ಕರ್ನಾಟಕ

karnataka

ETV Bharat / entertainment

ಮದುವೆಯಾದ ಬಳಿಕ ನಾಗ ಚೈತನ್ಯ ಜೊತೆ ಇದ್ದ ಮನೆಯನ್ನೇ ಖರೀದಿಸಿದ ಸಮಂತಾ! - ಸಮಂತಾ ಅವರ ಫೋಟೋಗಳು

ಪತಿಯಿಂದ ವಿಚ್ಛೇದನ, 'ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ, ಪುಷ್ಪ ಚಿತ್ರದ ಹಾಡು ಸೇರಿದಂತೆ ನೆಟಿಜನ್​ಗಳ ಗಮನ ಸೆಳೆದಿದ್ದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಇದೀಗ ಮಗದೊಂದು ಸುದ್ದಿಯಿಂದ ಸದ್ದು ಮಾಡುತ್ತಿದ್ದಾರೆ. ಏನದು?

Samantha paid higher price to purchase apartment where she lived with Naga Chaitanya- deets inside
ನಟಿ ಸಮಂತಾ ರುತ್ ಪ್ರಭು

By

Published : Jul 29, 2022, 6:35 PM IST

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮೊದಲಿಗೆ ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಬಳಿಕ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್'ನಲ್ಲಿ 'ಊ ಅಂಟವಾ ಮಾಮ'... 'ಊ ಊ ಅಂಟವಾ ಮಾಮ' ಹಾಡಿನಲ್ಲಿ ಸೊಂಟ ಬಳುಕಿಸುವ ಮೂಲಕ ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸಿದ್ದರು. ಆ ಬಳಿಕ ಆಗಾಗಾ ತಮ್ಮ ಬೋಲ್ಡ್​ ಮತ್ತು ಮಾದಕ ಫೋಟೋಗಳನ್ನು ಇನ್​​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿ ನೆಟಿಜನ್ಸ್​ಗಳ ಮನ ಕಲಕಿದ್ದರು.

ನಟಿ ಸಮಂತಾ ರುತ್ ಪ್ರಭು

ಈ ರೀತಿಯ ಚಟುವಟಿಕೆಯಿಂದ ಗಮನ ಸೆಳೆಯುತ್ತಿರುವ ತಾರೆ, ಇದೀಗ ಮಗದೊಂದು ಸುದ್ದಿಯಿಂದ ಸದ್ದು ಮಾಡುತ್ತಿದ್ದಾರೆ. ಹೌದು, ನಾಗ ಚೈತನ್ಯ ಜೊತೆ ಮದುವೆಯಾದ ಬಳಿಕ ವಾಸಿಸುತ್ತಿದ್ದ ದುಬಾರಿ ಮನೆಯನ್ನೇ ಮತ್ತೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸುದ್ದಿ ಇದೀಗ ಸದ್ದು ಮಾಡುತ್ತಿದೆ.

ನಟಿ ಸಮಂತಾ ರುತ್ ಪ್ರಭು

ಮಾದ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹಿರಿಯ ಟಾಲಿವುಡ್​ ನಟ, ರಿಯಾಲ್ಟರ್ ಕೂಡ ಆಗಿರುವ ಮುರಳಿ ಮೋಹನ್, ಮದುವೆಯಾದ ನಂತರ ದಂಪತಿ ಇಲ್ಲಿಯೇ ತಂಗಿದ್ದರು. ಆದರೆ, ವಿಚ್ಛೇದನದ ಬಳಿಕ ಈ ಮನೆಯನ್ನು ಕೆಲವು ಷರತ್ತುಗಳೊಂದಿಗೆ ಮಾರಾಟ ಮಾಡಿ ಅವರವರ ದಾರಿ ಹಿಡಿದಿದ್ದರು.

ಮಾಜಿ ಪತಿ ನಾಗ ಚೈತನ್ ಜೊತೆ ಸಮಂತಾ (ಸಂಗ್ರಹ ಚಿತ್ರ)

ಆದರೆ, ಹೊಂದಿಕೊಂಡಿದ್ದ ಈ ಮನೆಯನ್ನು ಕಳೆದುಕೊಂಡಿರುವುದಕ್ಕೆ ಸಮಂತಾ ಅವರಿಗೆ ಪಶ್ಚಾತಾಪ ಕಾಡುತ್ತಲೇ ಇತ್ತಂತೆ. ಅಲ್ಲದೇ ಸುಸಜ್ಜಿತ ಮನೆಗಾಗಿ ಅವರು ತೊಳಲಾಡುತ್ತಿದ್ದರಂತೆ. ಆದರೆ, ಪುನಃ ಖರೀದಿ ಮಾಡಲು ಮನಸ್ಸು ಮಾಡಿದ ಅವರು ತಾವು ದುಡಿದ ಅಷ್ಟು - ಇಷ್ಟು ಹಣವನ್ನು ಸೇರಿಸಿ ಮತ್ತೆ ತಮ್ಮದಾಗಿಸಿಕೊಂಡಿದ್ದಾರೆ. ಕಳೆದುಕೊಂಡಿದ್ದ ಸಂತೋಷವನ್ನು ಇದೀಗ ಅದೇ ಮನೆಯಲ್ಲಿ ತಮ್ಮ ತಾಯಿಯೊಂದಿಗೆ ಅದೇ ಅಪಾರ್ಟ್​ಮೆಂಟ್​ನಲ್ಲೇ ಮತ್ತೆ ಪಡೆದುಕೊಳ್ಳುತ್ತಾರೆ ಎಂದು ಮುರಳಿ ಮೋಹನ್ ಅವರು ಹೇಳಿಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು

ಇದನ್ನೂ ಓದಿ:'ಲೈಗರ್' ಸಿನಿಮಾದ ಥೀಮ್ ಸಾಂಗ್ ಅನಾವರಣ: ವಿಜಯ್ ದೇವರಕೊಂಡ ಮಾಸ್ ಡೈಲಾಗ್​ಗೆ ನೆಟಿಜನ್ಸ್​ ಫಿದಾ


ABOUT THE AUTHOR

...view details