ಕರ್ನಾಟಕ

karnataka

ETV Bharat / entertainment

ಶಾಕುಂತಲೆ ಸಮಂತಾ ಭಗವದ್ಗೀತೆ ಶ್ಲೋಕ ಹೇಳಿದ್ದೇಕೆ?

ನಟಿ ಸಮಂತಾ ರುತ್​ ಪ್ರಭು ಇನ್​ಸ್ಟಾದಲ್ಲಿ ಫೋಟೋ ಹಂಚಿಕೊಂಡು, ಭಗವದ್ಗೀತೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.

By

Published : Apr 18, 2023, 5:45 PM IST

Samantha
ನಟಿ ಸಮಂತಾ ರುತ್​ ಪ್ರಭು

ಪೌರಾಣಿಕ ಕಥೆ ಆಧರಿಸಿ ತೆರೆಗೆ ಬಂದ 'ಶಾಕುಂತಲಂ' ಸಿನಿಮಾ ಅಂದುಕೊಂಡಷ್ಟು ಹಿಟ್​ ಕಂಡಿಲ್ಲ. ಚಿತ್ರ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿತ್ತು. ಹೀಗಾಗಿಯೇ 'ಶಾಕುಂತಲಂ' ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ, ಲೆಕ್ಕಾಚಾರ ತಪ್ಪಾದಂತೆ ಕಾಣುತ್ತಿದೆ. ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಹೀನಾಯ ಸೋಲು ಕಂಡಿದ್ದು, ಸಮಂತಾಗೆ ಸಹಜವಾಗಿಯೇ ಬೇಸರ ಮೂಡಿಸಿದೆ. ಸದ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಭಗವದ್ಗೀತೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಸದ್ಯ ಅವರ ಈ ಪೋಸ್ಟ್​ ವೈರಲ್​ ಆಗಿದೆ. ಸಮಂತಾ ಅವರ ಬಗ್ಗೆ ಇತ್ತೀಚೆಗೆ ತೆಲುಗಿನ ನಿರ್ಮಾಪಕ ಚಿಟ್ಟಿ ಬಾಬು ಬಹಳ ಕೀಳಾಗಿ ಟೀಕಿಸಿದ್ದರು. 'ಸಮಂತಾ ಅಧ್ಯಾಯ ಮುಗೀತು' ಎಂದೆಲ್ಲಾ ಹೇಳಿದ್ದರು. ಅದಕ್ಕೆ ಪ್ರತಿ ಉತ್ತರವಾಗಿ ಈ ಪೋಸ್ಟ್​ ಅನ್ನು ಸಮಂತಾ ಅಪ್​ಲೋಡ್​ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಸಮಂತಾ ತನ್ನ ಕಾರಿನಲ್ಲಿ ಕುಳಿತು ಆಳವಾದ ಆಲೋಚನೆಯಲ್ಲಿ ಮುಳುಗಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. "ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ. ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ" ಎಂದು ಭಗವದ್ಗೀತೆ ಶ್ಲೋಕವನ್ನು ಬರೆದುಕೊಂಡಿದ್ದಾರೆ. ಅಂದರೆ, "ನೀನು ನಿನ್ನ ಕರ್ತವ್ಯವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು. ಫಲದ ಚಿಂತೆ ಮಾಡದೇ ಕರ್ತವ್ಯ ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ಕರ್ತವ್ಯ ಮಾಡದೇ ಇರುವ ವಿಚಾರ ಬಾರದೇ ಇರಲಿ" ಎಂದರ್ಥ.

