್ ಮತ್ತು ಲೆದರ್ ಪ್ಯಾಂಟ್ ಧರಿಸಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿರುವುದನ್ನು ಕಾಣಬಹುದು. ಅವರು ತಮ್ಮ ಕೂಲಿಂಗ್​ ಗ್ಲಾಸ್​ ತೆಗೆಯುತ್ತಿದ್ದಂತೆ ಅಲ್ಲಿದ್ದ ಇತರರು ಅವರನ್ನು ಡ್ಯಾನ್ಸ್​ ಮಾಡುವಂತೆ ಒತ್ತಾಯಿಸುತ್ತಾರೆ. ತಮ್ಮದೇ 'ಊ ಅಂಟವಾ' ಹಾಡಿಗೆ ಕುಣಿದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು 'ಹಾಡು ಬಂದು ಎರಡು ವರ್ಷ ಕಳೆದರೂ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ' ಎಂದು ಕಮೆಂಟ್ ಮಾಡುತ್ತಿದ್ದಾರೆ.

'ಶಾಕುಂತಲಂ' ಚಿತ್ರದ ನಂತರ ಸಮಂತಾ ಆಕ್ಷನ್ ಪ್ಯಾಕ್ಡ್ ಎಂಟರ್‌ಟೈನರ್ ವೆಬ್ ಸೀರೀಸ್ 'ಸಿಟಾಡೆಲ್'ನಲ್ಲಿ ನಟಿಸುತ್ತಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಸರಣಿಯಲ್ಲಿ ವರುಣ್ ಧವನ್ ಮತ್ತು ಸ್ಯಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಭಾರತದಲ್ಲಿ ಶೆಡ್ಯೂಲ್ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಹೊಸ ಶೆಡ್ಯೂಲ್​ಗಾಗಿ ಸೆರ್ಬಿಯಾಗೆ ತೆರಳಿದೆ. ಬೆಲ್‌ಗ್ರೇಡ್‌ನಲ್ಲಿ ಶೂಟಿಂಗ್ ಮುಗಿಸಿದ ತಕ್ಷಣ, ಇಡೀ ತಂಡ ಕ್ಲಬ್‌ಗೆ ಹೋಗಿ ಮೋಜು ಮಾಡಿದೆ. ಇಲ್ಲಿಂದಲೇ ಸಮಂತಾ ವಿಡಿಯೋಗಳು ವೈರಲ್​ ಆಗಿವೆ.

ಇನ್ನು, ಸಿಟಾಡೆಲ್​ ಇಂಟರ್​ನ್ಯಾಷನಲ್​ ವೆಬ್​ ಸೀರೀಸ್ ಆಗಿದೆ. ಇದರಲ್ಲಿ ಸಾಕಷ್ಟು ಬೋಲ್ಡ್​ ಕಂಟೆಂಟ್​ ದೃಶ್ಯಗಳೂ ಇವೆ. ಇಂಗ್ಲಿಷ್​ ಆವೃತ್ತಿಯಲ್ಲಿ (ಹಾಲಿವುಡ್​) ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ನಟಿ ನಟಿಸಿದ್ದಾರೆ. ಭಾರತೀಯ ಆವೃತ್ತಿಯ ಸಿಟಾಡೆಲ್​ ವೆಬ್​ ಸೀರೀಸ್​ ಅನ್ನು 'ದಿ ಫ್ಯಾಮಿಲಿ ಮ್ಯಾನ್'​ ಖ್ಯಾತಿಯ ರಾಜ್​ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

ರಾಷ್ಟ್ರಪತಿ ಭೇಟಿಯಾಗಿದ್ದ ಚಿತ್ರತಂಡ: ಇತ್ತೀಚೆಗೆ ಸರ್ಬಿಯಾಗೆ ತೆರಳಿದ್ದ ಭಾರತದ ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ಸಮಂತಾ ಭೇಟಿಯಾಗಿದ್ದರು. ಸಮಂತಾ ಜೊತೆಗೆ ವರುಣ್ ಧವನ್, 'ಸಿಟಾಡೆಲ್' ವೆಬ್ ಸರಣಿಯ ನಿರ್ದೇಶಕರಾದ ರಾಜ್ ಮತ್ತು ಡಿಕೆ ಕೂಡ ಇದ್ದರು. ಈ ಭೇಟಿಯ ಫೋಟೋಗಳನ್ನು ವರುಣ್ ಧವನ್ Instagram ನಲ್ಲಿ ಹಂಚಿಕೊಂಡಿದ್ದರು.

ಅದಕ್ಕೆ, "ಸಿಟಾಡೆಲ್ ತಂಡ... ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅದೃಷ್ಟವನ್ನು ಪಡೆದಿದೆ. ಇದು ನಮಗೆ ಗೌರವ ಎಂದು ನಾವು ಭಾವಿಸುತ್ತೇವೆ. ನಿಮ್ಮನ್ನು (ದ್ರೌಪದಿ ಮುರ್ಮು) ಭೇಟಿಯಾಗಿರುವುದು ತುಂಬಾ ಸಂತೋಷವಾಗಿದೆ" ಎಂದು ಕ್ಯಾಪ್ಶನ್​ ಬರೆದಿದ್ದಾರೆ. ಈ ಪೋಸ್ಟ್​ನ್ನು ಸಮಂತಾ ಮರು ಹಂಚಿಕೊಂಡಿದ್ದರು.

ಇದನ್ನೂ ಓದಿ:Adipurush advance booking: ಕೆಜಿಎಫ್​ 2 ದಾಖಲೆ ಹಿಂದಿಕ್ಕಿದ 'ಆದಿಪುರುಷ್​'.. ವಿದೇಶಗಳಲ್ಲಿ ಮುಂಗಡ ಬುಕ್ಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​!

ABOUT THE AUTHOR

...view details