ಸಂದರ್ಶನವೊಂದರಲ್ಲಿ ನಿರ್ಮಾಪಕ ಚಿಟ್ಟಿ ಬಾಬು ಸಮಂತಾ ಬಗ್ಗೆ ಟೀಕಿಸಿದ್ದರು. "ಸಮಂತಾ ಟಾಪ್​ ಹೀರೋಯಿನ್​ ಪಟ್ಟಿಯಿಂದ ಕೆಳಗೆ ಬಿದ್ದು ಯಾವುದೋ ಕಾಲವಾಗಿದೆ. ಅದಕ್ಕೆ ವಿಚ್ಛೇದನದ ನಂತರ ಪುಷ್ಪ ಸಿನಿಮಾದ ’ಊ ಅಂಟಾವ’ ಎಂಬ ಐಟಮ್​ ಸಾಂಗ್​ ಮಾಡಿದ್ದಾರೆ. ಅವರ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್​ ಪಟ್ಟವನ್ನು ಅನುಭವಿಸಿದ್ದಾರೆ. ಸ್ಟಾರ್​ ಹೀರೋಯಿನ್​ ಪಟ್ಟ ಕಳಚಿದ ನಂತರ ಯಾವುದೇ ಸಿನಿಮಾ ಆಫರ್​ ಬಂದರೂ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಹಾಗಾಗಿ ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಚೀಪ್​ ತಂತ್ರಗಳನ್ನು ಬಳಸುತ್ತಿದ್ದಾರೆ" ಎಂದೆಲ್ಲಾ ಆರೋಪಿಸಿದ್ದರು.

ವರದಿಗಳ ಪ್ರಕಾರ ಶಾಕುಂತಲಂ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್​ ಮೀರುವಲ್ಲಿಯೂ ತೊಂದರೆ ಅನುಭವಿಸುತ್ತಿದೆ. ಸಮಂತಾ ಅಭಿನಯದ ಚಿತ್ರ ನಾಲ್ಕನೇ ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಕೇವಲ 60 ಲಕ್ಷ ಗಳಿಸಿದೆ. ಭಾರತದಲ್ಲಿ ಶಾಕುಂತಲಂ ಚಿತ್ರ ಒಟ್ಟು 6.25 ಕೋಟಿ ಸಂಗ್ರಹಿಸಿದೆ. ಹೀಗಾಗಿ ಸಿನಿಮಾ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೇರಳವಾಗಿದೆ. ಚಿತ್ರವು ಸುಮಾರು 65 ಕೋಟಿ ಬಜೆಟ್​ನಲ್ಲಿ ತಯಾರಾಗಿದೆ.

ಈ ಸಿನಿಮಾದಲ್ಲಿ ಜಯದೇವ್ ಮೋಹನ್, ಮೋಹನ್ ಬಾಬು, ಪ್ರಕಾಶ್ ರಾಜ್, ಸಚಿನ್ ಖೇಡೇಕರ್, ಅದಿತಿ ಬಾಲನ್, ಜಿಶು ಸೇನ್‌ಗುಪ್ತಾ, ಮಧೂ ಮತ್ತು ಅಲ್ಲು ಅರ್ಹಾ ಅವರನ್ನೊಳಗೊಂಡಿರುವ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ದೇವ್ ಮೋಹನ್ ಜೊತೆ ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಕವಿ ಕಾಳಿದಾಸರ ಜನಪ್ರಿಯ ಭಾರತೀಯ ಶ್ರೇಷ್ಠ ನಾಟಕ ಅಭಿಜ್ಞಾನ ಶಾಕುಂತಲಂ ಆಧರಿಸಿದೆ. ಶಕುಂತಲಾ ರಾಜ ದುಷ್ಯಂತನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಧೂರ್ವಾಸ ಮುನಿಯ ಶಾಪದ ಪರಿಣಾಮವಾಗಿ ಸವಾಲುಗಳನ್ನು ಎದುರಿಸುವ ರಾಜ ದುಷ್ಯಂತ ಮತ್ತು ಶಕುಂತಲೆಯ ಹೃದಯಸ್ಪರ್ಶಿ ಪ್ರೇಮಕಥೆ ಹೊಂದಿದೆ.

ಇದನ್ನೂ ಓದಿ:ಸಮಾಜಕ್ಕೆ ಎಂತಹ ಗುಣಗಳಿರುವ ಪುರುಷರು ಬೇಕು? ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ..

ABOUT THE AUTHOR

...view details